ಕನ್ನಡಪ್ರಭ ವಾರ್ತೆ ಕಲಬುರಗಿ
ಏಕೆಂದರೆ ಲುಂಬಿಣಿ ಗಾರ್ಡನ್ ಅಪಮಾನಕ್ಕೊಳಗಾದಂತಹ ಅಂಬೇಡ್ಕರ್ ಪುತ್ಥಳಿ ಬಳಿಯೇ ಪುಟ್ಟದಾದ ಕಾಗದ ಚೀಟಿಯೊಂದು ಪತ್ತೆಯಾಗಿ ಕುತೂಹಲ ಮೂಡಿಸಿದೆ.
ಈ ಕಾಗದದ ಪುಟ್ಟದಾದ ಚೀಟಿ, ಅದರಲ್ಲಿ ಪಾಣೆಗಾಂವ್ 3, ನದಿ ಸಿನ್ನೂರಿನ ನಾಲ್ವರು ಯುವಕರ (ಹುಡುಗರ) ಹೆಸರಿದೆ, ಜೊತೆಗೆ ಇವರೇ ಸೂಚಿಸಿದ್ದರಿಂದ ಈ ಕೃತ್ಯ ಮಾಡಿದ್ದೇವೆ. ಇವರು ಹಣ ಕೊಡೋದಾಗಿ ಆಮಿಷ ತೋರಿಸಿದ್ದಾರೆಂಬ ಸಾಲುಗಳು ಕಂಡು ಬಂದಿದ್ದು ಸದ್ಯ ಈ ಕಾಗದದ ಚೀಟಿ ಪೊಲೀಸರ ಗಮನ ಸೆಳೆದಿವೆ.ಅಪಮಾನದ ಪ್ರಕರಣಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಬಂದಾಗ ಈ ಚೀಟಿ ಅವರ ಗಮನ ಸೆಳೆದಿದೆ. ಮೂಲಗಳ ಪ್ರಕಾರ ಚೀಟಿ ಪೊಲೀಸರ ಕೈ ಸೋರಿದೆ. ಪೊಲೀಸರು ಪ್ರಕರಣದ ತನಖೆ ಎಲ್ಲಾ ನಿಟ್ಟಿನಲ್ಲಿಯೂ ನಡೆಸೋದಾಗಿ ಹೇಳಿದ್ದಾರೆಂದು ಗೊತ್ತಾಗಿದೆ.
ಲುಂಬಿಣಿ ವನದಲ್ಲಿರುವ ಅಂಬೇಡ್ಕರ್ ಪ್ರತಿಮೆ ಅಪಮಾನದ ಪ್ರಕರಣದ ಕೇಸ್ ದಾಖಲಾಗಿದ್ದು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಇಲ್ಲಿ ಕಂಡಿರುವ ಚೀಟಿ, ಇತರೆ ಸಾಕ್ಷಾಧ್ಯಾರಗಳನ್ನೆಲ್ಲ ಅದಾಗಲೇ ಕಲೆ ಹಾಕಿರುವ ಪೊಲೀಸರ ತನಿಖೆಯಿಂದಲೇ ಈ ಪ್ರಕರಣದ ಹಿಂದಡಗಿರುವ ವಿಷಯಗಳು ಹೊರಬರಬೇಕಷ್ಟೆ.