ಶೀರೂರು ಮಠದ ಭಾವಿ ಪರ್ಯಾಯೋತ್ಸವವದ ಸಿದ್ದತಾ ಸಭೆ

KannadaprabhaNewsNetwork |  
Published : Oct 10, 2025, 01:01 AM IST
09ಶಿರೂರು | Kannada Prabha

ಸಾರಾಂಶ

ಪರ್ಯಾಯೋತ್ಸವದ ಪೂರ್ವಬಾವೀ ಹೊರಕಾಣಿಕೆ - ಸಾಂಸ್ಕೃತಿಕ ಹಾಗೂ ಪ್ರಚಾರ ಸಮಿತಿಗಳ ಸಭೆಯನ್ನು ಉದ್ದೇಶಿಸಿ ಭಾವೀ ಪರ್ಯಾಯ ಶಿರೂರು ಮಠದ ದಿವಾನ ಡಾ.ಉದಯಕುಮಾರ ಸರಳತ್ತಾಯ ಮಾತಾಡಿದರು.

ಉಡುಪಿ: ಭಗವಾನ್ ಕೃಷ್ಣ ಎಲ್ಲರ ಮನೆಮನದ ಮಗು. ಎಲ್ಲರಿಗೂ ಆಪ್ತ. ಆತನಿಗೆ ಸಮರ್ಪಿಸುವ ಎಲ್ಲಾ ಕಾಣಿಕೆ ಎಲ್ಲೂ ಹೋಗದೆ ಮನೆಯ ಮಗುವಿನ ಏಳ್ಗೆಗೆ ಕಾರಣವಾಗುತ್ತದೆ. ಹೊರೆಕಾಣಿಕೆಯೂ ಇದಕ್ಕೆ ಹೊರತಾಗಿಲ್ಲ. ಶೀರೂರು ಪರ್ಯಾಯ ಅದು ಭಕ್ತರ ಪರ್ಯಾಯ, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಭಾವೀ ಪರ್ಯಾಯ ಶಿರೂರು ಮಠದ ದಿವಾನ ಡಾ.ಉದಯಕುಮಾರ ಸರಳತ್ತಾಯ ಹೇಳಿದರು.ಅವರು ಪರ್ಯಾಯೋತ್ಸವದ ಪೂರ್ವಬಾವೀ ಹೊರಕಾಣಿಕೆ - ಸಾಂಸ್ಕೃತಿಕ ಹಾಗೂ ಪ್ರಚಾರ ಸಮಿತಿಗಳ ಸಭೆಯನ್ನು ಉದ್ದೇಶಿಸಿ ಮಾತಾಡಿದರು.

ಉದ್ಯಮಿ ರಮೇಶ ಬಂಗೇರ ಅವರು ಉಡುಪಿಯ ಕೃಷ್ಣನದ್ದು ಬಾಲರೂಪ. ಶೀರೂರು ಮಠಾಧೀಶರು ಅದೇ ವಯೋಮಾನದವರು. ಶೀರೂರು ಮಠವೆಂದರೆ ಹಿಂದಿನಿಂದಲೂ ಉಡುಪಿಯ ಜನತೆಗೆ ಅಚ್ಚುಮೆಚ್ಚು. ಪರ್ಯಾಯವನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶಪಾಲ್ ಸುವರ್ಣ ಸರ್ವರ ಸಹಕಾರ ಕೋರಿದರು. ಸಭೆಯನ್ನು ಉದ್ದೇಶಿಸಿ ಪ್ರಮುಖರಾದ ಮಟ್ಟಾರ್ ರತ್ನಾಕರ ಹೆಗ್ಡೆ ,ರಮೇಶ್ ಕಾಂಚನ್, ಜಯಪ್ರಕಾಶ ಕೆದ್ಲಾಯ, ಗೋಪಾಲಕೃಷ್ಣ ಅಸ್ರಣ್ಣ, ಡಾ. ವಿಜಯೇಂದ್ರ ರಾವ್ ಮೊದಲಾದವರು ಮಾತಾಡಿದರು.ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಚಾರ ಸಿದ್ಧತೆಯ ಕುರಿತಾಗಿಯೂ ಚರ್ಚಿಸಲಾಯಿತು. ಅಶ್ವತ್ಥ ಭಾರದ್ವಾಜ್ ಸ್ವಾಗತಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ