ಇಂದಾವರ ಗ್ರಾಮದ ಸಮೀಪದ ಕಸ ವಿಲೇವಾರಿ ಘಟಕದಲ್ಲಿ ಸಾವಯವ ಗೊಬ್ಬರ ಮಾರಾಟಕ್ಕೆ ಚಾಲನೆ
ನಗರದಲ್ಲಿ ಸಂಗ್ರಹಿಸಲಾಗುತ್ತಿರುವ ಮನೆ ಮನೆ ಕಸದಿಂದ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡಲಾಗುತ್ತಿದೆ ಎಂದು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಹೇಳಿದರು.
ಇಂದಾವರ ಗ್ರಾಮದ ಸಮೀಪದ ಕಸ ವಿಲೇವಾರಿ ಘಟಕದಲ್ಲಿ ಗುರುವಾರ ಸಾವಯವ ಗೊಬ್ಬರ ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೆಜಿಗೆ 2 ರು.ಗಳಂತೆ ಗೊಬ್ಬರ ಮಾರಾಟ ಮಾಡಲಾಗುತ್ತಿದೆ ಎಂದರು.ಟನ್‌ಗಟ್ಟಲೇ ಸಂಗ್ರಹಿಸುವ ಕಸವನ್ನು ವಿಲೇವಾರಿ ಘಟಕದಲ್ಲಿ ಪ್ಲಾಸ್ಟಿಕ್‌ನಿಂದ ಬೇರ್ಪಡಿಸಿ ಟ್ರಾಮರ್ ಯಂತ್ರದ ಸಹಾಯ ದಿಂದ ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಅಂತಿಮ ಹಂತದಲ್ಲಿ ಸಾವಯವ ಗೊಬ್ಬರ ತಯಾರಿಕೆಯಾಗಲಿದೆ. ಪ್ರಸ್ತುತ 75 ಟನ್‌ಗಳಷ್ಟು ಗೊಬ್ಬರ ಮಾರಾಟಕ್ಕೆ ಸಿದ್ಧವಾಗಿ ರೈತರು, ಬೆಳೆಗಾರರಿಗೆ ಹರಾಜು ಮೂಲಕ ವಿತರಿಸ ಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ತೇಜಸ್ವಿನಿ, ಹಿರಿಯ ಆರೋಗ್ಯ ನಿರೀಕ್ಷಕರಾದ ಈಶ್ವರಪ್ಪ, ವೆಂಕಟೇಶ್, ಮಾಡ್ಲ ಪ್ರಕಾಶ್, ಮಲ್ಲೇಶ್ ಹಾಗೂ ನಗರಸಭೆ ಸಿಬ್ಬಂದಿ ಹಾಜರಿದ್ದರು. 4 ಕೆಸಿಕೆಎಂ 2ಇಂದಾವರ ಗ್ರಾಮದ ಸಮೀಪದ ಕಸ ವಿಲೇವಾರಿ ಘಟಕದಲ್ಲಿ ಗುರುವಾರ ಸಾವಯವ ಗೊಬ್ಬರ ಮಾರಾಟಕ್ಕೆ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಚಾಲನೆ ನೀಡಿದರು. ಪೌರಾಯುಕ್ತ ಬಸವರಾಜ್, ತೇಜಸ್ವಿನಿ, ವೆಂಕಟೇಶ್, ಮಾಡ್ಲ ಪ್ರಕಾಶ್ ಇದ್ದರು.