ಬೆಂಗಳೂರು ನಗರದ ವಿವಿಧೆಡೆ ಅದ್ಧೂರಿ ದಸರಾಗೆ ಸಿದ್ಧತೆ

KannadaprabhaNewsNetwork |  
Published : Oct 03, 2024, 01:28 AM IST
Durga devi 6 | Kannada Prabha

ಸಾರಾಂಶ

ನವರಾತ್ರಿ ಉತ್ಸವಕ್ಕೆ ಸಿಲಿಕಾನ್ ಸಿಟಿ ಸಿದ್ಧಗೊಂಡಿದ್ದು, ನಗರದ ವಿವಿಧ ದೇವಿ ದೇವಾಲಯಗಳಲ್ಲಿ ಗುರುವಾರ (ಅ.3) ವಿಶೇಷ ಪೂಜೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನವರಾತ್ರಿ ಉತ್ಸವಕ್ಕೆ ಸಿಲಿಕಾನ್ ಸಿಟಿ ಸಿದ್ಧಗೊಂಡಿದ್ದು, ನಗರದ ವಿವಿಧ ದೇವಿ ದೇವಾಲಯಗಳಲ್ಲಿ ಗುರುವಾರ (ಅ.3) ವಿಶೇಷ ಪೂಜೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲಿವೆ.

ಶಿವಾಜಿನಗರ, ಮಠದಹಳ್ಳಿ, ಮೋತಿನಗರ, ಗಂಗೇನಹಳ್ಳಿ, ಸುಲ್ತಾನ್‌ಪಾಳ್ಯ, ದಿಣ್ಣೂರು ಗ್ರಾಮಗಳು ದಸರಾ ಉತ್ಸವ ಆಚರಣೆಗೆ ಸಕಲ ಸಿದ್ದತೆ ನಡೆಸಿವೆ. ಜೆ.ಸಿ.ನಗರ, ಕಾವಲ್‌ ಭೈರಸಂದ್ರ, ಹೆಬ್ಬಾಳ, ವಸಂತನಗರ, ರಾಜಮಹಲ್‌, ಗುಟ್ಟಹಳ್ಳಿ, ಯಶವಂತಪುರ, ಹೆಬ್ಬಾಳ, ಗಂಗಾನಗರ, ಲಕ್ಷ್ಮಿದೇವಮ್ಮ ಬ್ಲಾಕ್‌ ಸೇರಿದಂತೆ ನಗರದ ವಿವಿಧ ಕಡೆಯಲ್ಲಿ ಶಕ್ತಿದೇವತೆಗಳನ್ನು ವಿಶೇಷ ಮೆರವಣಿಗೆಗಳ ಮೂಲಕ ಪ್ರತಿಷ್ಠಾಪಿಸಲಾಗುತ್ತಿದೆ.

ನಗರದ ಮೆಜೆಸ್ಟಿಕ್‌ ಸಮೀಪದ ಅಣ್ಣಮ್ಮ ದೇವಾಲಯ, ಶೇಷಾದ್ರಿಪುರ ಮಹಾಲಕ್ಷ್ಮಿ ದೇವಾಲಯ, ಆರ್‌.ಟಿ. ಮಿಲ್‌ನ ಬಂಡಿಕಾಳಮ್ಮ, ಮಲ್ಲೇಶ್ವರದ ಕನ್ನಿಕಾ ಪರಮೇಶ್ವರಿ ದೇವಾಲಯ, ಶಂಕರ ಮಠದ ಶಾರದಾ ದೇವಿ ದೇವಾಲಯ, ಮುತ್ಯಾಲ ನಗರದ ಮುತ್ಯಾಲಮ್ಮ ದೇವಿ ದೇವಾಲಯ, ಮತ್ತಿಕೆರೆಯ ಶ್ರೀ ಚೌಡೇಶ್ವರಿ ದೇವಾಲಯ, ಬಾಣಸವಾಡಿ ಲಕ್ಷ್ಮಮ್ಮ ದೇವಾಸ್ಥಾನ, ಸುಬ್ರಹ್ಮಣ್ಯಪುರ ಶ್ರೀ ಮಹಾ ಪ್ರತ್ಯಾಂಗರಿ ದೇವಿ ದೇವಸ್ಥಾನ, ಮಲ್ಲೇಶ್ವರದ ಕೊದಂಡಪುರ ಗಂಗಮ್ಮ ದೇವಿ ದೇವಾಲಯ, ಆರ್‌.ಆರ್‌. ನಗರದ ಶ್ರೀ ನಿಮಿಷಾಂಭ ದೇವಿ ದೇವಸ್ಥಾನ, ಬಸವನಗುಡಿ ಸಮೀಪದ ಪಟಾಲಮ್ಮ ದೇವಿ ದೇವಾಲಯ, ತ್ಯಾಗರಾಜ ನಗರದ ಪ್ಲೇಗ್‌ ಅಮ್ಮ ದೇವಾಲಯ, ಮಲ್ಲೇಶ್ವರದ ಸರ್ಕಲ್‌ ಮಾರಮ್ಮ ದೇವಾಲಯ, ಗಂಗಮ್ಮ ದೇವಾಲಯ, ವಿವಿಪುರಂನ ವಾಸವಿ ದೇವಿ ದೇವಾಲಯಗಳಲ್ಲಿ ಒಂಬತ್ತು ದಿನಗಳು (ಅ.3ರಿಂದ 11ವರೆಗೆ) ದೇವಿಯರಿಗೆ ಸೀರೆ ಅಲಂಕಾರಿಕ, ಬಣ್ಣದ ಅಲಂಕಾರ, ಹೋಮ ಹಾಗೂ ವಿಶೇಷ ಪೂಜೆ ಸಲ್ಲಿಸಲಾಗುವುದು.

ಬೊಂಬೆ ಹಬ್ಬವೂ ಆಗಿರುವುದರಿಂದ ಜಯನಗರದ, ರಾಜಾಜಿನಗರ, ಮಲ್ಲೇಶ್ವರ, ಬಸವನಗುಡಿ ಸೇರಿದಂತೆ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ನಾನಾ ಬಗೆಯ ದಸರಾ ಗೊಂಬೆಗಳನ್ನು ಮಾರಾಟ ಮಾಡಲಾಗುತ್ತಿದೆ. ಮರದ ಗೊಂಬೆಗಳು, ಆಟಿಕೆ ಗೊಂಬೆಗಳು, ಮರದ ಅರಮನೆ, ಸ್ತ್ರೀ ಗೊಂಬೆಗಳು, ಹತ್ತಾರು ದೇವರ ಮೂರ್ತಿಗಳು, ಗೋಡೆ ಚಿತ್ರಗಳು ಸೇರಿದಂತೆ ಅಲಂಕಾರಿಕ ವಸ್ತುಗಳನ್ನು ಕಾಣಬಹುದು.

ವಿಷ್ಣುಮೂರ್ತಿ, ಕೃಷ್ಣ ಲೀಲೆ, ಪಕ್ಷಿ ಗೊಂಬೆಗಳು, ಗ್ರಾಮೀಣ ಸೊಬಗು, ದಸರಾ ಜಂಬೂಸವಾರಿ, ಆನೆಗಳು, ವಿಷ್ಣು ದಶಾವತಾರ, ಶ್ರೀರಾಮ ಪರಿವಾರ, ಶಿವ ಪರಿವಾರ, ಕೃಷ್ಣ ಬೃಂದಾವನ, ಶಿವ ಪಾರ್ವತಿ ಕಲ್ಯಾಣ, ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ಬಿಂಬಿಸುವ ಗೊಂಬೆಗಳು ಮಾರುಕಟ್ಟೆಯಲ್ಲಿ ನಗರವಾಸಿಗಳ ಕಣ್ಮನ ಸೆಳೆಯುತ್ತಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ