ಯಲ್ಲಾಪುರದ ದತ್ತಮಂದಿರ ಮಹೋತ್ಸವದ ಸಿದ್ಧತೆ ಪೂರ್ಣ

KannadaprabhaNewsNetwork |  
Published : Dec 13, 2024, 12:48 AM IST
ಫೋಟೋ ಡಿ.೧೨ ವೈ.ಎಲ್.ಪಿ. ೦೫ | Kannada Prabha

ಸಾರಾಂಶ

ಇಂದಿನಿಂದ(ಡಿ. 13) ಗುರುಚರಿತ್ರೆ ಪಾರಾಯಣ ಅಲ್ಲದೇ, ಗೋಕರ್ಣದ ಹಿರಿಯ ಗಂಗೆ ಪ್ರಧಾನ ಆಚಾರ್ಯತ್ವದಲ್ಲಿ ೧೫ ಪುರೋಹಿತರು ಪ್ರತಿಷ್ಠಾ ಮಹೋತ್ಸವದಲ್ಲಿ ೩ ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮವನ್ನು ನಡೆಸಿಕೊಡುವರು.

ಯಲ್ಲಾಪುರ: ಪಟ್ಟಣದ ನಾಯಕನಕೆರೆಯ ನೂತನ ಶಿಲಾಮಯ ದತ್ತಮಂದಿರ ಪ್ರತಿಷ್ಠಾ ಮಹೋತ್ಸವದ ಸಿದ್ಧತೆ ಪೂರ್ಣಗೊಂಡಿದೆ.

ಇಂದಿನಿಂದ(ಡಿ. 13) ಗುರುಚರಿತ್ರೆ ಪಾರಾಯಣ ಅಲ್ಲದೇ, ಗೋಕರ್ಣದ ಹಿರಿಯ ಗಂಗೆ ಪ್ರಧಾನ ಆಚಾರ್ಯತ್ವದಲ್ಲಿ ೧೫ ಪುರೋಹಿತರು ಪ್ರತಿಷ್ಠಾ ಮಹೋತ್ಸವದಲ್ಲಿ ೩ ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮವನ್ನು ನಡೆಸಿಕೊಡುವರು ಎಂದು ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿದಿನ ತ್ರಿಕಾಲದಲ್ಲಿಯೂ ಸಾರ್ವಜನಿಕರಿಗೆ ಭೋಜನ, ಉಪಾಹಾರ, ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.ಕಾರ್ಯಕ್ರಮ ಸಮಿತಿ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಯಲ್ಲಾಪುರ ಪ್ರವಾಸೋದ್ಯಮಕ್ಕೆ ಪ್ರಸಿದ್ಧಿ ಪಡೆದಿದೆ. ಅಂತೆಯೇ ಮಂದಿರ ಕೂಡಾ ಸಾಕಷ್ಟು ಭವ್ಯವಾಗಿ ನಿರ್ಮಾಣಗೊಂಡಿದೆ. ಇದೊಂದು ಪ್ರವಾಸೋದ್ಯಮ ಧಾರ್ಮಿಕ ಶ್ರದ್ಧಾಕೇಂದ್ರವಾಗಿ ರೂಪುಗೊಳ್ಳಲಿದೆ ಎಂದರು. ಪ್ರಚಾರ ಸಮಿತಿಯ ಅಧ್ಯಕ್ಷ ನಾಗರಾಜ ಮದ್ಗುಣಿ ಮಾತನಾಡಿದರು. ಪ್ರಮುಖರಾದ ಮಹೇಶ ಚಟ್ನಳ್ಳಿ, ರಾಮಚಂದ್ರ ಚಿಕ್ಯಾನಮನೆ, ರಮೇಶ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ವಾರ್ಷಿಕೋತ್ಸವ ಪ್ರಯುಕ್ತ ಯಕ್ಷಗಾನ ಪ್ರದರ್ಶನ

ಯಲ್ಲಾಪುರ: ತಾಲೂಕಿನ ಮಾವಿನಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ. ೧೪ರಂದು ಶಾರದಾ ಪೂಜೆ ಹಾಗೂ ವಾರ್ಷಿಕೋತ್ಸವ ಪ್ರಯುಕ್ತ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಗ್ಗೆ ೧೦ ಗಂಟೆಗೆ ಶಾರದಾಪೂಜೆ ನಡೆಯಲಿದೆ. ಸಂಜೆ ೬.೩೦ರಿಂದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮವಿದೆ. ರಾತ್ರಿ ೮.೩೦ಕ್ಕೆ ಸಭಾ ಕಾರ್ಯಕ್ರಮವನ್ನು ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸುವರು. ಎಸ್‌ಡಿಎಂಸಿ ಅಧ್ಯಕ್ಷ ಅನಂತ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಗ್ರಾಪಂ ಅಧ್ಯಕ್ಷ ಸುಬ್ಬಣ್ಣ ಕುಂಟೆಗುಳಿ, ಸದಸ್ಯ ಮಾಚಣ್ಣ ಹಲಗುಮನೆ, ಸಹಕಾರಿ ಸಂಘದ ಅಧ್ಯಕ್ಷ ಸುಬ್ಬಣ್ಣ ಬೋಳ್ಮನೆ, ಡಿಡಿಪಿಐ ಪಾರಿ ಬಸವರಾಜ, ಬಿಇಒ ಎನ್.ಆರ್. ಹೆಗಡೆ ಇತರರು ಪಾಲ್ಗೊಳ್ಳುವರು. ನಂತರ ಕರ್ನಾಟಕ ಕಲಾ ಸನ್ನಿಧಿ ತೇಲಂಗಾರ ಸಂಯೋಜನೆಯಲ್ಲಿ ಕವಿರತ್ನ ಕಾಳಿದಾಸ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...