ಚಳ್ಳಕೆರೆಯಲ್ಲಿ ಅದ್ಧೂರಿ ಹಿಂದೂಮಹಾಗಣಪತಿ ಉತ್ಸವಕ್ಕೆ ಸಿದ್ಧತೆ

KannadaprabhaNewsNetwork |  
Published : Aug 23, 2026, 02:00 AM IST
ಬಾಟಂ | Kannada Prabha

ಸಾರಾಂಶ

ಚಳ್ಳಕೆರೆನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ ಸಹಯೋಗದಲ್ಲಿ8ನೇ ವರ್ಷದ ಹಿಂದೂ ಮಹಾಗಣಪತಿ ಮಹೋತ್ಸವ ಸೆ.14ರಿಂದ 24 ರವರೆಗೂ ನಡೆಯಲಿದೆ ಎಂದು ವಿಶ್ವಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಕೆ.ಎಂ. ಯತೀಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ ಸಹಯೋಗದಲ್ಲಿ

8ನೇ ವರ್ಷದ ಹಿಂದೂ ಮಹಾಗಣಪತಿ ಮಹೋತ್ಸವ ಸೆ.14ರಿಂದ 24 ರವರೆಗೂ ನಡೆಯಲಿದೆ ಎಂದು ವಿಶ್ವಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಕೆ.ಎಂ. ಯತೀಶ್ ಹೇಳಿದರು.

ನಗರದ ರೋಟರಿ ಕ್ಲಬ್ ನಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ನಂತರ ಗ್ರಾಮ ದೇವತೆ ಚಳ್ಳಕೆರೆಯಮ್ಮ ದೇವಸ್ಥಾನದಲ್ಲಿ ಉತ್ಸವದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.

ಸೆ.14ರಂದು ಹಿಂದೂ ಮಹಾಗಣಪತಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ನಡೆಯುವುದು, 24ರಂದು ಬೃಹತ್ ಶೋಭಯಾತ್ರೆಯೊಂದಿಗೆ ವಿಸರ್ಜನೆ ನಡೆಯಲಿದೆ. ಶೋಭಾಯಾತ್ರೆಯು ನಗರದ ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲು ಸಭೆ ನಿರ್ಧರಿಸಿದೆ ಎಂದರು.

ಬಾಳೆಮಂಡಿ ರಾಮದಾಸ್ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಅದ್ಧೂರಿ ಹಿಂದೂ ಮಹಾಗಣಪತಿ ಉತ್ಸವ ಆಚರಣೆಗೆ ಸಕಲ ಸಿದ್ಧತೆ ನಡೆಸಲಾಗಿದೆ. ಗ್ರಾಮ ದೇವತೆ ಚಳ್ಳಕೆರೆಯಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಿದ್ಯುಕ್ತವಾಗಿ ಚಾಲನೆ ದೊರಕಿದೆ.

14ರಂದು ವಿಶೇಷ ಪೂಜೆಯೊಂದಿಗೆ ಪ್ರತಿಷ್ಠಾಪನೆ ಮಾಡಲಾಗುವುದು. 11 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳ ಮೂಲಕ ಉತ್ಸವ ವಿಜೃಂಭಣೆಯಿಂದ ನಡೆಯುವುದು ಎಂದರು.

ಹಿಂದೂ ಮಹಾಗಣಪತಿ ಉತ್ಸವ -2026ರ ಸಮಿತಿ ಅಧ್ಯಕ್ಷರಾಗಿ ಟಿ.ಮಂಜುನಾಥ್, ಕಾರ್ಯದರ್ಶಿ ಬಾಲಕೃಷ್ಣ, ಖಜಾಂಚಿ ಗಂಗಾಧರ್, ಶೋಭಾಯಾತ್ರೆ, ವಿಸರ್ಜನ ಸಮಿತಿ ಅಧ್ಯಕ್ಷರಾಗಿ ಬೇಕರಿ ಮಂಜುನಾಥ ಅವರನ್ನು ನೇಮಕ ಮಾಡಲಾಯಿತು.

ಸಭೆಯಲ್ಲಿ ಡಾ.ಡಿ.ಎನ್.ಮಂಜುನಾಥ, ಸೋಮಶೇಖರ ಮಂಡಿಮಠ, ಜೆ.ಪಿ. ಜಯಪಾಲಯ್ಯ, ಜೆಡಿಎಸ್ ಅಧ್ಯಕ್ಷ ಪಿ. ತಿಪ್ಪೇಸ್ವಾಮಿ, ಸಿ. ಶ್ರೀನಿವಾಸ್, ಕರವೇ ಅಧ್ಯಕ್ಷ ಪಿ. ಮಂಜುನಾಥ, ಪ್ರಸನ್ನ, ವೆಂಕಟೇಶ್, ಉಮೇಶ್, ಸಿದ್ದರಸ್, ಚಿದಾನಂದ, ಪ್ರಕಾಶ್, ಈರಣ್ಣಸ್ವಾಮಿ, ಮಹಾಂತೇಶ್, ದರ್ಶನ್, ಕೀರ್ತಿ, ಜಗದಾಂಭ, ಶಕುಂತಲ, ಅಂಬಿಕಾ, ದಯಾನಂದ, ಕುಮಾರ್, ಕುಶಾಲ್, ಗುರುಸಿದ್ದೇಶ್, ಈಶ್ವರನಾಯಕ, ಚಿದಾನಂದ, ಮನೀಶ್ ಮುಂತಾದವರು ಇದ್ದರು.ಪೋಟೋ :- ಚಳ್ಳಕೆರೆ ನಗರದ ರೋಟರಿ ಕ್ಲಬ್ ನಲ್ಲಿ ಹಿಂದೂ ಮಹಾಗಣಪತಿ ಉತ್ಸವದ ಪೂರ್ವಬಾವಿ ಸಭೆ ನಡೆಯಿತು. ಪೋಟೋ :- ಚಳ್ಳಕೆರೆ ನಗರದ ಗ್ರಾಮದೇವತೆ ಚಳ್ಳಕೆರೆಯಮ್ಮ ದೇವಸ್ಥಾನದಲ್ಲಿ ಹಿಂದೂ ಮಹಾಗಣಪತಿ ಉತ್ಸವದ ಕರಪತ್ರ ಬಿಡುಗಡೆಗೊಳಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಮಿಳುನಾಡಿಗೆ 24 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಖಂಡಿಸಿ ಪಂಜಿನ ಮೆರವಣಿಗೆ
ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದ ಡಿ.ದೇವರಾಜ ಅರಸು: ಡಾ.ಬಿರಾದಾರ