ಕನ್ನಡಪ್ರಭ ವಾರ್ತೆ ಮೇಲುಕೋಟೆ
ವ್ಯವಸ್ಥಾನ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಮಾಹಿತಿ ನೀಡಿ ಮಾತನಾಡಿದ ಅವರು, ಬ್ರಹ್ಮೋತ್ಸವದ ಪ್ರಮುಖ ಉತ್ಸವವಾದ ಮಾರ್ಚ್ 28ರ ರಾತ್ರಿ ನಡೆಯುವ ವೈರಮುಡಿ ಕಿರೀಟಧಾರಣ ಮಹೋತ್ಸವ, ಮಾರ್ಚ್ 31ರ ಮಹಾರಥೋತ್ಸವ ಹಾಗೂ ಏ.1ರಂದು ರಾತ್ರಿ ಕಲ್ಯಾಣಿಯಲ್ಲಿ ನಡೆಯುವ ತೆಪ್ಪೋತ್ಸವವನ್ನು ವಿಶೇಷವಾಗಿ ಆಚರಣೆ ಹಾಗೂ ಆಕರ್ಷಕ ದೀಪಾಲಂಕಾರ ಹಾಗೂ ಪುಷ್ಪಾಲಂಕಾರ ಮಾಡಲಾಗುತ್ತದೆ ಎಂದರು.
ಚೆಲುವನಾರಾಯಣಸ್ವಾಮಿಯವರ ಉತ್ಸವ ನಡೆಯುವ ಬೀದಿಗಳ ಎರಡೂ ಕಡೆಗಳಲ್ಲಿ ಉದ್ದಕ್ಕೂ ತೆರೆದ ಚರಂಡಿಗಳಿವೆ. ಇದನ್ನು ಮುಚ್ಚಲು ಕ್ರಮವಹಿಸಿದ್ದೇವೆ. ಭಕ್ತರು ಪುಷ್ಪಾಲಂಕಾರ, ಪ್ರಸಾದ, ದೀಪಾಲಂಕಾರ ಸೇರಿದಂತೆ ಯಾವುದೇ ಸೇವೆಗಳನ್ನು ಮಾಡಬಹುದು. ಸೇವಾರ್ಥದಾರರ ಹೆಸರನ್ನು ವೈರಮುಡಿ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸುವ ಜೊತೆಗೆ ವಿಶೇಷ ಗೌರವ ಸಮರ್ಪಣೆ ಮಾಡಲಾಗುತ್ತದೆ ಎಂದು ತಿಳಿಸಿದರು.ಪ್ರತಿವರ್ಷ ಬ್ರಹ್ಮೋತ್ಸವದಲ್ಲಿ ಮಾಡುತ್ತಿದ್ದ ದೀಪಾಲಂಕಾರವನ್ನು ಬದಲಾಯಿಸಿ ಆಕರ್ಷಕವಾಗಿ ದೀಪಾಲಂಕಾರ ಮಾಡಲಾಗುತ್ತದೆ. ಕಲ್ಯಾಣಿ, ಬೆಟ್ಟ ಹಾಗೂ ರಾಜಬೀದಿ ಸ್ಮಾರಕಗಳಿಗೆ ನಯನ ಮನೋಹರ ದೀಪಾಲಂಕಾರ ಮಾಡಲಾಗುತ್ತದೆ. ಸರಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಸಹ ಆಯೋಜಿಸಲಾಗುತ್ತದೆ ಎಂದರು.
ಬ್ರಹ್ಮೋತ್ಸವ ವೇಳೆ ಉತ್ಸವ ಬೀದಿಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗುತ್ತದೆ. ಕೋತಿಗಳ ಹಾವಳಿ, ಬೀಡಾಡಿ ದನಗಳು, ಆಡುಗಳ ಕಾಟ ತಪ್ಪಿಸಲಾಗುವುದು. ಈ ವರ್ಷ ವೈರಮುಡಿ ಜಾತ್ರೆ ಆಹ್ವಾನ ಪತ್ರಿಕೆ ವಿನ್ಯಾಸವನ್ನು ಹೊಸತನಕ್ಕೆ ಬದಲಾಯಿಸಿ ಆಕರ್ಷಕವಾಗಿ ಮುದ್ರಿಸಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಹಿರಿಯ ಸದಸ್ಯರಾದ ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಡಾ.ವೆಂಕಟರಾಮೇಗೌಡ ವೈರಮುಡಿ ಜಾತ್ರೆ ಬಗ್ಗೆ ಹಲವು ಪ್ರಮುಖ ಸಲಹೆಗಳನ್ನು ನೀಡಿದರು. ಸದಸ್ಯರಾದ ಶೋಭಾ, ಡಾ.ಪ್ರೀತಿ ಮಹದೇವ್, ವೆಂಕಟೇಶ್, ರಾಜು ಕೆ.ಎಚ್. ಪುಟ್ಟಸ್ವಾಮಿ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಭಾಗವಹಿಸಿದ್ದರು.