ಕುಕ್ಕಸಮುದ್ರದ ಕೆರೆಗೆ ನೀರು ಹರಿಸಲು ಸಿದ್ಧತೆ

KannadaprabhaNewsNetwork |  
Published : Aug 17, 2026, 01:45 AM IST
51 | Kannada Prabha

ಸಾರಾಂಶ

ಕಡೂರುನೀರಿನ ತೀವ್ರ ಭವಣೆ ಎದುರಿಸುತ್ತಿರುವ ತಾಲೂಕಿನ ಕಲ್ಕೆರೆಯ ಕುಕ್ಕಸಮುದ್ರದ ಕೆರೆಗೆ ತಾತ್ಕಾಲಿಕವಾಗಿ ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ನೀರು ಹರಿಸುವ ಸಿದ್ಧತೆಗಳಿಂದ ನಮ್ಮ ರೈತರಲ್ಲೂ ಆಶಾಭಾವನೆ ಮೂಡಿದೆ ಎಂದು ಮಾಜಿ ಶಾಸಕ ವೈ ಎಸ್.ವಿ.ದತ್ತ ಹೇಳಿದರು.

ರೈತರಲ್ಲಿ ಮೂಡಿದೆ ಭರವಸೆ: ಮಾಜಿ ಶಾಸಕ ವೈ ಎಸ್.ವಿ.ದತ್ತ । ಕಲ್ಕೆರೆ ಗ್ರಾಮದಲ್ಲಿ ರೈತರೊಂದಿಗೆ ಸಭೆ

ಕನ್ನಡಪ್ರಭ ವಾರ್ತೆ ಕಡೂರು

ನೀರಿನ ತೀವ್ರ ಭವಣೆ ಎದುರಿಸುತ್ತಿರುವ ತಾಲೂಕಿನ ಕಲ್ಕೆರೆಯ ಕುಕ್ಕಸಮುದ್ರದ ಕೆರೆಗೆ ತಾತ್ಕಾಲಿಕವಾಗಿ ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ನೀರು ಹರಿಸುವ ಸಿದ್ಧತೆಗಳಿಂದ ನಮ್ಮ ರೈತರಲ್ಲೂ ಆಶಾಭಾವನೆ ಮೂಡಿದೆ ಎಂದು ಮಾಜಿ ಶಾಸಕ ವೈ ಎಸ್.ವಿ.ದತ್ತ ಹೇಳಿದರು.

ಭಾನುವಾರ ತಾಲೂಕಿನ ಕಲ್ಕೆರೆ ಗ್ರಾಮದ ಶ್ರೀ ಕರಿಯಮ್ಮನವರ ದೇವಾಲಯ ಆವರಣದಲ್ಲಿ ಸುತ್ತಮುತ್ತಲಿನ ಗ್ರಾಮಗಳ ರೈತರೊಂದಿಗೆ ಸಭೆ ನಡೆಸಿ ಮಾತನಾಡಿ ಬರದಿಂದ ಬರಿದಾಗಿರುವ ತಾಲೂಕಿನ ದೊಡ್ಡಕೆರೆ, ಕುಕ್ಕಸಮುದ್ರ ಕೆರೆಗೆ ತಾತ್ಕಾಲಿಕವಾಗಿ ನೀರು ತುಂಬಿಸುವಂತೆ ಸಚಿವರಾದ ಜಿ. ಪರಮೇಶ್ವರ್ , ಕೆ. ಜೆ.ಜಾರ್ಜ್ ಅವರಿಗೆ ಮನವಿ ಮಾಡಲಾಗಿತ್ತು. ಅದರಂತೆ ಸರ್ಕಾರದ ಕಾರ್ಯದರ್ಶಿ ಗೌರವ್ ಗುಪ್ತಾ ನೀರು ಹರಿಸಲು ಸೂಚನೆ ನೀಡಿರುವುದಾಗಿ ತಮಗೆ ತಿಳಿಸಿದ್ದಾರೆ. ಇದರಿಂದ ತಾತ್ಕಾಲಿಕವಾಗಿ ಕುಕ್ಕ ಸಮುದ್ರ ಕೆರೆಗೆ ಒಂದು ವಾರ ಭದ್ರಾ ಡ್ಯಾಂನಿಂದ ನೀರು ಹರಿಸಿದಲ್ಲಿ ನಮ್ಮ ರೈತರ ಕೊಳವೆ ಬಾವಿಗಳ ಅಂತರ್ಜಲ ಹೆಚ್ಚಾಗಲಿದೆ ಎಂದು ತಿಳಿಸಿದರು.

ಈ ಸಂಭಂದ ವಿ.ಜೆ. ಎನ್ ಎಲ್, ಅಧಿಕಾರಿಗಳ ಭೇಟಿ ಮಾಡಿದಾಗ ಅವರು 23 ರಂದು ನೀರು ಹರಿಸುವ ಭರವಸೆ ರೈತರಲ್ಲಿ ಭರವಸೆ ಮೂಡಿಸಿದೆ ಎಂದರು.

1962 ರಲ್ಲಿ ಎಸ್. ನಿಜಲಿಂಗಪ್ಪನವರ ಅವಧಿಯಲ್ಲಿ ಚಿತ್ರದುರ್ಗ, ದಾವಣಗೆರೆ, ತುಮಕೂರು ಜಿಲ್ಲೆಗೆ ನೀರು ಹರಿಸುವ ಮೊದಲ ಹಂತದಲ್ಲಿ ಕಡೂರು, ತರೀಕೆರೆ ಸೇರಿರಲಿಲ್ಲ. 2005-2006ರಲ್ಲಿ ಭದ್ರಾ ಡ್ಯಾಂ ನಿಂದ ನೀರು ಹರಿಸಲು ಅಜ್ಜಂಪುರದ ರೈತರ ಹೋರಾಟ ಆರಂಭವಾದಾಗ ನಾವು ಬೆಂಬಲ ನೀಡಿದ್ದೆವು. ಆಗ ಸಿಎಂ ಆಗಿದ್ದ ಸದಾನಂದಗೌಡರಿಗೆ ಮನವಿ ಮಾಡಿದಾಗ ಯೋಜನೆ ಕುರಿತ ಸರ್ವೆ ಮಾಡಿ ವರದಿ ನೀಡುವಂತೆ ಸೂಚಿಸಿದ್ದರು. ಸರ್ವೆ ವರದಿಯನ್ನು 2014ರ ಜನವರಿ24ರಂದು ನಡೆದ ಕರ್ನಾಟಕ ನೀರಾವರಿ ನಿಗಮದ 62ನೇ ಬೋರ್ಡ್ ಮೀಟಿಂಗಿನಲ್ಲಿ ಮಂಡಿಸಿದಾಗ ಕಡೂರು ತಾಲೂಕಿನ 32 ಕೆರೆಗಳನ್ನು ನೀರು ಅಳ‍ವಡಿಕೆ ಮಾಡಲಾಯಿತು.

ಯೋಜನೆಯಲ್ಲಿ ಚಿತ್ರದುರ್ಗ, ತುಮಕೂರು ಭಾಗದಲ್ಲಿ ನೀರಿನ ಕೂಗು ಎದ್ದಾಗ ಚಿತ್ರದುರ್ಗ ಶಾಖಾ ಕಾಲುವೆ (ಸಿಬಿಸಿ) ಮತ್ತು ತುಮಕೂರು ಶಾಖಾ ಕಾಲುವೆ (ಟಿಬಿಸಿ) ರಚನೆಯಾಗಿ ಹೆಬ್ಬೂರಿನಲ್ಲಿ ಜಂಕ್ಷನ್ ಆಯಿತು. ಸದ್ಯದ ಸ್ಥಿತಿಯಲ್ಲಿ ಸಚಿವರಾದ ರಘುಮೂರ್ತಿ ಶೀಘ್ರ ಚಿತ್ರದುರ್ಗಕ್ಕೆ ನೀರು ಹರಿಸಲು ಕ್ರಮ ಕೈಗೊಂಡಿರುವುದರಿಂದ ನಮ್ಮ ಕುಕ್ಕ ಸಮುದ್ರ ಕೆರೆಗೆ ನೀರು ಬರುವ ಆಶಾಭಾವ ವ್ಯಕ್ತವಾಗಿದೆ ಎಂದರು.

ಅಬ್ಬಿನ ಹೊಳಲು ಗ್ರಾಮದ ಹಳ್ಳಕ್ಕೆ ನೀರು ಬಿಟ್ಟರೆ ಮುಗಳಿ, ಬೇಗೂರು,ಆಸಂದಿ, ಕಳ್ಳಿ ಹೊಸಳ್ಳಿ ಮೂಲಕ ಕಲ್ಕೆರೆ ಕೆರೆಗೆ ನೀರು ಬರುತ್ತದೆ. ಈ ನಿಟ್ಟಲ್ಲಿ ತಾತ್ಕಾಲಿಕವಾಗಿ ಚಿತ್ರದುರ್ಗದ ಕಾಲುವೆಗೆ ನೀರು ತರಲು ಉಸ್ತುವಾರಿ ಸಚಿವ ರಘುಮೂರ್ತಿ ಆಸಕ್ತಿ ತೋರಿಸುತ್ತಿದ್ದಾರೆ. 22 ಅಥ‍ವಾ 23 ರಂದು ನೀರು ಹರಿಸುವುದಾಗಿ ಹೇಳಿದ್ದಾರೆ.

ತರೀಕೆರೆ ತಾ. ಹೆಗಡೇಹಳ್ಳಿಯಿಂದ (ಸಿಬಿಸಿ ಎಲ್) 14 ಕಿ.ಮೀ. ಕಾಮಗಾರಿ ಮುಗಿದಿದೆ. 780 ಮೀ. ಮಾತ್ರ ಬಾಕಿ ಇದ್ದು ಅದಕ್ಕೆ ಬಂಡೆ ಹೊಡೆವ ಕೆಲಸ ಸಾಗಿದೆ. 22 ರಂದು ನೀರು ಬರಲು ಗೇಟಿನ ಪಕ್ಕದ ಗೋಡೆ ಹೊಡೆದರೆ ಹಳ್ಳದ ಮೂಲಕ ಕುಕ್ಕಸಮುದ್ರ ಕೆರೆಗೆ ನೀರು ಹರಿಯಲಿದೆ ಎಂದರು.

ಮುಖಂಡ ಅಶೋಕ್ ಮಾತನಾಡಿ ವೈ ಎಸ್ ವಿ ದತ್ತ 5 ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಚೌಳಹಿರಿಯೂರು, ಕಲ್ಕೆರೆ, ರಂಗಾ ಪುರ, ಕುರುಬರಹಳ್ಳಿ ಅಂತರಘಟ್ಟೆ.ತಿಮ್ಮಾಪುರ, ಗುಮ್ಮನಹಳ್ಳಿ ಆಸಂದಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರ ರೈತರ ಜೀವನಾಡಿಯಾದ ಕಲ್ಕೆರೆಗೆ ನೀರು ಹರಿಸುವ ಈ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸೋಣ ಎಂದು ಹೇಳಿ ದತ್ತಾರ ಮೂಲಕ ಡಿಸಿಯವರಿಗೆ ಗ್ರಾಮದ ಜನರು ಮನವಿ ನೀಡಿದರು.

ಇದೇ ಸಂದರ್ಭದಲ್ಲಿ ಮುಖಂಡರಾದ ಕೆ.ಎಂ.ಮಹೇಶ್ವರಪ್ಪ, ರೇವಣ್ಣ, ನಾಗೇಂದ್ರ , ಬಿದರೆ ಜಗದೀಶ್, ಸೀಗೇಹಡ್ಲು ಹರೀಶ್, ಬೀರೂರು ಮೋಹನ್, ಸೇರಿದಂತೆ ಗ್ರಾಮಸ್ಥರು ಇದ್ದರು.

-- ಬಾಕ್ಸ್ ಸುದ್ದಿಗೆ---

ಭದ್ರಾ ಮೇಲ್ದಂಡೆ ಶಾಶ್ವತ ಪರಿಷ್ಕೃತ ಯೋಜನೆಯಲ್ಲಿ 5 ಜಿಲ್ಲೆಗಳ 180 ಕೆರೆಗಳಿಗೆ ನೀರು ತುಂಬಲಿದೆ. ಅಧಿಕಾರಿಗಳು ಮತ್ತು ಸಚಿವರು 22-23ರಂದು ನೀರು ಹರಿಸುವುದಾಗಿ ಹೇಳಿದ್ದು,10 ದಿನ ಕಾದು ನೋಡೋಣ ಇಲ್ಲದೇ ಹೋದಲ್ಲಿ ಹೋರಾಟ ಮಾಡೋಣ

- ವೈ.ಎಸ್.ವಿ.ದತ್ತ.

16ಕೆಕೆಡಿಯು1.

ಕಡೂರು ತಾಲೂಕಿನ ಕಲ್ಕೆರೆ ಗ್ರಾಮದ ಶ್ರೀ ಕರಿಯಮ್ಮನವರ ದೇವಾಲಯದ ಆವರಣದಲ್ಲಿ ನಡೆದ ಸುತ್ತಮುತ್ತಲಿನ ಗ್ರಾಮಗಳ ರೈತರೊಂದಿಗಿನ ಸಭೆಯಲ್ಲಿ ಮಾಜಿ ಶಾಸಕ ವೈ ಎಸ್.ವಿ.ದತ್ತ ಮನವಿ ಸ್ವೀಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಿ
ಏತ ನೀರಾವರಿಗೆ ಶಾಸಕ ಮಂಜು ಚಾಲನೆ