ಕನ್ನಡಪ್ರಭ ವಾರ್ತೆ ಹೊಳೆನರಸೀಪುರಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಭಾರತಕ್ಕೆ ನೀಡಿರುವ ಸಂವಿಧಾನದಿಂದಾಗಿ ಅಸಮಾನತೆಯನ್ನು ತೊಡೆದು ಹಾಕಿ, ಹತ್ತಾರು ಭಾಷೆ, ಧರ್ಮ, ವಿವಿಧ ರೀತಿಯ ಆಚರಣೆ ಮಾಡುವವರೆಲ್ಲರಿಗೂ ನಮ್ಮ ಸಂವಿಧಾನ ಸಮಾನ ಅವಕಾಶ ನೀಡಿದೆ. ಜತೆಗೆ ಎಲ್ಲರು ಮುಖ್ಯವಾಹಿನಿಗೆ ಬರುವಂತಹ ಅವಕಾಶ ಕಲ್ಪಿಸಿದೆ. ವಿಶ್ವಕ್ಕೇ ಮಾದರಿಯಾಗಿರುವ ನಮ್ಮ ಸಂವಿಧಾನವನ್ನು ನಮಗೆ ನೀಡಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲನೆ ಮಾಡಬೇಕಿದೆ ಮತ್ತು ಸಂವಿಧಾನಕ್ಕೆ ನಾವೆಲ್ಲಾ ಸದಾಕಾಲ ಗೌರವ ಸಲ್ಲಿಸೋಣ ಎಂದು ಸಂಸದ ಶ್ರೇಯಶ್ ಎಂ.ಪಟೇಲ್ ಸಲಹೆ ನೀಡಿದರು. ಪಟ್ಟಣದ ತಮ್ಮ ನಿವಾಸದಲ್ಲಿ ನ. ೨೬ ರಂದು ಮೈಸೂರಿನಲ್ಲಿ ಆಚರಿಸುವ ಸಂವಿಧಾನ ದಿನಾಚರಣೆಯಲ್ಲಿ ಭಾಗವಹಿಸುವ ಸಲುವಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸಂವಿಧಾನ ನಮಗೆ ನೀಡಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಅರಿಯಲು ಹಾಗೂ ಸಂವಿಧಾನವನ್ನು ಗೌರವಿಸುವ ಸಲುವಾಗಿ ಮೈಸೂರಿನಲ್ಲಿ ಸಂವಿಧಾನ ದಿನಾಚರಣೆ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಸದಸ್ಯರಾದ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಭಾಗವಹಿಸುತ್ತಿದ್ದು, ನಾವೆಲ್ಲಾ ಕಾರ್ಯಕರ್ತರು ಈ ಸಂವಿಧಾನ ದಿನಾಚರಣೆಯಲ್ಲಿ ಭಾಗವಹಿಸೋಣ ಬನ್ನಿ ಎಂದು ಆಹ್ವಾನಿಸಿದರು.ಡಿಸೆಂಬರ್ ೧೩ಕ್ಕೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹಾಸನಕ್ಕೆ ಆಗಮಿಸುತ್ತಿದ್ದಾರೆ. ಹಾಲಿನ ದರ ಹೆಚ್ಚಿಸಿ ರೈತರಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟರುವ ಕಾರಣ ರೈತರು ಮುಖ್ಯಮಂತ್ರಿಯನ್ನು ಸನ್ಮಾನಿಸಿಲಿದ್ದಾರೆ ನಾವೂ ಭಾಗವಹಿಸೋಣ ಎಂದರು. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗಳು ಘೋ?ಣೆ ಆಗಬಹುದು ಆಕಾಂಕ್ಷಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸಾಧನೆ, ಗ್ಯಾರಂಟಿಗಳ ಬಗ್ಗೆ ಅರಿವು ಮೂಡಿಸಿ. ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ನಾವೇ ಅಭ್ಯರ್ಥಿ ಎಂದು ತಿಳಿದು ಗೆಲ್ಲಿಸೋಣ ಎಂದರು.