ಜಾಗತಿಕ ಮಟ್ಟದಲ್ಲಿ ಕೆಲಸ ಮಾಡಲು ಸಿದ್ಧರಾಗಿ

KannadaprabhaNewsNetwork |  
Published : Nov 19, 2026, 02:30 AM IST
ಸಂಡೂರು ತಾಲೂಕಿನ ತೋಣಗಲ್ಲಿನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಜೆಎಸ್‌ಡಬ್ಲ್ಯೂ ಫೌಂಡೇಶನ್‌ನ ಸ್ಕಿಲ್ ಸ್ಪಾರ್ಕ್‌ ಕಾರ್ಯಕ್ರಮದಡಿ ಮೊಬೈಲ್‌ ಅಸೆಂಬ್ಲಿ ತರಬೇತಿ ಪಡೆದ ವಿದ್ಯಾರ್ಥಿನಿಯರಿಗೆ ತರಬೇತಿ ಪ್ರಮಾಣಪತ್ರ ವಿತರಿಸಲಾಯಿತು. | Kannada Prabha

ಸಾರಾಂಶ

ಯಶಸ್ವಿನತ್ತ ಸಾಗಲು ಆತ್ಮವಿಶ್ವಾಸವೇ ಮೊದಲ ಹೆಜ್ಜೆ. ಈ ಕಾರ್ಯಕ್ರಮದ ಮೂಲಕ ನಾವು ನಿಮ್ಮಲ್ಲಿ ಕೌಶಲ್ಯದ ಕಿಡಿಯನ್ನು ಹೊತ್ತಿಸಿದ್ದೇವೆ

ಸಂಡೂರು: ಜೆಎಸ್‌ಡಬ್ಲ್ಯೂ ಫೌಂಡೇಶನ್ ವತಿಯಿಂದ ಸ್ಕಿಲ್ ಸ್ಪಾರ್ಕ್‌ ಕಾರ್ಯಕ್ರಮದಡಿ ಮೊಬೈಲ್‌ ಅಸೆಂಬ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಹಾಗೂ ೪ನೇ ತಂಡದ ತರಬೇತಿ ಕಾರ್ಯಕ್ರಮದ ಉದ್ಘಾಟನೆ ಸೋಮವಾರ ತೋರಣಗಲ್ಲಿನ ಒಪಿಜೆ ಕೇಂದ್ರದಲ್ಲಿ ನಡೆಯಿತು.

ಜೆಎಸ್‌ಡಬ್ಲ್ಯೂ ಸ್ಟೀಲ್‌ನ ಕಾರ್ಪೊರೇಟ್‌ ಅಫೇರ್ಸ್ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗದ ಅಧಿಕಾರಿ ಮಲ್ಲಿಕಾರ್ಜುನ ಅವರು ಪ್ರಮಾಣಪತ್ರಗಳನ್ನು ವಿತರಿಸಿ, ತರಬೇತಿ ಪಡೆದ ಅಭ್ಯರ್ಥಿಗಳು ಉದ್ಯೋಗ ಮಾರುಕಟ್ಟೆಯಲ್ಲಿರುವ ಅವಕಾಶಗಳನ್ನು ಅನ್ವೇಷಿಸಬೇಕು ಮತ್ತು ತಮ್ಮ ಅವಕಾಶಗಳನ್ನು ಭೌಗೋಳಿಕ ಮಿತಿಗಳಿಗೆ ಸೀಮಿತಗೊಳಿಸಿಕೊಳ್ಳಬಾರದು. ಜಾಗತಿಕ ಮಟ್ಟದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ನಿರಂತರವಾಗಿ ಕಲಿಯುತ್ತಾ, ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿ ಮತ್ತಷ್ಟು ಉತ್ತಮಗೊಳಿಸಿಕೊಳ್ಳಬೇಕು ಎಂದರು.

ಜೆಎಸ್‌ಡಬ್ಲ್ಯೂ ಫೌಂಡೇಶನ್‌ನ ದಕ್ಷಿಣ ವಲಯದ ಮುಖ್ಯಸ್ಥ ಪೆದ್ದಣ್ಣ ಬೀಡಾಲ ಮಾತನಾಡಿ, ಯಶಸ್ವಿನತ್ತ ಸಾಗಲು ಆತ್ಮವಿಶ್ವಾಸವೇ ಮೊದಲ ಹೆಜ್ಜೆ. ಈ ಕಾರ್ಯಕ್ರಮದ ಮೂಲಕ ನಾವು ನಿಮ್ಮಲ್ಲಿ ಕೌಶಲ್ಯದ ಕಿಡಿಯನ್ನು ಹೊತ್ತಿಸಿದ್ದೇವೆ. ಅದನ್ನು ಮುಂದುವರಿಸಿಕೊಂಡು ಹೋಗುವುದು, ನಿಮ್ಮ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಮತ್ತು ಉತ್ತಮ ಜೀವನ ರೂಪಿಸಿಕೊಳ್ಳುವುದು ಈಗ ನಿಮ್ಮಕೈಯ್ಯಲ್ಲಿದೆ. ನೀವು ಬಳಸಿಕೊಳ್ಳುವ ಅವಕಾಶಗಳೇ ನಾಳೆಯ ನಿಮ್ಮ ಭವಿಷ್ಯವನ್ನು ರೂಪಿಸಬಹುದು ಎಂದು ಹೇಳಿದರು.

ಜೆಎಸ್‌ಡಬ್ಲ್ಯೂ ಫೌಂಡೇಶನ್ ಸಿಎಸ್‌ಆರ್ ಮುಖ್ಯಸ್ಥರಾದ ಭಾರತಿ ಪಳನಿಸಾಮಿ ಮಾತನಾಡಿ, ಮೊಬೈಲ್‌ ತಂತ್ರಜ್ಞಾನವು ವಿವಿಧ ಉದ್ಯಮ ಕ್ಷೇತ್ರಗಳಲ್ಲಿ ಅಪಾರ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಈ ತರಬೇತಿಯು ಕೇವಲ ಆರಂಭವಷ್ಟೇ ಎಂಬುದನ್ನು ನೆನಪಿನಲ್ಲಿಡಿ. ನಿರಂತರವಾಗಿ ಕಲಿಯುತ್ತಿರಿ. ನಿಮ್ಮ ಕೌಶಲ್ಯಗಳನ್ನು ಉನ್ನತೀಕರಿಸಿಕೊಳ್ಳಿ. ಬದಲಾಗುತ್ತಿರುವ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳಿ ಹಾಗೂ ನಿಮ್ಮ ಜ್ಞಾನವನ್ನು ಸೂಕ್ತವಾಗಿ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.

ಹೆಡ್ಸ್ ಹೆಲ್ಡ್ ಹೈ ಫೌಂಡೇಶನ್‌ನ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥ ಕೆ. ವಲ್ಲಿ ಮಾತನಾಡಿದರು.

ತರಬೇತಿಯ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಮೊಬೈಲ್‌ ಅಸೆಂಬ್ಲಿಯಲ್ಲಿ ಪ್ರಾಯೋಗಿಕ ಅನುಭವ ನೀಡಲಾಯಿತು. ಸ್ಮಾರ್ಟ್‌ಫೋನ್‌ಗಳ ಜೋಡಣೆಯ ಸಂಪೂರ್ಣ ಅವಕಾಶ ಕಲ್ಪಿಸಲಾಯಿತು. ಅದರಲ್ಲಿನ ಬಿಡಿಭಾಗಗಳ ಗುರುತಿಸುವಿಕೆ, ಪಿಸಿಬಿ ಅಳವಡಿಕೆ, ಡಿಸ್‌ಪ್ಲೇ ಅಳವಡಿಕೆ, ಬ್ಯಾಟರಿ ಜೋಡಣೆ, ಗುಣಮಟ್ಟ ಪರೀಕ್ಷೆ, ತಾಂತ್ರಿಕ ದೋಷ ಪತ್ತೆಹಚ್ಚಿ ಸರಿಪಡಿಸುವ ವಿಧಾನಗಳನ್ನು ಉದ್ಯಮದ ಉತ್ಪಾದನಾ ಮಾನದಂಡಗಳಿಗೆ ಅನುಗುಣವಾಗಿ ಕಲಿಸಿಕೊಡಲಾಯಿತು.

ಕಾರ್ಯಕ್ರಮದಲ್ಲಿ ೬೫ ವಿದ್ಯಾರ್ಥಿನಿಯರು ತರಬೇತಿಯನ್ನು ಪೂರ್ಣಗೊಳಿಸಿ ಪ್ರಮಾಣಪತ್ರಗಳನ್ನು ಸ್ವೀಕರಿಸಿದರು. ಅವರಲ್ಲಿ ೪೨ ಅಭ್ಯರ್ಥಿಗಳು ಉದ್ಯೋಗಾವಕಾಶವನ್ನು ಪಡೆದುಕೊಂಡಿದ್ದು, ಕಾರ್ಯಕ್ರಮದಲ್ಲಿ ಅವರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.

ವಿಜಯನಗರ ಜೆಎಸ್‌ಡಬ್ಲ್ಯೂ ಫೌಂಡೇಶನ್‌ನ ಕೌಶಲ್ಯ ಮತ್ತು ಜೀವನೋಪಾಯ ವಿಭಾಗದ ಮುಖ್ಯಸ್ಥೆ ಶ್ರೇಷ್ಠಾ ಭಟ್ಟಾಚಾರ್ಯ, ಹೆಡ್ಸ್ ಹೆಲ್ಡ್ ಹೈ ಫೌಂಡೇಶನ್‌ನ ಕಾರ್ಯಕ್ರಮ ವ್ಯವಸ್ಥಾಪಕ ರವಿ ತಳವಾರ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿವಿಯ ಸಮಸ್ಯೆಯನ್ನು ಕಡೆಗಣಿಸಬಾರದು : ಡಾ. ಪವನ್ ಕುಮಾರ್
ನಮ್ಮಲ್ಲಿರುವ ತಪ್ಪುಗಳನ್ನು ತೊಡೆದು ಹಾಕುವುದೇ ಆಧ್ಯಾತ್ಮ: ಪ್ರೊ. ನಂದನ್ ಪ್ರಭು