ಕನ್ನಡಪ್ರಭ ವಾರ್ತೆ ದೇವರ ಹಿಪ್ಪರಗಿ
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ನೇಹ ಸಂಸ್ಥೆ ಕೂಡ್ಲಿಗಿ, ಕಲಿಕಾ ಚೇತನ ಯೋಜನೆ (ILP) ದೇವರ ಹಿಪ್ಪರಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಸಿಂದಗಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಅಂಗನವಾಡಿ ಶಿಕ್ಷಕಿಯರ 6ನೇ ಹಂತದ ಶಾಲಾಪೂರ್ವ ಶಿಕ್ಷಣ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಅವರು ಮಾತನಾಡಿದರು.
ಈಗಾಗಲೇ ಐದು ಹಂತಗಳಲ್ಲಿ ತರಬೇತಿ ಪಡೆದಿರುವ ಅಂಗನವಾಡಿ ಶಿಕ್ಷಕಿಯರು ತಮ್ಮ ಕೇಂದ್ರಗಳಲ್ಲಿ ತರಬೇತಿಯಲ್ಲಿನ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಮಕ್ಕಳನ್ನು ನಿರಂತರ ಕಲಿಕೆಯಲ್ಲಿ ತೊಡಗಿಸುತ್ತಿರುವುದು, ಮಕ್ಕಳ ಹಾಗೂ ಸಮುದಾಯ ಸ್ನೇಹಿ ವ್ಯವಸ್ಥೆಯ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದವರು ತಿಳಿಸಿದರು.ವಲಯ ಮೇಲ್ವಿಚಾರಕಿ ಎ. ಪಿ.ಕುಂಬಾರ ಮಾತನಾಡಿ, ಸ್ನೇಹ ಸಂಸ್ಥೆಯ ತರಬೇತಿಯಿಂದ ಅಂಗನವಾಡಿಗಳಲ್ಲಿ ಕಲಿಕಾ ವಾತಾವರಣ ನಿರ್ಮಾಣವಾಗಿದೆ. ಸ್ನೇಹ ಸಂಸ್ಥೆ ಕೆಲಸ ಮಾಡುತ್ತಿರುವ ಅಂಗನವಾಡಿಗಳಲ್ಲಿ ಮಕ್ಕಳ ಹಾಜರಾತಿ ಗಣನೀಯ ಏರಿಕೆಯಾಗಿದೆ ಎಂದು ಹೇಳಿದರು.
ಶಾಲಾಪೂರ್ವ ಶಿಕ್ಷಣ ಸಂಪನ್ಮೂಲ ವ್ಯಕ್ತಿಗಳಾದ ರಾವುತ ಮರಬಿ, ಶ್ರೀಶೈಲ ಜೋಗುರ, ಶಶಿಕಾಂತ ಸುಂಗಠಾಣ, ಮಲ್ಲಮ್ಮ ಹೊನ್ನಳ್ಳಿ ಹಾಗೂ ಗೌಡಪ್ಪ ಬಿರಾದಾರ ಅವರು ತರಬೇತಿ ನೀಡಿದರು.ಇದೇ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಉಪಸ್ಥಿತರಿದ್ದರು.