- ನಾಗನಗೌಡ ಕಂದಕೂರ ಪುಣ್ಯಸ್ಮರಣೆಗೆ ಭರದ ಸಿದ್ಧತೆ
- 1500 ಜನರಿಂದ ಬೃಹತ್ ರಕ್ತದಾನ : ಪಂಚ ಗೋದಾನ : 16 ಸಾವಿರ ಶಾಲಾ ಮಕ್ಕಳಿಗೆ ತಟ್ಟೆ, ಗ್ಲಾಸ್ ವಿತರಣೆ- 15 ಸಾವಿರ ಜನರ ಆಗಮನ ನಿರೀಕ್ಷೆ : ಖ್ಯಾತ ತತ್ವಪದಕಾರ ಸಂತೋಷ ಬಡಿಗೇರ ಸಂಗೀತ ಕಛೇರಿ
ಕನ್ನಡಪ್ರಭ ವಾರ್ತೆ ಯಾದಗಿರಿಹೋರಾಟದಲ್ಲೇ ಬದುಕು ಸಾಗಿಸಿದ, ಮುತ್ಸದ್ದಿ ರಾಜಕಾರಣಿ, ಮಾಜಿ ಶಾಸಕ ಲಿಂ. ನಾಗನಗೌಡ ಕಂದಕೂರ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ ಜ.28 ರಂದು ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರು ಗ್ರಾಮದ ಅವರ ತೋಟದಲ್ಲಿ ನಡೆಯಲಿದ್ದು, ಇದಕ್ಕೆ ಕೊನೆಯ ಕ್ಷಣದ ಸಿದ್ಧತೆಗಳು ಭರದಿಂದ ನಡೆದಿವೆ.
ತುಮಕೂರು ಸಿದ್ಧಗಂಗಾ ಶ್ರೀಗಳು, ಅಬ್ಬೆತುಮಕೂರಿನ ಡಾ.ಗಂಗಾಧರ ಶ್ರೀಗಳು, ನಾಲವಾರದ ಕೋರಿಸಿದ್ದೇಶ್ವರ ಮಠದ ಡಾ. ಸಿದ್ಧತೋಟೇಂದ್ರ ಸ್ವಾಮಿಗಳು ಸೇರಿದಂತೆ ನಾಡಿನಾದ್ಯಂತ ವಿವಿಧೆಡೆ 40 ಧಾರ್ಮಿಕ ಮಠ ಮಾನ್ಯಗಳ ಶ್ರೀಗಳ ಸಮ್ಮುಖದಲ್ಲಿ ನಾಗನಗೌಡ ಕಂದಕೂರ ಅವರ ಅಭಿಮಾನಿ ಬಳಗವು ಪುಣ್ಯಸ್ಮರಣೆ ಕಾರ್ಯಕ್ರಮ ಆಯೋಜಿಸಿದೆ. ಲಿಂ. ನಾಗನಗೌಡ ಅವರ ಹಿರಿಯ ಪುತ್ರ, ಉದ್ಯಮಿ ಮಲ್ಲನಗೌಡ ಹಾಗೂ ಕಿರಿಯ ಪುತ್ರ, ಹಾಲಿ ಶಾಸಕ ಶರಣಗೌಡ ಕಂದಕೂರ ಜವಾಬ್ದಾರಿ ಹೊತ್ತಿದ್ದಾರೆ.ಇದಕ್ಕೆಂದು 17 ಎಕರೆ ಜಾಗದಲ್ಲಿ ವ್ಯವಸ್ಥಿತವಾಗಿ ಎಲ್ಲ ತಯಾರಿ ನಡೆದಿದೆ.
ಅಂದು ಪಂಚ ಗೋದಾನದ ಮೂಲಕ ಆರಂಭಗೊಳ್ಳುವ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಲಿಂ. ನಾಗನಗೌಡರ ಸ್ಮಾರಕದ ಉದ್ಘಾಟನೆ, ಸುಮಾರು 1500 ಜನರಿಂದ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲೇ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಸಂಗ್ರಹವಾದ ರಕ್ತವನ್ನು ಯಾದಗಿರಿ, ರಾಯಚೂರು, ಕಲಬುರಗಿ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಬೆಂಗಳೂರಿನ ರೆಡ್ ಕ್ರಾಸ್ ರಕ್ತನಿಧಿ ಘಟಕಕ್ಕೆ ನೀಡಲಾಗುವುದು.10 ಸಾವಿರ ಚದುರ ಅಡಿ ಜಾಗದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದ್ದು, ಸುಮಾರು 15 ಸಾವಿರ ಅಭಿಮಾನಿಗಳ ಆಗಮನ ನಿರೀಕ್ಷಿಸಲಾಗಿದೆ. ಖ್ಯಾತ ತತ್ವಪದಕಾರ ಸಂತೋಷ ಬಡಿಗೇರ ಸಂಗೀತ ಕಛೇರಿ ನಡೆಸಿ ಕೊಡಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.
.....ಬಾಕ್ಸ್:1....- ಹೆಲಿಕಾಪ್ಟರ್‌ನಲ್ಲಿ ಸಿದ್ಧಗಂಗಾ ಶ್ರೀಗಳ ಆಗಮನ
ತುಮಕೂರಿನ ತ್ರಿವಿಧ ದಾಸೋಹಿ ಸಿದ್ಧಗಂಗಾ ಕ್ಷೇತ್ರದ ಶ್ರೀಸಿದ್ಧಲಿಂಗೇಶ್ವರ ಸ್ವಾಮಿಗಳು ಹೆಲಿಕಾಪ್ಟರ್ ಮೂಲಕ ಇಲ್ಲಿಗೆ ಆಗಮಿಸಲಿದ್ದು, ಗ್ರಾಮದ ಹೈದರಾಬಾದ್ ರಸ್ತೆಯ ಪಕ್ಕದಲ್ಲಿ ವಿಶೇಷ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಸಿದ್ಧಗಂಗಾ ಶ್ರೀಗಳು ಸೇರಿದಂತೆ ಒಟ್ಟು 40 ಸ್ವಾಮಿಗಳು ಆಗಮಿಸಲಿದ್ದು, ಇವರಿಗೆಲ್ಲ ಕುಳಿತುಕೊಳ್ಳಲು ವಿಶೇಷ ಆಸನಗಳ ವ್ಯವಸ್ಥೆ ಮಾಡಲಾಗಿದೆ. 13 ಸಾವಿರ ಚದುರ ಅಡಿ ಜಾಗದಲ್ಲಿ, ಬಾಳೆಲೆ ಊಟದ ಪ್ರಸಾದ ವ್ಯವಸ್ಥೆ ಮಾಡಲಾಗಿದೆ........ಬಾಕ್ಸ್:2........
- ಬೃಹತ್ ಸ್ವಾಗತ ಕಮಾನುಯಾದಗಿರಿ ನಗರದಿಂದ ಕಂದಕೂರ ರಸ್ತೆಯವರೆಗೂ ಸ್ವಾಗತದ ಬ್ಯಾನರ್ ಕಟ್ಟಲಾಗಿದೆ. ಕಂದಕೂರ ಗ್ರಾಮದ ಅಗಸಿಯಲ್ಲಿ ಬೃಹತ್ ಸ್ವಾಗತ ಕಮಾನು ನಿಲ್ಲಿಸಲಾಗಿದೆ. ಜನರಿಗಾಗಿ ಹಾಗೂ ಗಣ್ಯರಿಗಾಗಿ ಬಂದು ಹೋಗಲು ಮತ್ತು ಪಾರ್ಕಿಂಗ್ ವ್ಯವಸ್ಥೆ ಪ್ರತ್ಯೇಕವಾಗಿ ಮಾಡಲಾಗಿದೆ.
------..ಕೋಟ್..1
ಜ.28 ರಂದು ಮಂಗಳವಾರ ಬೆಳಗ್ಗೆ 7 ಗಂಟೆಗೆ ಲಿಂ. ನಾಗನಗೌಡ ಅವರ ಸಮಾಧಿ ಸ್ಥಳದಲ್ಲಿ ರುದ್ರಾಭಿಷೇಕ, ವಿಶೇಷ ಪೂಜೆ ನೆರವೇರಲಿದೆ. ಕಂದಕೂರ ಪರಿವಾರದವರಿಂದ ಪಂಚ ಗೋದಾನ ನೀಡಲಾಗುತ್ತಿದ್ದು, ಪುಣ್ಯಸ್ಮರಣೆ ನಿಮಿತ್ತ ಗುರಮಠಕಲ್ ಕ್ಷೇತ್ರದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಬಿಸಿಯೂಟ ಸೇವಿಸಲು ಸುಮಾರು 16 ಸಾವಿರಕ್ಕೂ ಹೆಚ್ಚು ತಟ್ಟೆ ಮತ್ತು ಗ್ಲಾಸ್‌ಗಳನ್ನು ವಿತರಿಸಲಾಗುವುದು.-ಸುಭಾಶ್ಚಂದ್ರ ಕಟಕಟೆ, ಜೆಡಿಎಸ್ ಜಿಲ್ಲಾಧ್ಯಕ್ಷರು, ಯಾದಗಿರಿ.
-----ಫೋಟೊ:
27ವೈಡಿಆರ್1 : ಲಿಂ. ನಾಗನಗೌಡ ಕಂದಕೂರ, ಮಾಜಿ ಶಾಸಕರು, ಗುರುಮಠಕಲ್.27ವೈಡಿಆರ್2 : ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆಂದು ಬೃಹತ್ ಪೆಂಡಾಲ್ ಅಳವಡಿಕೆ ಸಿದ್ಧತೆ.
27ವೈಡಿಆರ್3 : ಲಿಂ. ನಾಗನಗೌಡ ಕಂದಕೂರ ಅವರ ಸಮಾಧಿ ಸ್ಥಳ.