ರಾಮನಗರ: ಸಾಹಿತ್ಯ , ಸಾಂಸ್ಕೃತಿಕ ಹಾಗೂ ರಾಜ್ಯೋತ್ಸವದಂತಹ ಮೌಲ್ಯಯುತ ಕಾರ್ಯಕ್ರಮಗಳ ಮೂಲಕ ಕನ್ನಡ ನಾಡು ನುಡಿಯ ಘನತೆ ಮತ್ತಷ್ಟು ಹೆಚ್ಚಿಸಲು ಸಾಧ್ಯ ಎಂದು ಎಂಇಐ ಮಾಜಿ ಅಧ್ಯಕ್ಷರು ಹಾಗೂ ನಗರಸಭೆ ಸದಸ್ಯ ಕೆ.ಶೇಷಾದ್ರಿ ಹೇಳಿದರು.
ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಜಿ.ಶಿವಣ್ಣ ಮಾತನಾಡಿ, ಕನ್ನಡ ಭಾಷೆ ನಮ್ಮ ತಾಯಿ ಬೇರಾಗಿದೆ. ಪಂಪನ ಅಮೃತವಾಣಿಯಿಂದ ಕುವೆಂಪುವರೆಗಿನ ನಮ್ಮ ನಾಡಿನ ಕವಿಗಳು ಕನ್ನಡಿಗರ ಗುಣ ಧರ್ಮವನ್ನು ಎತ್ತಿ ಹಿಡಿದಿರುವುದು ಕಂಡು ಬರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ರೇವಣಸಿದ್ದೇಶ್ವರಸ್ವಾಮಿ ದಾಸೋಹ ಮಠದ ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಸೂರ್ಯಪ್ರಕಾಶ್, ಉಪನ್ಯಾಸಕ ಜಿ.ಶಿವಣ್ಣ, ಗಾಯಕ ರಾ.ಬಿ. ನಾಗರಾಜು, ಸುಮಾ, ಶಿವಕುಮಾರ್, ಕಮಲಾ ನಾಗರಾಜು, ನಾರಾಯಣ ಅವರಿಗೆ ಅನಿಕೇತನ ಪ್ರಶಸ್ತಿ ಪ್ರಧಾನ ಹಾಗೂ ಪೌರಾಯುಕ್ತರಾದ ಮಾರಪ್ಪ, ದೇವೇಂದ್ರ, ನಾರಾಯಣ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್, ಎಸ್.ಶಿವರಾಜ್ ಭರಣಿ, ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆಶಿವಲಿಂಗಯ್ಯ, ನಾಟಕ ಅಕಾಡೆಮಿ ಸದಸ್ಯ ಬಾಬು, ಮುಖಂಡರಾದ ರಮೇಶ್ ಬಾಬು, ನಾಗರಾಜು, ಆಶಾಲತಾ, ಕಮಲಾ, ಶಿವಲಿಂಗಯ್ಯ, ಮಂಜಣ್ಣ, ಸುರೇಶ್, ಪಾಪಣ್ಣ, ಉಮೇಶ್, ಯಶ್ವಂತ್, ಅಶೋಕ್, ಶ್ರೀನಿವಾಸ್, ಹರೀಶ್, ವಿಜಿ ಉಪಸ್ಥಿತರಿದ್ದರು.
29ಕೆಆರ್ ಎಂಎನ್ 6.ಜೆಪಿಜಿರಾಮನಗರದಲ್ಲಿ ನುಡಿ ನಮನ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಅನಿಕೇತನ ಪ್ರಶಸ್ತಿ ಪ್ರದಾನ ಮಾಡಲಾಯಿತು.