- ಹೊನ್ನಾಳಿಯಲ್ಲಿ ನಡೆದ 76ನೇ ಗಣರಾಜ್ಯೋತ್ಸವದಲ್ಲಿ ಎಸಿ ಅಭಿಷೇಕ್ ಅಭಿಮತ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ತಾಲೂಕು ಅಡಳಿತ ವತಿಯಿಂದ ಆಚರಿಸಲಾದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗಣರಾಜ್ಯೋತ್ಸವ ಸಂದೇಶ ನೀಡಿ ಅವರು ಮಾತನಾಡಿದರು.
ಭಾರತ ಸ್ವಾತಂತ್ರ್ಯದ ನಂತರ 1950 ಜ.26ರಂದು ದೇಶ ಸರ್ವತಂತ್ರ ಗಣರಾಜ್ಯವಾಗಿ ಹೊರಹೊಮ್ಮಿದೆ. ಡಾ.ಅಂಬೇಡ್ಕರ್ ರಚಿಸಿದ ಮಹತ್ವದ ಸಂವಿಧಾನದ ಅಡಿಯಲ್ಲಿ ಭಾರತ ಇಡೀ ವಿಶ್ವಕ್ಕೆ ಮಾದರಿ ಆಗುವಂತೆ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿಕೊಂಡಿದೆ. ಜಗತ್ತೇ ಆಚ್ಚರಿಪಡುವಂತೆ ನಾನಾ ಜಾತಿ, ಧರ್ಮಗಳ ಹೊರತಾಗಿಯೂ ಗಣತಂತ್ರ ರಾಷ್ಟ್ರವಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಅಭೂತಪೂರ್ವ ಸಾಧನೆ ಮೆರೆಯುತ್ತಿದೆ ಎಂದರು.ತಹಸೀಲ್ದಾರ್ ಪಟ್ಟರಾಜಗೌಡ ಮಾತನಾಡಿ, ಭಾರತದ ಆದರ್ಶವೇ ಸಂವಿಧಾನ ಆತ್ಮವಾಗಿದೆ. ಭಾರತ ಎನ್ನುವುದು ವೇದ, ಪುರಾಣ, ಮಹಾಭಾರತ, ರಾಮಾಯಣ ಈ ಎಲ್ಲವೂ ಒಳಗೊಂಡ ದಾಖಲೆಗಳ ಗುಚ್ಚ. ಈ ಎಲ್ಲ ದಾಖಲೆಗಳು ಕಾನೂನಿನ ಕಣ್ಣಿನಿಂದಲೂ ಅಂಗೀಕೃತವಾಗಿ ಮಾನ್ಯತೆ ಪಡೆದಿವೆ ಎಂದರು.
ಪುರಸಭೆ ಅಧ್ಯಕ್ಷ ಮೈಲಪ್ಪ, ಮುಖ್ಯಾಧಿಕಾರಿ ಟಿ.ಲೀಲಾವತಿ, ತಾಪಂ ಇಒ ಪ್ರಕಾಶ್, ಪೊಲೀಸ್ ಇನ್‌ಸ್ಪೆಕ್ಟರ್ ಸುನಿಲ್, ಸರ್ಕಾರಿ ನೌಕರರ ಸಂಘಧ ಅಧ್ಯಕ್ಷ ಅರುಣ್ ಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು ಮಾಜಿ ಸೈನಿಕರು, ಅನೇಕ ಗಣ್ಯರು ಭಾಗವಹಿಸಿದ್ದರು.ಧ್ಯಜಾರೋಹಣದ ನಂತರ ಉಪವಿಭಾಗಾಧಿಕಾರಿ, ತಹಸೀಲ್ದಾರ್, ಪುರಸಭೆ ಅಧ್ಯಕ್ಷರು, ಮುಖ್ಯಾಧಿಕಾರಿಗಳು ತೆರೆದ ಜೀಪಿನಲ್ಲಿ ಪಥ ಸಂಚಲನ ಸಾಗಿ, ಪೊಲೀಸ್, ಗೃಹರಕ್ಷಕ ದಳ, ಮಾಜಿ ಸೈನಿಕರು, ಪೌರಕಾರ್ಮಿಕರ ಪಡೆ, ವಿವಿಧ ಶಾಲಾ ಮಕ್ಕಳಿಂದ ಧ್ವಜವಂದನೆ ಸ್ವೀಕರಿಸಿದರು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ.ನಿಂಗಪ್ಪ ಸ್ವಾಗತಿಸಿ, ಶಾಲಾ ಮಕ್ಕಳಿಂದ ಸಾಮೂಹಿಕ ಕವಾಯತು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.- - - -26ಎಚ್ಎಲ್.ಐ1:
ಗಣರಾಜ್ಯೋತ್ಸವ ಅಂಗವಾಗಿ ಎಸಿ ಅಭಿಷೇಕ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.