ಲಕ್ಷ್ಮೇಶ್ವರ: ಪ್ರಾಚ್ಯವಸ್ತುಗಳನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಲಕ್ಷ್ಮೇಶ್ವರ ಪುರಸಭಾ ಸದಸ್ಯ ಬಸವರಾಜ ಓದಾನವರ ಹೇಳಿದರು.
ಲಕ್ಷ್ಮೇಶ್ವರ ಪುರಸಭೆ ಅಧ್ಯಕ್ಷ ಯಲ್ಲವ್ವ ದುರಗಣ್ಣವರ ಮಾತನಾಡಿ, ನಮ್ಮ ಶ್ರೇಷ್ಠ ಪ್ರಾಚ್ಯ ಪರಂಪರೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಬೇಕಾಗಿದೆ. ಅದನ್ನು ಶಿಕ್ಷಣ ಇಲಾಖೆ ಇಂತಹ ಕಾರ್ಯಕ್ರಮಗಳ ಮುಖಾಂತರ ಹಮ್ಮಿಕೊಂಡಿರುವುದು ಸ್ತುತ್ಯಾರ್ಹ ಎಂದರು.
ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಎಸ್.ಕೆ. ಹವಾಲ್ದಾರ್ ಮಾತನಾಡಿ, ನಾಲ್ಕು ಗೋಡೆಯ ಮಧ್ಯೆ ಶಿಕ್ಷಣ ಸೀಮಿತವಾಗಬಾರದು. ಜತೆಗೆ ಇಂತಹ ಪ್ರಾಚೀನ ಪರಂಪರೆ ಅರಿಯುವ ಕಾರ್ಯಕ್ರಮ ಹಮ್ಮಿಕೊಂಡಲ್ಲಿ ಮಕ್ಕಳಲ್ಲಿ ಸರ್ವತೋಮುಖ ಅಭಿವೃದ್ಧಿ ಕಾಣಬಹುದು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ನೋಡಲ್ ಬಿಆರ್‌ಪಿ ಈಶ್ವರ ಮೆಡ್ಲೇರಿ, ಪಟ್ಟಣದಲ್ಲಿ 6ನೇ ಶತಮಾನದಲ್ಲಿಯೇ ನಿರ್ಮಾಣವಾದ ಶಂಖಬಸದಿಯು ಪುಲಿಗೆರೆ ಸೋಮನಾಥ ದೇವಸ್ಥಾನದಂತೆಯೇ ಅತ್ಯಂತ ಹಳೆಯ ಇತಿಹಾಸ ಹೊಂದಿರುವಂಥದ್ದು ಎಂದರು.
ಪ್ರಾಚ್ಯ ಪ್ರಜ್ಞೆ ವಿಷಯದ ಮೇಲೆ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆಗಳಿಗಾಗಿ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳ 23 ಪ್ರೌಢಶಾಲೆಗಳ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು.
ಸಿಆರ್‌ಪಿ ಕೆ.ಪಿ. ಕಂಬಳಿ ಪ್ರಾರ್ಥಿಸಿದರು. ಉಮೇಶ ನೇಕಾರ ಸ್ವಾಗತಿಸಿದರು. ಸತೀಶ ಬೋಮಲೆ ಕಾರ್ಯಕ್ರಮ ನಿರೂಪಿಸಿದರು. ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಸಂಗಮೇಶ ಅಂಗಡಿ ವಂದಿಸಿದರು. ಶಂಖಬಸದಿ ಟ್ರಸ್ಟ್ ಕಮಿಟಿಯ ನಂದಕುಮಾರ ಪಾಟೀಲ, ಸುನೀಲಕುಮಾರ ಪಾಟೀಲ, ಪ್ರಕಾಶ ಪಾಟೀಲ ಹಾಗೂ ವಿವಿಧ ಪ್ರೌಢಶಾಲೆಗಳ ಮಾರ್ಗದರ್ಶಿ ಶಿಕ್ಷಕರು ಪಾಲ್ಗೊಂಡಿದ್ದರು.
ಭಾಷಣ ಸ್ಪರ್ಧೆ: ಪ್ರಥಮ ಸ್ಥಾನ-ವೀಣಾ ವಡ್ಡರ, ಕೆ.ಪಿ.ಎಸ್. ಬೆಳ್ಳಟ್ಟಿ. ದ್ವಿತೀಯ ಸ್ಥಾನ-ಭಾಗ್ಯ ಮಾಳೆ ಎಂ.ಎಫ್. ಡಬಾಲಿ ಹೈಸ್ಕೂಲ್ ಶಿರಹಟ್ಟಿ, ತೃತೀಯ ಸ್ಥಾನ-ಹರ್ಷಿತಾ ಅಕ್ಕೂರ ಸರ್ಕಾರಿ ಪ್ರೌಢಶಾಲೆ, ಯಲ್ಲಾಪುರ.
ರಸಪ್ರಶ್ನೆ ಸ್ಪರ್ಧೆ: ಪ್ರಥಮ ಸ್ಥಾನ-ನೀಲನಗೌಡ ಪಾಟೀಲ ಹಾಗೂ ವಿಕಾಸ ಮಜ್ಜಿಗುಡ್ಡ ಸರ್ಕಾರಿ ಪ್ರೌಢಶಾಲೆ, ಮಾಡಳ್ಳಿ, ದ್ವಿತೀಯ ಸ್ಥಾನ- ಕಾರ್ತಿಕ ದೇಸಾಯಿ ಹಾಗೂ ಭುವನರಾಜ ಈಳಿಗೇರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಗೊಜನೂರ. ತೃತೀಯ ಸ್ಥಾನ- ಬಸವರಾಜ ಶೆಟ್ಟಿಕೇರಿ ಹಾಗೂ ಭೀಮಪ್ಪ ಹಾದಿಮನಿ, ಸರ್ಕಾರಿ ಪ್ರೌಢಶಾಲೆ, ಮಜ್ಜೂರ.