ಯಲಬುರ್ಗಾ: ಯುವಕರು ಕನ್ನಡ ನೆಲ, ಜಲ, ಭಾಷೆ, ಕಲೆ ಹಾಗೂ ಸಾಹಿತ್ಯ ಸಂಸೃತಿ ಉಳಿಸಿ ಬೆಳೆಸಬೇಕು ಎಂದು ಸಮಾಜ ಸೇವಕ ಭರತ್ ರಾಮೇಗೌಡ ಹೇಳಿದರು.
ಮಾತೃಭಾಷೆ ಕನ್ನಡ ಶ್ರೀಮಂತ ಭಾಷೆಯಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಕನ್ನಡದಲ್ಲಿ ಶಿಕ್ಷಣ ಕೊಡಿಸಿದರೆ ಬುದ್ಧಿವಂತರಾಗುತ್ತಾರೆ. ಕನ್ನಡಪರ ಸಂಘಟನೆಗಳ ಪ್ರತಿಯೊಬ್ಬರೂ ನಾಡು, ನುಡಿಗೆ ಧಕ್ಕೆ ಬಂದಾಗ ತಮ್ಮ ಜೀವದ ಹಂಗು ತೊರೆದು ಧೈರ್ಯದಿಂದ ನಿಷ್ಠುರವಾಗಿ ಹೋರಾಟ ಮಾಡುವುದನ್ನು ಮೆಚ್ಚಬೇಕು ಎಂದರು.
ಸಂಘಟನೆಯ ಜಿಲ್ಲಾಧ್ಯಕ್ಷ ಬಸವರಾಜ ಹಳ್ಳಿ ಮಾತನಾಡಿ, ಕನ್ನಡ ನಾಡು, ನುಡಿ ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡಪರ ಸಂಘಟನೆಗಳಿಂದ ಕನ್ನಡ ಕಟ್ಟುವ ಕೆಲಸ ಗ್ರಾಮ ಮಟ್ಟದಲ್ಲಿ ನಡೆಯುತ್ತಿದೆ. ಅನ್ಯಾಯ ವಿರೋಧಿಸಲಾಗುತ್ತಿದೆ. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಕನ್ನಡ ಭಾಷೆಯಲ್ಲಿ ಶಿಕ್ಷಣ ಕೊಡಿಸಿ, ವಿದ್ಯಾವಂತರನ್ನಾಗಿ ಮಾಡಬೇಕು ಎಂದರು.ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್, ಆಡಳಿತ ವೈದ್ಯಾಧಿಕಾರಿ ಡಾ.ದಯಾನಂದಸ್ವಾಮಿ, ಜನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ, ಗುರುಪಾದಯ್ಯ ಹಿರೇಮಠ, ರುದ್ರಪ್ಪ ಬೇವೂರು, ಮಂಜುನಾಥ ಗಾಣಿಗೇರ, ರಾಜಶೇಖರ ಶ್ಯಾಗೋಟಿ, ಶಂಕರ ಮೂಲಿ, ಆಂಜನೇಯ ಈಳಿಗೇರ್, ಈಶಪ್ಪ ಮೂಲಿ, ಮಂಜುನಾಥ ಗೌಡ್ರ ಹಾಗೂ ವಿವಿಧ ಜಿಲ್ಲೆಯ ಮುಖಂಡರು ಇತರರು ಭಾಗವಹಿಸಿದ್ದರು.