ಸಹಬಾಳ್ವೆ, ಸಂಸ್ಕೃತಿ ಉಳಿಸಿ ಬೆಳೆಸಿ: ಶಾಸಕ ಎಚ್.ಟಿ.ಮಂಜು

KannadaprabhaNewsNetwork |  
Published : Sep 28, 2026, 01:30 AM IST
27ಕೆಎಂಎನ್ ಡಿ18 | Kannada Prabha

ಸಾರಾಂಶ

ಅಲಂಬಾಡಿಕಾವಲು ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಎಂದು ಭೇದ ಎಂದಿಗೂ ಆಗಿಲ್ಲ. ಗಂಧೋತ್ಸವ ಹಬ್ಬ ಕೇವಲ ಮುಸ್ಲಿಂರಿಗೆ ಮಾತ್ರ ಹಬ್ಬವಲ್ಲ. ಬದಲಿಗೆ ಕಳೆದ 19 ವರ್ಷಗಳಿಂದ ನಮ್ಮ ಹಿರಿಯರು ತೋರಿಸಿಕೊಟ್ಟ ದಾರಿಯಲ್ಲಿ ಒಗ್ಗಟ್ಟಿನಿಂದ ಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ. ಇದುವೇ ನಮ್ಮ ಕರ್ನಾಟಕದ ಸಂಸ್ಕೃತಿ. ಸರ್ವಧರ್ಮ ಸಹಬಾಳ್ವೆ.

ಕನ್ನಡಪ್ರಭವ ವಾರ್ತೆ ಕೆ.ಆರ್.ಪೇಟೆ

ಪ್ರತಿಯೊಬ್ಬರು ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡು ಹಿರಿಯರು ಹಾಕಿಕೊಟ್ಟ ಸಹಬಾಳ್ವೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಶಾಸಕ ಎಚ್.ಟಿ.ಮಂಜು ಕರೆ ನೀಡಿದರು.ತಾಲೂಕಿನ ಅಲಂಬಾಡಿಕಾವಲು ಗ್ರಾಮದಲ್ಲಿ ಹಜರತ್ ಸೈಯದ್ ಗೌಸ್ ಪೀರ್ ಷಾ ಖಾದ್ರಿ ದರ್ಗಾ ಟ್ರಸ್ಟ್‌ನಿಂದ ಆಯೋಜಿಸಿದ್ದ 19ನೇ ವರ್ಷದ ಭವ್ಯ ಶ್ರೀಗಂಧೋತ್ಸವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಮಾತನಾಡಿದರು.

ಅಲಂಬಾಡಿ ಕಾವಲು ತಾಲೂಕಿನಲ್ಲಿ ಸೌರ್ಹಾದತೆಗೆ ಹೆಸರಾಗಿರುವ ಮಾದರಿ ಗ್ರಾಮ. ಈ ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಮರು ಧರ್ಮಬೇಧವಿಲ್ಲದೆ ಬಾಳುತ್ತಿದ್ದಾರೆ. ಇಲ್ಲಿನ ಜನರ ಪ್ರೀತಿ, ಆರ್ಶಿವಾದ ನಾನು ಶಾಸಕನಾಗಲು ಸಹಕಾರಿಯಾಗಿದೆ ಎಂದರು.

ಇಲ್ಲಿ ಹಿಂದೂ-ಮುಸ್ಲಿಂ ಎಂದು ಭೇದ ಎಂದಿಗೂ ಆಗಿಲ್ಲ. ಗಂಧೋತ್ಸವ ಹಬ್ಬ ಕೇವಲ ಮುಸ್ಲಿಂರಿಗೆ ಮಾತ್ರ ಹಬ್ಬವಲ್ಲ. ಬದಲಿಗೆ ಕಳೆದ 19 ವರ್ಷಗಳಿಂದ ನಮ್ಮ ಹಿರಿಯರು ತೋರಿಸಿಕೊಟ್ಟ ದಾರಿಯಲ್ಲಿ ಸಹೋದರರು ಹೆಗಲಿಗೆ ಹೆಗಲು ಕೊಟ್ಟು ಈ ಗಂಧೋತ್ಸವವನ್ನು ಒಗ್ಗಟ್ಟಿನಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಇದುವೇ ನಮ್ಮ ಕರ್ನಾಟಕದ ಸಂಸ್ಕೃತಿ. ಸರ್ವಧರ್ಮ ಸಹಬಾಳ್ವೆ ಎಂದರು.

ಪ್ರಸ್ತುತ ರಾಜ್ಯದಲ್ಲಿ ದೇಶದಲ್ಲಿ ಧರ್ಮ ಧರ್ಮಗಳ ನಡುವೆ ಗೋಡೆ ಕಟ್ಟುವ ಕೆಲಸ ನಡೆಯುತ್ತಿದೆ. ಇದಕ್ಕೆ ಅಲಂಬಾಡಿ ಕಾವಲು ಗ್ರಾಮ ಇಡೀ ನಾಡಿಗೆ ಮಾದರಿಯಾಗಿದೆ. ಗ್ರಾಮದ ಸಹಬಾಳ್ವೆಯ ಪರಂಪರೆ ಮುಂದಿನ ಪೀಳಿಗೆಗೂ ಉಳಿಸಿಕೊಂಡು ಹೋಗೋಣ ಎಂದರು.

ಗಂಧೋತ್ಸವದ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ದರ್ಗಾದಲ್ಲಿ ವಿಶೇಷ ಪೂಜೆ, ಗಂಧ ಮೆರವಣಿಗೆ, ಅನ್ನಸಂತರ್ಪಣೆ ನಡೆಯಿತು. ವಿವಿಧ ಕಡೆಯಿಂದ ಸಾವಿರಾರು ಭಕ್ತರು ಭಾಗವಹಿಸಿ ದರ್ಶನ ಪಡೆದರು.

ಈ ವೇಳೆ ದರ್ಗಾ ಟ್ರಸ್ಟ್ ಅಧ್ಯಕ್ಷ ನಜಿರ್ ಅಹಮದ್, ಹಜರತ್ ಸೈಯದ್ ಗೌಸ್ ಪೀರ್ ಷಾ ಖಾದ್ರಿ ದರ್ಗಾ ಟ್ರಸ್ಟ್ ಪದಾಧಿಕಾರಿಗಳು, ಜೆಡಿಎಸ್ ಯುವ ಮುಖಂಡ ಸಚಿನ್ ಕೃಷ್ಣ ಸೇರಿದಂತೆ ಗ್ರಾಪಂ ಸದಸ್ಯರು, ಮುಸ್ಲಿಂ ಸಮುದಾಯದ ಮುಖಂಡರು, ಹಿಂದೂ ಸಮುದಾಯದ ಹಿರಿಯರು ಹಾಗೂ ನೂರಾರು ಗ್ರಾಮಸ್ಥರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರು, ಬಡವರ ಸೇವೆಗೆ ಸಹಕಾರ ಸಂಘ ಬದ್ಧ: ಯುವರಾಜ್
ಪೋಷಣ್ ಅಭಿಯಾನ ದೇಶದ ಪ್ರಗತಿ ಪ್ರತಿಬಿಂಬಿ: ನ್ಯಾ. ಹೇಮಂತ್ ಕುಮಾರ್