ರಡ್ಡಿ ಸಮಾಜದ ಮೂಲ ಕಸುಬು ಒಕ್ಕಲುತನ ಉಳಿಸಿ

KannadaprabhaNewsNetwork |  
Published : May 30, 2026, 02:15 AM IST
ಪೋಟೊ29ಕೆಎಸಟಿ1: ಕುಷ್ಟಗಿ ತಾಲೂಕಿನ ಗುಮಗೇರಾ ಗ್ರಾಮದ ಓಂಕಾರೇಶ್ವರ ಮಾಂಗಲ್ಯ ಮಂದಿರದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಜಯಂತಿ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ರಾಜ್ಯದಲ್ಲಿ ರಡ್ಡಿ ಸಮಾಜ ಪ್ರಬಲವಾಗಿದ್ದರೂ ಸಹಿತ ಸರಿಯಾದ ಸಂಘಟನೆಯಿಲ್ಲದೆ ನಿರ್ದಿಷ್ಟ ಗುರಿಯಿಲ್ಲದೆ ದುರ್ಬಲ

ಕುಷ್ಟಗಿ:ರಡ್ಡಿ ಸಮಾಜದ ಮೂಲ ಕಸುಬು ಒಕ್ಕಲುತನ ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಶಾಂತವೀರ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶ್ರೀಗಳು ಹೇಳಿದರು.

ತಾಲೂಕಿನ ಗುಮಗೇರಾ ಗ್ರಾಮದ ಶ್ರೀಓಂಕಾರೇಶ್ವರ ಮಾಂಗಲ್ಯ ಮಂದಿರದಲ್ಲಿ ಶಿವಶರಣೆ ಶ್ರೀಹೇಮರಡ್ಡಿ ಮಲ್ಲಮ್ಮ ಮತ್ತು ಮಹಾಯೋಗಿ ಶ್ರೀವೇಮನ ಕ್ಷೇಮಾಭಿವೃದ್ಧಿ ಸಂಘ ಹಾಗೂ ಗುಮಗೇರಾ ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಶಿವಶರಣೆ ಶ್ರೀಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯದಲ್ಲಿ ರಡ್ಡಿ ಸಮಾಜ ಪ್ರಬಲವಾಗಿದ್ದರೂ ಸಹಿತ ಸರಿಯಾದ ಸಂಘಟನೆಯಿಲ್ಲದೆ ನಿರ್ದಿಷ್ಟ ಗುರಿಯಿಲ್ಲದೆ ದುರ್ಬಲವಾಗುತ್ತಿದ್ದು, ಹಿರಿಯರ ಮಾರ್ಗದರ್ಶನ ಪಡೆದುಕೊಂಡು ಯುವಕರು ಉತ್ತಮ ಸಂಘಟನೆಯೊಂದಿಗೆ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರಯುತ ಮೌಲ್ಯ ಕಲಿಸಬೇಕು ಎಂದರು.

ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಹೇಮರಡ್ಡಿ ಮಲ್ಲಮ್ಮ ಆದರ್ಶಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿವೆ. ಅವರ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಸಮಾಜದಲ್ಲಿ ಒಗ್ಗಟ್ಟು ಮಾನವೀಯ ಮೌಲ್ಯ ಬೆಳೆಸುವಲ್ಲಿ ಮಹನೀಯರ ಜಯಂತಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೇಮರಡ್ಡಿ ಮಲ್ಲಮ್ಮ ಜೀವನ ಮಾದರಿಯಾಗಿದೆ ಎಂದು ಹೇಳಿದರು.

ಕೊಪ್ಪಳ ವಿವಿ ಕುಲಪತಿ ಡಾ. ಎಸ್‌.ವಿ.ಡಾಣಿ ಉಪನ್ಯಾಸ ನೀಡಿದ ಅವರು, ಹೇಮರಡ್ಡಿ ಮಲ್ಲಮ್ಮ ಜೀವನ, ತತ್ವಗಳು ಹಾಗೂ ಸಮಾಜಕ್ಕೆ ನೀಡಿದ ಸಂದೇಶಗಳ ಕುರಿತು ವಿಸ್ತಾರವಾಗಿ ಮಾತನಾಡಿದರು. ಮಲ್ಲಮ್ಮ ತ್ಯಾಗ, ಭಕ್ತಿ, ಸೇವಾ ಮನೋಭಾವ ಹಾಗೂ ಧಾರ್ಮಿಕ ಮೌಲ್ಯ ಸ್ಮರಿಸಿದರು. ಯುವಪೀಳಿಗೆ ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಅದ್ಧೂರಿ ಮೆರವಣಿಗೆ: ಕುಷ್ಟಗಿ ತಾಲೂಕಿನ ಗುಮಗೇರಿ ಗ್ರಾಮದಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಸಂಭ್ರಮ ಹಾಗೂ ಭಕ್ತಿಭಾವದಿಂದ ಅದ್ಧೂರಿಯಾಗಿ ಆಚರಿಸಲಾಯಿತು.

ಜಯಂತಿ ಅಂಗವಾಗಿ ಹೇಮರಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ಶ್ರೀವೇಮನರವರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಜಯಘೋಷಗಳೊಂದಿಗೆ ಭಾಗವಹಿಸಿದರು. ಮಹಿಳೆಯರು, ಯುವಕರು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಅಭಿನವ ಕರಿಬಸವ ಶ್ರೀಗಳು ಆಶೀರ್ವಚನ ನೀಡಿದರು. ರಡ್ಡಿ ಸಮಾಜದ ರಾಜ್ಯಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ ಪ್ರಾಸ್ತಾವಿಕ ನುಡಿಗಳನ್ನಾಡಿದರು, ರಡ್ಡಿ ಸಮಾಜ ತಾಲೂಕಾಧ್ಯಕ್ಷ ದೊಡ್ಡನಗೌಡ ವಿ ಪಾಟೀಲ, ಜಿಲ್ಲಾಧ್ಯಕ್ಷ ಜಗದೇಶಪ್ಪ ಸಾಹುಕಾರ ಸಿಂಗನಾಳ, ಪ್ರಭು ಹೆಬ್ಬಾಳ, ಆರ್.ಪಿ.ರಡ್ಡಿ, ಸಂಗಪ್ಪ ಹೊಕ್ಕಳದ್, ಪುರುಷೋತ್ತಮ ರಡ್ಡಿ, ರುದ್ರಗೌಡ ಪಾಟೀಲ, ಶೇಖರಗೌಡ ಎಂ. ಪಾಟೀಲ, ಶಶಿಧರ ಸೋಮನಗೌಡ ಗೌಡರ, ಸುರೇಶ ಕುಂಟನಗೌಡ, ರವಿಕುಮಾರ ಜಂಬಲದಿನ್ನಿ, ಟಿ.ಬಸವರಾಜ, ಶರಣಪ್ಪ ರ್ಯಾವಣಕಿ ವೆಂಕಟೇಶ ರಡ್ಡಿ ಸೇರಿದಂತೆ ರಡ್ಡಿ ಸಮಾಜದ ಹಿರಿಯರು ಮಹಿಳೆಯರು ಯುವಕ ಮಿತ್ರರು ಇದ್ದರು. ಭಾರತೀಯ ರೆಡ್‌ ಕ್ರಾಸ್ ಸಂಸ್ಥೆಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಸತಿ-ಪತಿಗಳು ಸಂಸಾರದಲ್ಲಿ ಹೇಗೆ ಆದರ್ಶವಾಗಿ ಬಾಳಬೇಕೆಂದು ಮಲ್ಲಮ್ಮನವರು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಅಂತಹ ಮಹಾನ್ ತಾಯಿಯ ತತ್ವ ಇಂದಿನ ಹೆಣ್ಣುಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತುಂಗಭದ್ರಾ ಕಾಡಾ ನಿಗಮ ಅಧ್ಯಕ್ಷ ಹಸನಸಾಬ್‌ ದೋಟಿಹಾಳ ತಿಳಿಸಿದ್ದಾರೆ.

ಸ್ವಾರ್ಥದ ಬದುಕು ಬಿಟ್ಟು ನಿಸ್ವಾರ್ಥ ಬದುಕನ್ನು ನಡೆಸಬೇಕು.ಕೆಳಗಿದ್ದವರನ್ನು ಮೇಲೆತ್ತುವ ಕೆಲಸ ಮಾಡಬೇಕು. ಹೇಮರೆಡ್ಡಿ ಮಲ್ಲಮ್ಮ ತೋರಿದ ತಾಳ್ಮೆ ಮತ್ತು ಭಕ್ತಿಯ ಹಾದಿಯಲ್ಲಿ ಸಾಗಬೇಕು. ಸಮಾಜದ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವ ಗುಣ ಮಲ್ಲಮ್ಮನವರಿಂದ ಕಲಿಯಬೇಕಿದೆ ಎಂದು ಯುವಮುಖಂಡ ದೊಡ್ಡಬಸವನಗೌಡ ಬಯ್ಯಾಪೂರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಟೆ ಆಂಜನೇಯ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರ್ಪಡೆ ಬೇಡ
ಭೂ ಸಂತ್ರಸ್ತ ರೈತರಿಗೆ ನ್ಯಾಯ ಸಿಗುವವರೆಗೂ ಹೋರಾಟ ಬಿಡಲ್ಲ: ಮಾಳಮ್ಮ