ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ವಿಶ್ವದ ಸಕಲ ಜೀವಿಗಳಿಗೂ ನೀರು ಅತ್ಯಮೂಲ್ಯ. ನೀರಿಲ್ಲದೇ ಯಾವುದೇ ಜೀವ ಸಂಕುಲ ಭೂಮಿಯ ಮೇಲೆ ಜೀವಿಸಲು ಸಾಧ್ಯವಿಲ್ಲ. ಇಂತಹ ಅಮೂಲ್ಯವಾಗಿರುವ ನೀರನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಹೊಣೆ ಎಂದು ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ಮಂಜುನಾಥಾಚಾರಿ ಅಭಿಪ್ರಾಯ ವ್ಯಕ್ತಪಡಿಸಿದರು.ತಾಲೂಕಿನ ಘಂಟಂವಾರಿಪಲ್ಲಿ ಸರ್ಕಾರಿ ಪ್ರೌಢಶಾಲೆ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ,ವಕೀಲರ ಸಂಘ, ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಜಲ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಗಿಡ ನೆಟ್ಟು ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಹವಾಮಾನದಲ್ಲಿ ಏರುಪೇರುಮಾನವನ ದುರಾಶೆಗೆ ಅರಣ್ಯ ನಾಶವಾಗುತ್ತಿದೆ. ಇದರ ಪರಿಣಾಮ ಪ್ರಕೃತಿಯಲ್ಲಿ ಹವಾಮಾನ ಬಲಾವಣೆ ಮತ್ತು ತಾಪಾಮಾನ ಏರಿಕೆಯಿಂದಾಗಿ ಸಕಾಲಕ್ಕೆ ಮಳೆ ಬೀಳದೆ ದಿನದಿಂದ ದಿನಕ್ಕೆ ಅಂತರ್ಜಲದ ಮಟ್ಟ ಕುಸಿಯುತ್ತಿದೆ ಅಲ್ಲದೆ ಸಿಗುವ ನೀರಿನಲ್ಲಿ ಫೋರೈಡ್ ಅಂಶ ಹೆಚ್ಚಾಗಿ ನಾನಾ ಕಾಯಿಲೆಗಳಿಗೆ ತುತ್ತಾಗುವಂತಹ ಹಾಗೂ ಒಂದು ಹನಿ ನೀರಿಗೂ ಪರದಾಡುವಂತಹ ಪರಿಸ್ದಿತಿ ನಿರ್ಮಾಣವಾಗಿದೆ ಎಂದರು.
ಮಾನುಷ್ಯ ಸೇರಿದಂತೆ ಭೂಮಿಯ ಮೇಲೆ ಜೀವಿಸುವ ಸಕಲ ಜೀವಿಗಳಿಗೂ ನೀರು ಅತ್ಯಮೂಲವಾಗಿದೆ. ನೀರು ಇಲ್ಲದೆ ಯಾವುದೇ ಜೀವಿ ಭೂಮಿಯ ಮೇಲೆ ಜೀವಿಸುವುದು ಅಸಾಧ್ಯ. ಮಾನವನ ದುರಾಸೆಯಿಂದ ಅರಣ್ಯ ನಾಶ ಮಾಡುತ್ತಿರುವುದೇ ಮಳೆಯ ಕೊರತೆಗೆ ಪ್ರಮುಖ ಕಾರಣವಾಗಿದೆ. ಅರಣ್ಯವನ್ನು ಬೆಳೆಸಿ ಉಳಿಸಿದಾಗ ಮಾತ್ರ ಉತ್ತಮ ಮಳೆಯಾಗಿ ಅಂತರ್ಜಲದ ಮಟ್ಟ ಏರಿಕೆಯಾಗಲು ಸಾಧ್ಯವಾಗುತ್ತೆ ಎಂದ ಅವರು ನೀರಿನ ಮಹತ್ವ ಅರಿತು ಮುಂದಿನ ಪೀಳಿಗೆಗಾಗಿ ಅಂತರ್ಜಲವನ್ನು ಕಾಪಾಡಿಕೊಳ್ಳುವ ಜವಾಬ್ಧಾರಿ ನಮ್ಮೆಲ್ಲರ ಮೇಲಿದೆ ಎಂದರು.ಸಸಿ ನೆಟ್ಟು ಹುಟ್ಟುಹಬ್ಬ ಆಚರಿಸಿ
ಈ ಸಂದರ್ಭದಲ್ಲಿ ಘಂಟಂವಾರಿಪಲ್ಲಿ ಮುಖ್ಯ ಶಿಕ್ಷಕಿ ಜಿ.ರಾಮಸುಬ್ಬಮ್ಮ ಮಾತನಾಡಿ, ಹುಟ್ಟುಹಬ್ಬಕ್ಕೆ ಕೇಕ್ ಕಟ್ ಮಾಡುವ ಬದಲಿಗೆ ಒಂದು ಸಸಿ ನೆಟ್ಟು ಅದನ್ನು ಉಳಿಸಿ ಬೆಳೆಸುವಂತಹ ಕೆಲಸಕ್ಕೆ ಇಂದಿನ ಪೀಳಿಗೆ ಮುಂದಾಗಬೇಕೆಂದ ಅವರು ನೀರಿನ ಮಹತ್ವದ ಹಾಗೂ ಅರಣ್ಯ ಅಭಿವೃದ್ದಿಯಿಂದ ಆಗುವಂತಹ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಿದರು.ಈ ಸಂದರ್ಭದಲ್ಲಿ ಇ.ಸಿ.ಓ.ಪದ್ಮಾವತಿ, ಕೆ.ಬಿ.ಆಂಜನೇಯ ರೆಡ್ಡಿ, ಎಲ್.ರವಿ,ಎನ್.ಎನ್.ಸಂದ್ಯಾ,ಜಿ.ವಿ.ಚಂದ್ರಶೇಖರ್, ವಕೀಲರಾದ ಆರ್.ಜಯಪ್ಪ,ಪ್ರಸನ್ನ ಕುಮಾರ್, ಜಲಾನಯನ ಸಂಸ್ಥೆ ಅಧಿಕಾರಿಗಳಾದ ಪ್ರದೀಪ್ ರಾವ್,ರಾಮಚಂದ್ರ, ಚಂದ್ರಾರೆಡ್ಡಿ, ಸಿ.ಆರ್.ಪಿ.ಕುಶಲ್ ಕುಮಾರ್, ಗ್ರಾ.ಪಂ ಸದಸ್ಯರಾದ ಸುಧಾ ಮಂಜುನಾಥ್ ಮತ್ತಿತರರು ಇದ್ದರು.