ಕುಕನೂರು ಪಪಂಗೆ ಅವಿರೋಧ ಆಯ್ಕೆ । ನಾಮಪತ್ರ ಹಿಂಪಡೆದ ಬಿಜೆಪಿ ಅಭ್ಯರ್ಥಿಗಳು
ಕನ್ನಡಪ್ರಭ ವಾರ್ತೆ ಕುಕನೂರುಪಟ್ಟಣದ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಪಟ್ಟಣದ ಎಪಿಎಂಸಿಯ ಕಚೇರಿಯಲ್ಲಿ ಸೋಮವಾರ ಚುನಾವಣೆ ಜರುಗಿತು. ಕಾಂಗ್ರೆಸ್ ಬೆಂಬಲಿತ ಸದಸ್ಯರು ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಇದ್ದು, ಕಾಂಗ್ರೆಸ್‌ನ ಲಲಿತಮ್ಮ ಯಡಿಯಾಪೂರ ಹಾಗೂ ಬಿಜೆಪಿಯ ಲಕ್ಷ್ಮೀ ವೀರೇಶ ಸಬರದ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಎಸ್ಸಿ ಮೀಸಲಾತಿ ಇದ್ದು, ಕಾಂಗ್ರೆಸ್ ಬೆಂಬಲಿತ ಸದಸ್ಯ ಪ್ರಶಾಂತ ಆರಬೆರಳಿನ್, ಬಿಜೆಪಿ ಬೆಂಬಲಿತ ಸದಸ್ಯೆ ನೇತ್ರಾವತಿ ಮಾಲಗಿತ್ತಿ ನಾಮಪತ್ರ ಸಲ್ಲಿಸಿದ್ದರು. ಲಕ್ಷ್ಮೀ ವಿರೇಶ ಸಬರದ, ನೇತ್ರಾವತಿ ಮಾಲಗಿತ್ತಿ ಕಣದಿಂದ ಹಿಂದೆ ಸರಿದು ತಮ್ಮ ನಾಮಪತ್ರ ಹಿಂಪಡೆದರು. ಕಣದಲ್ಲಿದ್ದ ಕಾಂಗ್ರೆಸ್ ಬೆಂಬಲಿತ ಲಲಿತಮ್ಮ ಯಡಿಯಾಪೂರ, ಪ್ರಶಾಂತ ಆರಬೆರಳಿನ್ ಅವಿರೋಧವಾಗಿ ಆಯ್ಕೆಯಾದರು.ಕಣದಿಂದ ಹಿಂದೆ ಸರಿದ ಬಿಜೆಪಿ:ಬಿಜೆಪಿ ಬೆಂಬಲಿತ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಾದರೂ ಸಹ ಚುನಾವಣೆಗೆ ಹೋಗದೆ ಕಣದಿಂದ ಹಿಂದೆ ಸರಿದು ಕೈ ಸದಸ್ಯರಿಗೆ ಸುಲಭವಾಗಿ ಬಲ ತುಂಬಿದರು. ಚುನಾವಣೆ ಜರುಗದೆ ಅವಿರೋಧ ಆಯ್ಕೆಗೆ ಅವಕಾಶ ಆಯಿತು.
ಮತ ಚಲಾಯಿಸಲು ಬಂದಿದ್ದ ಶಾಸಕ ಹಾಗೂ ಸಂಸದ:ಪಪಂನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಸ್ಥಳೀಯ ಶಾಸಕ ಹಾಗೂ ಸಂಸದರ ಒಂದೊಂದು ಮತಗಳು ಇದ್ದು, ಶಾಸಕ ಬಸವರಾಜ ರಾಯರಡ್ಡಿ, ಸಂಸದ ರಾಜಶೇಖರ ಹಿಟ್ನಾಳ ಮತ ಚುಲಾಯಿಸಲು ಆಗಮಿಸಿದ್ದರು.
ಕೃಷಿ, ಕಾರ್ಮಿಕ ಮಹಿಳೆಗೆ ಅಧ್ಯಕ್ಷ ಪಟ್ಟ:ಪಪಂನ ಅಧ್ಯಕ್ಷರಾಗಿ ಆಯ್ಕೆಯಾದ ಲಲಿತಮ್ಮ ಯಡಿಯಾಪೂರ ಕಳೆದ ೨೦ ವರ್ಷಗಳಿಂದ ಕೃಷಿ ಕಾರ್ಮಿಕ ಮಹಿಳೆಯಾಗಿ ಕೆಲಸ ಮಾಡಿದ್ದಾರೆ. ಹೊಲ, ಗದ್ದೆ, ತೋಟಗಳಲ್ಲಿ ಕೂಲಿ ಕಾರ್ಮಿಕಳಾಗಿ ದುಡಿದ ಮಹಿಳೆಗೆ ಕುಕನೂರು ಪಪಂ ಅಧ್ಯಕ್ಷ ಪಟ್ಟ ದೊರೆತಿದೆ.
ಪ್ರಶಾಂತ್ ಆರ್‌ಬೆರಳ್ಳಿನ್ ಕಾರೆ (ಗೌಂಡಿ) ಕೆಲಸ ಮಾಡುವ ವ್ಯಕ್ತಿಯಾಗಿದ್ದು, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಪಟ್ಟಣದ ಅಭಿವೃದ್ಧಿಗೆ ಸಹಕಾರ:
ಸಿಎಂ ಅರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡಿ, ಅಧ್ಯಕ್ಷ, ಉಪಾಧ್ಯಕ್ಷರಾಗಿ ನಮ್ಮ ಪಕ್ಷದ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿರುವುದು ಹರ್ಷದ ಸಂಗತಿ. ಪಟ್ಟಣದ ಅಭಿವೃದ್ಧಿಗೆ ಪೂರ್ಣ ಸಹಕಾರ ನೀಡುತ್ತೇನೆ ಎಂದರು.ಸಂಸದ ರಾಜಶೇಖರ ಹಿಟ್ನಾಳ ಇದ್ದರು. ಚುನಾವಣಾ ಅಧಿಕಾರಿಯಾಗಿ ತಹಸೀಲ್ದಾರ ಎಚ್. ಪ್ರಾಣೇಶ ಇದ್ದರು.