* ಸಾಧಕರಿಗೆ ಗೌರವ
ಕನ್ನಡಪ್ರಭ ವಾರ್ತೆ ರಾಯಚೂರು
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸಮಿತಿ, ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಭಾಗೀತ್ವದಲ್ಲಿ ಇದೇ ಜು.28 ಮಂಗಳವಾರ ಬೆಳಗ್ಗೆ 10:30 ಕ್ಕೆ ಸ್ಥಳೀಯ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಪತ್ರಿಕಾ ದಿನಾಚರಣೆ, ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ ತಿಳಿಸಿದರು.ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಉದ್ಘಾಟಿಸಲಿದ್ದು, ಮಾಜಿ ಸಚಿವ ಎನ್.ಎಸ್.ಬೋಸರಾಜು ಅವರ ವಾರ್ಷಿಕ ಪ್ರಶಸ್ತಿ ಗಳನ್ನು ಪ್ರದಾನ ಮಾಡಲಿದ್ದಾರೆ. ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಆಶಯ ನುಡಿಯನ್ನಾಡಲಿದ್ದಾರೆ. ಜಿಲ್ಲೆಯ ಸಂಸದರು,ಶಾಸಕರು,ಎಂಎಲ್ಸಿ, ಡಿಸಿ,ಜಿಪಂ ಸಿಇಒ, ಎಸ್ಪಿ, ಆಯುಕ್ತರು ಸೇರಿ ನಿಗಮ ಮಂಡಳಿ ಅಧ್ಯಕ್ಷರು, ಸಂಘದ ರಾಜ್ಯ ಸಮಿತಿಯ ಪ್ರಮುಖರು ಸೇರಿ ಅನೇಕರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಇದೇ ವೇಳೆ ಕಲಬುರಗಿ ಪೀಠದ ಮಾಹಿತಿ ಹಕ್ಕು ಆಯೋಗದ ಆಯುಕ್ತ ಬಿ.ವೆಂಕಟಸಿಂಗ್ ಅವರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದರು.
ಗಿಲ್ಡ್ ಅಧ್ಯಕ್ಷ ವಿಜಯ ಕುಮಾರ ಜಾಗಟಗಲ್ ಮಾತನಾಡಿ, ಗಿಲ್ಡ್ ನಿಂದ ವಿತರಿಸುತ್ತಿರುವ ಏಳು ಪ್ರಶಸ್ತಿಗಳಿಗೆ ಮಂಜುನಾಥ ಸಾಲಿ, ವಾಗೀಶ ಪಂಡಿತಾರಾಧ್ಯ .ವಿ.ಪಾಟೀಲ್, ಗೌಡಪ್ಪಗೌಡ, ಶಶಿಧರ ಅಂಗಡಿ, ಖ್ವಾಜಾಹುಸೇನ್, ಕ್ಯಾಮರಾಮನ್ ವಾಸುದೇವ.ಎಸ್. ಅವರನ್ನ ಆಯ್ಕೆ ಮಾಡಲಾಗಿದೆ ಎಂದರು.
-----------------------