ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ

KannadaprabhaNewsNetwork |  
Published : Jul 02, 2026, 01:15 AM IST
1 | Kannada Prabha

ಸಾರಾಂಶ

ಪತ್ರಕರ್ತರಿಗೆ ಬಿಡುವು ಎನ್ನುವುದಿಲ್ಲ, ಹಗಲು ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುತ್ತಾರೆ,

ಕನ್ನಡಪ್ರಭ ವಾರ್ತೆ ಮೈಸೂರುದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಕರೆ ನೀಡಿದರು.ಮಯೂರ ಕನ್ನಡ ಯುವಕರ ಬಳಗದ ವತಿಯಿಂದ ಹಳೆ ಸಂತೆಪೇಟೆಯಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕನ್ನಡ ದಿನಪತ್ರಿಕೆಗಳನ್ನು ಉಚಿತವಾಗಿ ವಿತರಿಸಿ ಪತ್ರಿಕಾ ದಿನವನ್ನು ಆಚರಿಸಿ ಅವರು ಮಾತನಾಡಿ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿದಿನ ಪೈಪೋಟಿ ಹೆಚ್ಚುತ್ತಿದೆ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು, ವ್ಯವಹಾರ ಜ್ಞಾನ ವೃದ್ಧಿಸಿಕೊಳ್ಳಲು ದಿನಪತ್ರಿಕೆಯನ್ನು ಓದುವ ದಿನಚರಿಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಹೇಳಿದರುಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮಾತನಾಡಿ, ಪತ್ರಕರ್ತರಿಗೆ ಬಿಡುವು ಎನ್ನುವುದಿಲ್ಲ, ಹಗಲು ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುತ್ತಾರೆ, ಕುಟುಂಬದ ಸದಸ್ಯರೊಂದಿಗೆ ಕಳಿಯಲು ಸಹ ಅವರಲ್ಲಿ ಸಮಯ ಇರುವುದಿಲ್ಲ, ಒತ್ತಡದ ನಡುವೆಯೇ ಕುಟುಂಬ ಸದಸ್ಯರೆಲ್ಲರೂ ಒಂದೆಡೆ ಸೇರುವ ಹಾಗೆ ಕಾರ್ಯಕ್ರಮ ಏರ್ಪಡಿಸಲು ಪತ್ರಕರ್ತರ ಸಂಘ ಮುಂದಾಗಬೇಕು ಎಂದರು.ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಮಾತನಾಡಿ, ಮೈಸೂರು ನಿಜವಾದ ಅರ್ಥದಲ್ಲಿ ಪತ್ರಿಕೆಗಳ ತವರೂರು, ಮಂಗಳೂರು ಸಮಾಚಾರ ಎಂಬುದು ಕ್ರಿಶ್ಚಿಯನ್ ಮಿಶಿನರಿಗಳ ಮಾಸಿಕ ಸಂಚಿಕೆ ಮೊದಲಿಗಾಗಿ ಹೊರಹೊಮ್ಮಿದ್ದರೂ ಕೂಡ, ಸಾರ್ವಜನಿಕವಾಗಿ ಪತ್ರಿಕಾ ಮಾಧ್ಯಮ ಮುದ್ರಣ ಹೊರಹೊಮ್ಮಿದ್ದು ಮೈಸೂರಿನಲ್ಲಿಯೇ ಪ್ರಪಥಮವಾಗಿ, ಹಾಗಾಗಿ ಪತ್ರಿಕಾ ಮಾಧ್ಯಮಕ್ಕೆ ಮೈಸೂರಿನಲ್ಲಿ ವಿಶಿಷ್ಟ ಸ್ಥಾನವಿದೆ, ಅದರಲ್ಲೂ ತಾತಯ್ಯನವರನ್ನು ಮಹಾತ್ಮ ಗಾಂಧಿಯವರು ಪತ್ರಿಕರಂಗದ ಭೀಷ್ಮ ಎಂದು ಕರೆದಿದ್ದರುಕೆ.ಆರ್. ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ಮಯೂರ ಕನ್ನಡ ಯುವಕರ ಬಳಗದ ಅಧ್ಯಕ್ಷ ಜಿ. ರಾಘವೇಂದ್ರ, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಎಸ್.ಎನ್. ರಾಜೇಶ್, ಹಿರಿಯ ಪತ್ರಿಕಾ ವಿಚಾರಕರಾದ ರಮಾಬಾಯಿ, ರಾಕೇಶ್, ಹರೀಶ್ ನಾಯ್ಡು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿಯಿಂದ ಮತದಾನದ ಹಕ್ಕು ಕಸಿಯುವ ಕುತಂತ್ರ
ನಕಲಿ ಜಾತಿ ಪ್ರಮಾಣಪತ್ರ ರದ್ಧತಿಗೆ ಒತ್ತಾಯ