ಪೌಷ್ಠಿಕ ಆಹಾರ ಸೇವನೆಯಿಂದ ರಕ್ತ ಹೀನತೆ ತಡೆಗಟ್ಟಿ: ಮಹಮ್ಮದ್‌ ಪಯಾಝ್

KannadaprabhaNewsNetwork |  
Published : Sep 07, 2024, 01:38 AM IST
ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೆದ ಪೋಷಣ್ ಅಭಿಯಾನ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮಹಮ್ಮದ್‌ ಪಯಾಝ್, ಸಿ.ಡಿ.ಪಿ.ಓ ಇಲಾಖೆಯ ಮೇಲ್ವೀಚಾರಕಿ ಕಾವ್ಯ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಮತ್ತಿತರರು ಇದ್ದರು. | Kannada Prabha

ಸಾರಾಂಶ

ನರಸಿಂಹರಾಜಪುರ, ಪೌಷ್ಠಿಕ ಆಹಾರ ಸೇವನೆಯಿಂದ ರಕ್ತಹೀನತೆ ತಡೆಗಟ್ಟಬಹುದು ಎಂದು ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ಮಹಮ್ಮದ್‌ ಪಯಾಝ್ ತಿಳಿಸಿದರು.ಬುಧವಾರ ಮುತ್ತಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಪೋಷಣ್‌ ಅಭಿಯಾನ ಮಾಸಾಚರಣೆ ಉದ್ಘಾಟಿಸಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವೀಚಾರಕಿ ಕಾವ್ಯ ಮಾತನಾಡಿ, ಪ್ರತಿ ವರ್ಷ ಸೆಪ್ಟಂಬರ್ ತಿಂಗಳಲ್ಲಿ ಪೋಷಣ್‌ ಮಾಸಾಚರಣೆ ನಡೆಸಲಾಗುತ್ತಿದೆ . ಮೊದಲ ವಾರದಲ್ಲಿ ಸಾರ್ವಜನಿಕರಿಗೆ ರಕ್ತಹೀನತೆ ಬಗ್ಗೆ ಅರಿವು ಮೂಡಿಸ ಲಾಗುತ್ತಿದೆ.

ಮುತ್ತಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಣ್ ಅಭಿಯಾನ ಮಾಸಾಚರಣೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಪೌಷ್ಠಿಕ ಆಹಾರ ಸೇವನೆಯಿಂದ ರಕ್ತಹೀನತೆ ತಡೆಗಟ್ಟಬಹುದು ಎಂದು ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ಮಹಮ್ಮದ್‌ ಪಯಾಝ್ ತಿಳಿಸಿದರು.

ಬುಧವಾರ ಮುತ್ತಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಪೋಷಣ್‌ ಅಭಿಯಾನ ಮಾಸಾಚರಣೆ ಉದ್ಘಾಟಿಸಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವೀಚಾರಕಿ ಕಾವ್ಯ ಮಾತನಾಡಿ, ಪ್ರತಿ ವರ್ಷ ಸೆಪ್ಟಂಬರ್ ತಿಂಗಳಲ್ಲಿ ಪೋಷಣ್‌ ಮಾಸಾಚರಣೆ ನಡೆಸಲಾಗುತ್ತಿದೆ . ಮೊದಲ ವಾರದಲ್ಲಿ ಸಾರ್ವಜನಿಕರಿಗೆ ರಕ್ತಹೀನತೆ ಬಗ್ಗೆ ಅರಿವು ಮೂಡಿಸ ಲಾಗುತ್ತಿದೆ.

ಮಕ್ಕಳ ಬೆಳವಣಿಗೆ ಕುಂಠಿತ ನಿಯಂತ್ರಣ, ಹದಿಹರೆಯದವರು, ಗರ್ಭಿಣಿಯರು, ಬಾಣಂತಿಯರಲ್ಲಿ ರಕ್ತ ಹೀನತೆ ತಡೆಗಟ್ಟುವುದು, ಅಪೌಷ್ಠಿಕತೆ ತಡೆಗಟ್ಟುವ ಗುರಿಯೊಂದಿಗೆ ಕಾರ್ಯಕ್ರಮ ನಡೆಸಲಾಗುತ್ತದೆ.ಮಗುವಿಗೆ ಮೊದಲ ಸಾವಿರ ದಿನ, ರಕ್ತಹೀನತೆ, ಅಪೌಷ್ಠಿಕತೆ, ಅತಿಸಾರ ಬೇದಿ, ಕೈ ತೊಳೆಯುವ ವಿಷಯ ಒಳಗೊಂಡಿರುತ್ತದೆ ಎಂದರು.

ತಾಲೂಕು ಆರೋಗ್ಯ ಶಿಕ್ಷಾಧಿಕಾರಿ ಪಿ.ಪಿ.ಬೇಬಿ ಮಾಹಿತಿ ನೀಡಿ, ಸಾರ್ವಜನಿಕರಲ್ಲಿ ಪೌಷ್ಠಿಕ ಆಹಾರದ ಮಹತ್ವ ತಿಳಿಸುವುದೇ ಪೋಷಣ್‌ ಅಭಿಯಾನದ ಗುರಿ. ಭಾರತದಲ್ಲಿ ರಕ್ತಹೀನತೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗದೆ ಇರುವುದಕ್ಕೆ ಅಪೌಷ್ಠಿಕತೆಯೇ ಮುಖ್ಯ ಕಾರಣ. ಮನುಷ್ಯನ ದೇಹದಲ್ಲಿ ಕೆಂಪು ರಕ್ತ ಕಣದ ಕೊರತೆಯಿಂದ ರಕ್ತಹೀನತೆ ಉಂಟಾಗುತ್ತದೆ ಎಂದರು.

ಸಭೆಯಲ್ಲಿ ಗ್ರಾಪಂ ಸದಸ್ಯರಾದ ಪುಷ್ಪಾವತಿ, ಜಯಚಂದ್ರ, ಶ್ರೀಮತಿ ಲಿಸಿ, ಶಾಲೆಯ ಮುಖ್ಯ ಶಿಕ್ಷಕಿ ಗೀತಾ, ಆರೋಗ್ಯ ಇಲಾಖೆ ಶೋಭಿ, ಅಂಕಿತ, ಆಶಾ ಕಾರ್ಯಕರ್ತೆರಾದ ಸುಜಿ, ಆಯೇಶಾ, ಅಂಗನವಾಡಿ ಕಾರ್ಯಕರ್ತೆಯರಾದ ಪುಷ್ಪಾವತಿ,ಪರ್ಜಾನ, ಪವಿತ್ರ, ಅನುಪಮ, ಆಶ್ರಿತ,ಪಾರ್ವತಿ ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ