- ತರೀಕೆರೆ ಅಡಕೆ ಬೆಳೆಗಾರರ ಸೌಹಾರ್ದ ಸಹಕಾರ ಸಂಘದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟನೆ
-ಸಾರ್ವಜನಿಕರಿಗೆ ಉತ್ತಮ ಅರೋಗ್ಯ ಸೇವೆ ಒದಗಿಸುವ ಸದುದ್ದೇಶ
ರಕ್ತದೊತ್ತಡ, ಮಧುಮೇಹ ಕಾಯಿಲೆಗಳನ್ನು ಉದಾಸೀನ ಸಲ್ಲದು- ಕಡಿಮೆ ದರದಲ್ಲಿ ದೊರಕುವ ಸೌಲಭ್ಯವನ್ನು ಜನರು ಸದ್ಬಳಕೆ ಮಾಡಿಕೊಳ್ಳಲಿ
- ರೋಗಿಗಳಿಗೆ ಸೇವಾ ಮನೋಭಾವದಿಂದ ಚಿಕಿತ್ಸೆಕನ್ನಡಪ್ರಭ ವಾರ್ತೆ, ತರೀಕೆರೆರೋಗ ಬಂದಾಗ ಚಿಕಿತ್ಸೆ ಪಡೆಯುವುದಕ್ಕಿಂತ ಕಾಯಿಲೆಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಜಾಣತನ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.ತರೀಕೆರೆ ಅಡಕೆ ಬೆಳೆಗಾರರ ಸೌಹಾರ್ದ ಸಹಕಾರ ಸಂಘ ಟಿ.ಎ.ಜಿ.ಸಿ.ಒ.ಎಸ್. ಎಪಿಎಂಸಿ ಯಾರ್ಡ್ ತರೀಕೆರೆ ಮತ್ತು ಶ್ರೀ ಸಾಯಿರಾಮ್ ಆಸ್ಪತ್ರೆ ಸಹಯೋಗದಲ್ಲಿ ಶ್ರೀ ಸಾಯಿರಾಮ್ ಆಸ್ಪತ್ರೆ ಅವರಣದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ರಕ್ತದೊತ್ತಡ, ಮಧುಮೇಹ ಕಾಯಿಲೆಗಳನ್ನು ಉದಾಸೀನ ಮಾಡಿದರೆ ದೊಡ್ಡ ಮಟ್ಟದ ಸಮಸ್ಯೆಗಳಿಗೆ ಕಾರಣವಾಗಲಿದೆ. ಸಂಘ ಸಂಸ್ಥೆಗಳಿಂದ ಸಿಗುವ ಸೌಲಭ್ಯಗಳನ್ನು ಜನರು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಶ್ರೀ ಸಾಯಿರಾಮ್ ಆಸ್ಪತ್ರೆ ಮುಖ್ಯಸ್ಥ ಕೆ.ಜಿ.ತಿಪ್ಪೇಶ್ ಮಾತನಾಡಿ ಸಾರ್ವಜನಿಕರಿಗೆ ಉತ್ತಮ ಅರೋಗ್ಯ ಸೇವೆ ಒದಗಿಸುವ ಸದುದ್ದೇಶದಿಂದ ಆಸ್ಪತ್ರೆಯನ್ನು ಆರಂಭಿಸಲಾಗಿದೆ. ಆಸ್ಪತ್ರೆಯಲ್ಲಿ 24X 7 ತುರ್ತು ಚಿಕಿತ್ಸಾ ಸೌಲಭ್ಯ ಇದೆ ಎಂದು ಹೇಳಿದರು.ಹೃದ್ರೋಗ ತಜ್ಞ ಡಾ.ಎ.ಕೆ.ಚೇತನ್ ಮಾತನಾಡಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೇವಾ ಮನೋಭಾವದಿಂದ ಚಿಕಿತ್ಸೆ ನೀಡಿರುವ ತೃಪ್ತಿ ಇದೆ. ಕಡಿಮೆ ದರದಲ್ಲಿ ದೊರಕುವ ಸೌಲಭ್ಯವನ್ನು ಜನರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ತರೀಕೆರೆ ಅಡಿಕೆ ಬೆಳೆಗಾರರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷರು, ಪುರಸಭೆ ಸದಸ್ಯ ಟಿ.ಜಿ.ಶಶಾಂಕ್, ವೈದ್ಯರಾದ ಡಾ.ಸುಕೃತ್ ಎ ಪಟೇಲ್, ಡಾ.ಶೃತಿ ವಿಜೇತ್, ಡಾ.ವಿಜೇತ್ ಮಾತನಾಡಿದರು.ಸುಮಾರು 220 ಜನರು ಆರೋಗ್ಯ ತಪಾಸಣೆ ಮಾಡಿಕೊಂಡರು. ತರೀಕೆರೆ ಅಡಿಕೆ ಬೆಳೆಗಾರರ ಸೌಹಾರ್ದ ಸಹಕಾರ ಸಂಘದ ನಿರ್ದೇಶಕ ಟಿ.ಆರ್.ಶ್ರೀಧರ್, ಆಸ್ಪತ್ರೆ ಸಿಬ್ಬಂದಿ ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
-17ಕೆಟಿಆರ್.ಕೆ.12ಃ ತರೀಕೆರೆಯಲ್ಲಿನಡೆದ ಉಚಿತ ಉಚಿತ ಆರೋಗ್ಯ ತಪಾಸಣೆ ಶಿಬಿರದ ಉದ್ಘಾಟನೆಯನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ನೆರವೇರಿಸಿದರು ತರೀಕೆರೆ ಅಡಕೆ ಬೆಳೆಗಾರರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ, ಪುರಸಭೆ ಸದಸ್ಯ ಟಿ.ಜಿ.ಶಶಾಂಕ್, ಶ್ರೀ ಸಾಯಿರಾಮ್ ಆಸ್ಪತ್ರೆ ಮುಖ್ಯಸ್ತ ಕೆ.ಜಿ.ತಿಪ್ಪೇಶ್ ಮತ್ತಿತರರು ಇದ್ದರು.