ಕನ್ನಡಪ್ರಭ ವಾರ್ತೆ ಆಳಂದ
ತಾಲೂಕಿನ ಕಡಗಂಚಿ ಹತ್ತಿರದ ಸಿಯುಕೆಯ ಕಂಪ್ಯೂಟರ್ ಸೈನ್ಸ್ ವಿಭಾಗ (ಎಂಸಿಎ) ಆಯೋಜಿಸಿದ್ದ ಕಂಪ್ಯೂಟರ್ ನೆಟ್‍ವರ್ಕ್‍ಗಳು ಮತ್ತು ಸೈಬರ್ ಭದ್ರತಾ ಬೆದರಿಕೆಗಳ ಕುರಿತು ಮೂರು ದಿನಗಳ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪರಿಣಾಮಕಾರಿ ಮತ್ತು ವೇಗದ ಸಂವಹನಕ್ಕಾಗಿ ಕಂಪ್ಯೂಟರ್ ನೆಟ್‍ವರ್ಕಿಂಗ್ ಬಹಳ ಮುಖ್ಯ. ಡಿಜಿಟಲ್ ಇಂಡಿಯಾ ಭಾರತದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಬಹಳ ಸಹಕಾರಿಯಾಗಿದೆ. ಡಿಜಿಟಲ್ ಇಂಡಿಯಾದಿಂದಾಗಿ ಗ್ರಾಮೀಣ ಜನರು ಸಹ ನಗರ ಜನರಂತೆ ಮುಂದುವರಿದ ತಂತ್ರಜ್ಞಾನ ಮತ್ತು ಮಾರುಕಟ್ಟೆಗಳ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತಿದೆ. ಇದು ನಗರ ಮತ್ತು ಗ್ರಾಮೀಣ ಭಾರತದ ನಡುವಿನ ಅಂತರವನ್ನು ಕಡಿಮೆ ಮಾಡುತ್ತಿದೆ ಎಂದು ಹೇಳಿದರು.ಸಿಯುಕೆ ಕುಲಸಚಿವ ಆರ್.ಆರ್. ಬಿರಾದಾರ್ ಮಾತನಾಡಿ, ಡಿಜಿಟಲೀಕರಣ ಮತ್ತು ನೆಟ್‍ವರ್ಕಿಂಗ್ ವ್ಯವಸ್ಥೆಯು ದೇಶವು ಸಂಪನ್ಮೂಲಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ ಮತ್ತು ಒಂದು ಸ್ಥಳದಿಂದ ಇನ್ನೊಂದಕ್ಕೆ ಸುಲಭವಾಗಿ ಹಂಚಿಕೊಳ್ಳಲು ಸಹಾಯ ಮಾಡಿದೆ. ಇದರಿಂದ ರಾಷ್ಟ್ರದ ಸಾಮಾಜಿಕ-ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಗಣಕ ವಿಜ್ಞಾನ ವಿಭಾಗದ ನೂತನ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಲಾಯಿತು.