ದಾಬಸ್‍ಪೇಟೆ: ದೀಪಾವಳಿ ಹಬ್ಬ ಹೋಬಳಿಯಲ್ಲೆಡೆ ಸಂಭ್ರಮ ಮನೆ ಮಾಡಿದೆ. ಮಾರುಕಟ್ಟೆಯಲ್ಲಿ ವಿಭಿನ್ನ ಶೈಲಿಯ ವಿದ್ಯುದ್ದೀಪಗಳು, ಗೂಡುದೀಪಗಳ ಮಾರಾಟ ಬಿರುಸಾಗಿದೆ. ಇದರ ಜತೆಗೆ ದೀಪದ ಹಬ್ಬಕ್ಕೆ ಕಳೆತುಂಬುವ ಪಟಾಕಿಗಳ ಮಾರಾಟ ಕೂಡ ಆರಂಭವಾಗಿದ್ದು ಪಟಾಕಿಗಳ ದರದಲ್ಲಿಯೂ ಹೆಚ್ಚಳವಾಗಿದೆ.
ಕಚ್ಚಾವಸ್ತುಗಳು ಏರಿಕೆ ಹಿನ್ನೆಲೆಯಲ್ಲಿ ಪಟಾಕಿ ದರ ಕೂಡ ಕಳೆದ ವರ್ಷಕ್ಕಿಂತ ಈ ವರ್ಷ ಶೇ.30ರಷ್ಟು ಅಧಿಕವಾಗಿದೆ. ಅದಲ್ಲದೆ ಕಳೆದ ಒಂದು ವಾರದಿಂದ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಪಟಾಕಿ ಖರೀದಿಗೆ ಗ್ರಾಹಕರು ಮುಂದಾಗುತ್ತಿಲ್ಲ.ಪರಿಸರ ಜಾಗೃತಿ:
ಪರಿಸರ ಕಾಳಜಿಯೂ ಖರೀದಿ ಕಡಿಮೆಯಾಗಲು ಮತ್ತೊಂದು ಕಾರಣವಾಗಿದೆ. ಈ ಹಿಂದೆ ಸಾವಿರಾರು ರು. ಪಟಾಕಿ ಖರೀದಿ ಮಾಡುತ್ತಿದ್ದ ವ್ಯಕ್ತಿ ಐನೂರು ರೂ. ಪಟಾಕಿ ಖರೀದಿ ಮಾಡುತ್ತಿದ್ದಾನೆ. ಹಲವರು ಪಟಾಕಿ ಖರೀದಿ ಮಾಡುವುದನ್ನೇ ನಿಲ್ಲಿಸಿದ್ದಾರೆ. ಸಾಂಪ್ರದಾಯಿಕವಾಗಿ ಪಟಾಕಿ ಹೊಡೆಯಬೇಕು ಎನ್ನುವುದಕ್ಕೆ ಪಟಾಕಿ ಖರೀದಿ ಮಾಡುತ್ತಿರುವುದನ್ನು ಕಾಣಬಹುದಾಗಿದೆ.ಆರೋಗ್ಯ ಕಾಳಜಿಯೂ ಹೆಚ್ಚಿದೆ:
ಪರಿಸರದ ಕಾಳಜಿಯ ಜತೆ ಆರೋಗ್ಯ ಕಾಳಜಿಯೂ ಜನರಲ್ಲಿ ಹೆಚ್ಚಿದ್ದು, ಪಟಾಕಿ ಖರೀದಿ ಮಾಡಲು ಹಿಂಜರಿಯುವಂತೆ ಮಾಡಿದೆ. ಬಹಳಷ್ಟು ಜನರು ಕಣ್ಣುಗಳನ್ನು ಕಳೆದುಕೊಂಡರೆ, ಕೆಲವರು ಉಸಿರಾಟ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲೂ ಪಟಾಕಿ ಬಗ್ಗೆ ಜನರು ಅಷ್ಟೊಂದು ಆಸಕ್ತಿ ತೋರುತ್ತಿಲ್ಲ.ಮಾರ್ಗ ಸೂಚಿ ಅನ್ವಯ ಮಾರಾಟ:
ಸುಪ್ರೀಂಕೋರ್ಟ್ ಸೂಚನೆಯಂತೆ ಹಸಿರು ಪಟಾಕಿಗಳ ತಯಾರಿಕೆಯ ಮಾರ್ಗಸೂಚಿ ಅನುಸರಿಸಿ ತಯಾರಿಸ ಲಾಗಿರುವ ಕಂಪನಿಗಳಿಂದಲೇ ನಾವು ಪಟಾಕಿಗಳನ್ನು ಖರೀದಿಸಿ ಮಾರಾಟ ಮಾಡಲಾಗುತ್ತಿದೆ. ಆದ್ದರಿಂದ ಗ್ರಾಹಕರು ಯಾವುದೇ ಆತಂಕವಿಲ್ಲದೇ ಖರೀದಿಸಬಹುದು ಎನ್ನುತ್ತಾರೆ ಪಟಾಕಿ ವ್ಯಾಪಾರಿಗಳು.ಕೋಟ್...........
ಈ ವರ್ಷ ಪಟಾಕಿ ದರ ದುಬಾರಿಯಾಗಿರುವುದು ಮತ್ತು ಮಳೆಯ ವಾತಾವರಣ ಇರುವುದರಿಂದ ಗ್ರಾಹಕರು ಹೆಚ್ಚಾಗಿ ಬರುತ್ತಿಲ್ಲ. ಸುಪ್ರಿಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹಸಿರು ಪಟಾಕಿಯನ್ನು ಮಾತ್ರ ಮಾರಾಟ ಮಾಡುತ್ತಿದ್ದೇವೆ. ವರ್ಷದಿಂದ ವರ್ಷಕ್ಕೆ ಪಟಾಕಿ ಮಾರಾಟ ಕಡಿಮೆಯಾಗುತ್ತಿದೆ.-ಯೋಗೀಶ್, ಪಟಾಕಿ ವ್ಯಾಪಾರಿ
ಕೋಟ್ .................ದೀಪಾವಳಿ ಹಬ್ಬಕ್ಕೆ ಹಿಂದೂ ಸಂಪ್ರದಾಯದಂತೆ ದೀಪಗಳನ್ನು ಹಚ್ಚಿ ಹಬ್ಬ ಆಚರಿಸಬಹುದು. ಆದರೆ ನಮ್ಮ ಇಂದಿನ ಜನರು ಪಟಾಕಿ ಸಿಡಿಸಿದರೆ ದೀಪಾವಳಿ ಹಬ್ಬ ಆಚರಿಸಿದಂತಾಗುತ್ತದೆ ಎನ್ನುತ್ತಿದ್ದಾರೆ. ಸುಪ್ರೀಂಕೋರ್ಟ್ ಆದೇಶದಂತೆ ಹಸಿರು ಪಟಾಕಿಗಳನ್ನು ಎಲ್ಲರೂ ಖರೀದಿಸಿದರೆ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು.
-ರುದ್ರೇಶ್, ಗೌರಾಪುರಪರಿಸರವಾದಿ
ಪೋಟೋ 2 * 3 : ಮಾರಾಟಕ್ಕೆ ಸಿದ್ದವಾಗಿರುವ ಪಟಾಕಿಗಳು.