ಸರ್ಕಾರದ ಖಜಾನೆ ತುಂಬಿಸಿಕೊಳ್ಳಲು ಬೆಲೆ ಏರಿಕೆ ಅಸ್ತ್ರ

KannadaprabhaNewsNetwork |  
Published : Apr 04, 2025, 12:47 AM IST

ಸಾರಾಂಶ

ಹೊಸಕೋಟೆ: ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರದ ಗದ್ದುಗೆಗಾಗಿ ಅವ್ಶೆಜ್ಞಾನಿಕವಾಗಿ ಪಂಚ ಗ್ಯಾರಂಟಿಗಳನ್ನು ಕೊಟ್ಟು ಈಗ ಅಗತ್ಯ ವಸ್ತುಗಳ ಬೆಲೆ ಏರಿಸಿ ಜನರ ಜೇಬಿಗೆ ಕತ್ತರಿ ಹಾಕುವ ಕೆಲಸ ಮಾಡಿದೆ ಎಂದು ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಗೆ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ವಾಗ್ದಾಳಿ ಮಾಡಿದರು.

ಹೊಸಕೋಟೆ: ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರದ ಗದ್ದುಗೆಗಾಗಿ ಅವ್ಶೆಜ್ಞಾನಿಕವಾಗಿ ಪಂಚ ಗ್ಯಾರಂಟಿಗಳನ್ನು ಕೊಟ್ಟು ಈಗ ಅಗತ್ಯ ವಸ್ತುಗಳ ಬೆಲೆ ಏರಿಸಿ ಜನರ ಜೇಬಿಗೆ ಕತ್ತರಿ ಹಾಕುವ ಕೆಲಸ ಮಾಡಿದೆ ಎಂದು ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಗೆ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ವಾಗ್ದಾಳಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಶತಾಯಗತಾಯ ರಾಜ್ಯದಲ್ಲಿ ಅಧಿಕಾರ ಮಾಡಬೇಕೆಂದು ಮನಸೋ ಇಚ್ಚೆ ಗ್ಯಾರಂಟಿ ಘೋಷಣೆ ಮಾಡಿ ಈಗ ಸರ್ಕಾರದ ಖಜಾನೆ ಖಾಲಿ ಮಾಡಿಕೊಂಡು ಖಜಾನೆ ತುಂಬಿಸಲು ಬೆಲೆ ಏರಿಕೆ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಇದರಿಂದ ಜನರಿಗೆ ಒಂದು ಕೈಯಲ್ಲಿ 2 ರು. ಕೊಟ್ಟು, ಮತ್ತೊಂದು ಕೈಯಲ್ಲಿ 4 ರು. ಕಸಿದುಕೊಳ್ಳುವ ಕೆಲಸ ಮಾಡ್ತಿದೆ. ಪ್ರಮುಖವಾಗಿ ಮದ್ಯದಂಗಡಿಗಳನ್ನೆ ಆದಾಯದ ಮೂಲ ಮಾಡಿಕೊಂಡ ಕಾಂಗ್ರೆಸ್ ಸರ್ಕಾರ, ಎರಡು ವರ್ಷದಲ್ಲಿ ಮದ್ಯದ ಬೆಲೆ ನಾಲ್ಕು ಬಾರಿ ಹೆಚ್ಚಿಸಿದೆ. ಶೇ.45ರಷ್ಟು ಏರಿಕೆ ಮಾಡಿದ್ದಲ್ಲದೆ ನಾಯಿಕೊಡೆಗಳಂತೆ ಗಲ್ಲಿಗೊಂದು ಮಧ್ಯದಂಗಡಿಗೆ ಪರವಾನಗಿ ಕೊಟ್ಟು ಜನರನ್ನು ಕುಡಿತಕ್ಕೆ ದಾಸರನ್ನಾಗಿ ಮಾಡಿ ಜೀವನ ಹಾಳು ಮಾಡುವ ಕೆಲಸ ಮಾಡ್ತಿದೆ ಎಂದು ಆರೋಪಿಸಿದರು.

ಬೆಲೆಯೇರಿಕೆ ಬರೆ:

ಕಳೆದ ಎರಡು ವರ್ಷದಲ್ಲಿ ಹೊಸಕೋಟೆ ತಾಲ್ಲೂಕಿನಲ್ಲಿ 20ಕ್ಕೂ ಹೆಚ್ಚು ಮದ್ಯದಂಗಡಿಗಳಿಗೆ ಪರವಾನಗಿ ನೀಡಿರುವ ಸರ್ಕಾರ, ಗೈಡೆನ್ಸ್ ವ್ಯಾಲ್ಯೂ ಶೇ.40, ಬಾಂಡ್ ಪೇಪರ್ ಅಪಿಡಿವಿಟ್ 20 ರಿಂದ 100ರೂ, ವಿದ್ಯುತ್ ದರ 2.89 ಪೈಸೆ ಹೆಚ್ಚಿಸಿ ಈಗ ಪುನಃ 36 ಪೈಸೆ ಹೆಚ್ಚಳ, ವಾಣಿಜ್ಯ ಬಳಕೆ ವಿದ್ಯುತ್‌ಗೆ 125 ರಿಂದ 140 ರು.ಗಳಿಗೆ ಏರಿಕೆ, ಸ್ಮಾರ್ಟ್ ಮೀಟರ್ ಬೆಲೆ ಪಕ್ಕದ ರಾಜ್ಯದಲ್ಲಿ 900 ರು. ಇದ್ದರೆ ನಮ್ಮ ರಾಜ್ಯದಲ್ಲಿ 8 ರಿಂದ 9 ಸಾವಿರಕ್ಕೆ ಹೆಚ್ಚಿಸಿದೆ. ಹಾಲು ಮೂರು ಬಾರಿ ೯ ರು. ಏರಿಕೆ, ಮೊಸರು 4 ರು. ಏರಿಕೆ, ವಾಹನ ತೆರಿಗೆ ಶೇ.10ರಷ್ಟು ಹೆಚ್ಚಳ, ಬಸ್ ಪ್ರಯಾಣ ದರ ಶೇ.15ರಷ್ಟು

ಹೆಚ್ಚಳ, ಪೆಟ್ರೋಲ್ ೩ ರು., ಡೀಸೆಲ್ ೪ ರು., ಮೆಟ್ರೋ ದರ ಶೇ ೫೦ರಷ್ಟು, ಕಸದ ಸೆಸ್ ಶೇ.10ರಷ್ಟು, ಸರ್ಕಾರಿ ಕಾಲೇಜು ಶುಲ್ಕ ಶೇ.10ರಷ್ಟು, ಲಿಪ್ಟ್ ಜನರೇಟರ್ ವಿದ್ಯುತ್ ಪರಿವರ್ತಕ ರಿನಿವಲ್ ಶುಲ್ಕ 5 ರಿಂದ 8 ಸಾವಿರಕ್ಕೆ ಏರಿಕೆ, ಶೇ.5ರಷ್ಟು ಟೋಲ್ ಶುಲ್ಕ, ದಿನ ನಿತ್ಯದ ಬಳಕೆಯ ಆಹಾರ ಮತ್ತು ದಿನಸಿ ಎಣ್ಣೆ ಅಡುಗೆ ಪದಾರ್ಥ, ಹಣ್ಣು, ತರಕಾರಿ ನಮ್ಮ ಕೈಗೆಟುಕದ ಬೆಲೆ ಏರಿಕೆ ಮಾಡಿ ಬರೆ ಎಳೆದಿದ್ದು, ಇದರ ನಡುವೆ ಸರ್ಕಾರ ಕೊಟ್ಟಿರುವ ಗ್ಯಾರಂಟಿಗಳನ್ನೆ ಸರಿಯಾಗಿ ಪಾವತಿಸುತ್ತಿಲ್ಲ. ಸಾರಿಗೆ ಸಂಸ್ಥೆಗೆ, ವಿದ್ಯುತ್ ಪೂರೈಕೆಗೆ ಸರಿಯಾಗಿ ಬಿಲ್ ಪಾವತಿಸಿಲ್ಲ, 10 ಕೆಜಿ ಅಕ್ಕಿಯೂ ವಿತರಣೆ ಯಾಗುತ್ತಿಲ್ಲ. ಆದರೂ ಕೂಡ ಬೆಲೆ ಏರಿಕೆ ಮಾಡಿದ ಹಣ ಏನಾಗುತ್ತಿದೆ ಎಂಬ ಪ್ರಶ್ನೆ ಅನುಮಾನ ಮೂಡಿಸುತ್ತಿದೆ ಎಂದರು.

ಎಸ್‌ಸಿಪಿ, ಟಿಎಸ್‌ಪಿ ಹಣ ದುರ್ಬಳಕೆ ಸಲ್ಲ:

ಪರಿಶಿಷ್ಟ ಜಾತಿ, ಪಂಗಡ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ಕಾನೂನು ಬಾಹಿರವಾಗಿ ಗ್ಯಾರಂಟಿಗಳಿಗೆ ಬಳಸಿಕೊಂಡು ಸಂವಿಧದಾನ ಉಲ್ಲಂಘನೆ ಮಾಡಲಾಗಿದೆ. ಅಲ್ಲದೆ ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಮತ ಬ್ಯಾಂಕಿಗಾಗಿ ದಲಿತ, ಹಿಂದುಳಿದವರನ್ನು ಕಡೆಗಣಿಸಿ ಕೇವಲ ಮೀಸಲಾತಿ ನೀಡಿರುವ ಇತರೆ ಸಮುದಾಯಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದಕ್ಕೆ ತಮ್ಮ ಕ್ಷೇತ್ರಗಳ ಆಭಿವೃದ್ದಿ ಆಗ್ತಿಲ್ಲ ಎಂದು ಕಾಂಗ್ರೆಸ್ ಶಾಸಕರಿಂದಲೇ ಆಕ್ರೋಶ ವ್ಯಕ್ತವಾಗಿದೆ ಎಂದು ಟೀಕಿಸಿದರು.ಬಾಕ್ಸ್ ...................

ರಾಜಿನಾಮೆ ಕೊಟ್ಟು ಚುನಾವಣೆಗೆ ಬನ್ನಿ

ಭ್ರಷ್ಟಾಚಾರ, ಹನಿಟ್ರ್ಯಾಪ್ ಹಾಗೂ ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಗುದ್ದಾಟದಿಂದಾಗಿ ಸರ್ಕಾರಕ್ಕೆ ರಾಜ್ಯಾದ್ಯಂತ ವಿರೋಧಿ ಅಲೆ ಎದ್ದಿದೆ. ಜನರು ತಿರುಗಿ ಬೀಳುವ ಮುನ್ನ ರಾಜಿನಾಮೆ ಕೊಟ್ಟು ಚುನಾವಣೆಗೆ ಬನ್ನಿ, ಇಲ್ಲವಾದರೆ ಅವೈಜ್ಞಾನಿಕ ಗ್ಯಾರಂಟಿಗಳನ್ನು ನಿಲ್ಲಿಸಿ ರಾಜ್ಯದ ಅಭಿವೃದ್ಧಿಗೆ ಮುಂದಾಗಿ. ಸಿದ್ದರಾಮಯ್ಯ ಅವರು ಕಳೆದ ಬಾರಿ ಸಿಎಂ ಆಗಿ ಮಾಡಿದ ಅಭಿವೃದ್ಧಿ ಈಗ ಮಾಡ್ತಿಲ್ಲ. ನಾನೂ ಕೂಡ ಅವರ ಸಂಪುಟದಲ್ಲಿ ಮಂತ್ರಿಯಾಗಿ ಹತ್ತಿರದಿಂದ ನೋಡಿದ್ದೇನೆ. ಈಗ ಅವರು ಕೇವಲ ಕೈ ಕಟ್ಟಿ ಬಾಯಿ ಮುಚ್ಚಿ ಅಧಿಕಾರ ನಡೆಸುವಂತಾಗಿದೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.

ಕೋಟ್‌..............

ನೂರಾರು ವರ್ಷಗಳ ಹಿಂದೆಯೇ ಕಾಲಜ್ಞಾನಿ ಕೈವಾರ ಯೋಗಿನಾರಾಯಣ ತಾತಯ್ಯನವರು ಭವಿಷ್ಯ ನುಡಿದಿದ್ದಾರೆ. ಕಲಿಯುಗ ಎನ್ನುವುದು ಒಂದಲ್ಲ ಒಂದು ದಿನ ಅಂತ್ಯ ಆಗುವುದು ನಿಶ್ಚಿತ. ಆದ್ದರಿಂದ ಯಾವುದೇ ಪಕ್ಷದ ರಾಜಕಾರಣಿಗಳಾಗಲಿ ಕೇವಲ ಹಣ ಮಾಡುವ ಉದ್ದೇಶ ಬಿಟ್ಟು, ಜನಸೇವೆ ಮಾಡುವ ಮನೋಭಾವ ರೂಢಿಸಿಕೊಳ್ಳಿ. ರಾಜಕಾರಣದಲ್ಲಿ ಸತ್ಯ, ಪ್ರಾಮಾಣಿಕತೆ, ದಕ್ಷತೆ ಇರಬೇಕು.

-ಎಂಟಿಬಿ ನಾಗರಾಜ್, ಮಾಜಿ ಸಚಿವ

(ಮಗ್‌ಶಾಟ್‌ ಫೋಟೊ ಬಳಸಿ)

ಮಾಜಿ ಸಚಿವ ಎಂಟಿಬಿ ನಾಗರಾಜ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯ ರಸ್ತೆಯಲ್ಲಿ ಮಟನ್‌, ಚಿಕನ್‌ ಮಾರಾಟ: ಸ್ಥಳಾಂತರಕ್ಕೆ ಒತ್ತಾಯ
ಜೀವನದಲ್ಲಿ ಆತ್ಮಸಾಕ್ಷಿಯಾಗಿ ನಡೆದುಕೊಳ್ಳುವವರು ನಿಜವಾದ ಸಾಧಕರು-ಸಂಸದ ಬೊಮ್ಮಾಯಿ