ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬೆಲೆ ದುಪ್ಪಟ್ಟು: ಶರಣಪ್ರಕಾಶ ಪಾಟೀಲ್‌

KannadaprabhaNewsNetwork |  
Published : Apr 28, 2024, 01:16 AM IST
ಶರಣಪ್ರಕಾಶ ಪಾಟೀಲ್‌ | Kannada Prabha

ಸಾರಾಂಶ

ಕಳೆದ 2014ರಲ್ಲಿ ಭಾರಿ ಬೆಲೆ ಏರಿಕೆಯಾಗಿದೆ ಎಂದು ಹೇಳಿ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೇರಿತು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬೆಲೆಗಳು ಎರಡು ಪಟ್ಟು ಗಿಂತ ಹೆಚ್ಚಾಗಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶಾಣ ಪ್ರಕಾಶ್ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಕಮಲಾಪುರ

ಕಳೆದ 2014ರಲ್ಲಿ ಭಾರಿ ಬೆಲೆ ಏರಿಕೆಯಾಗಿದೆ ಎಂದು ಹೇಳಿ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೇರಿತು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬೆಲೆಗಳು ಎರಡು ಪಟ್ಟು ಗಿಂತ ಹೆಚ್ಚಾಗಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶಾಣ ಪ್ರಕಾಶ್ ಪಾಟೀಲ ಹೇಳಿದರು.

ತಾಲೂಕಿನ ಮಹಾಗಾಂವ ಕ್ರಾಸಿನಲ್ಲಿ ಶುಕ್ರವಾರ ಲೋಕಸಭಾ ಚುನಾವಣೆ ನಿಮಿತ್ತ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರ ಪ್ರಚಾರ ಮಾಡಿ ಮಾತನಾಡಿದ ಅವರು, ಆಗ ಪೆಟ್ರೋಲ್ ಬೆಲೆ 50 ಇತ್ತು, ಇಂದು ₹100 ಗಡಿ ದಾಟಿದೆ. ಆಗ ಸಿಲೆಂಡರ್ ಬೆಲೆ ₹ 450 ಇತ್ತು, ಇಂದು ₹ 1000 ದಾಟಿದೆ. ಆಗ ರೈತರ ರಾಸಾಯನಿಕ ಗೊಬ್ಬರ₹ 300 ಇತ್ತು, ಇಂದು ₹1300 ದಾಟಿದೆ. ಬಹುತೇಕ ಎಲ್ಲಾ ಕಿರಣ ಸಾಮಗ್ರಿಗಳ ಬೆಲೆ ಈಗ ವಿಪರೀತ ಏರಿದೆ. ಬಿಜೆಪಿ ಕಾಲದಲ್ಲಿ ಬೆಲೆಗಳು ಉಳಿಯುವ ಬದಲು ದುಪ್ಪಟ್ಟಾಗಿದೆ ಎಂದು ದೂರಿದರು.

ಬೆಲೆ ಏರಿಕೆಯಿಂದ ತತ್ತರಿಸಿರುವವರಿಗೆ ಏನಾದರೂ ಸಹಾಯ ಮಾಡಬೇಕೆಂದು ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ನೀಡಿದೆ. ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜನರಿಗೆ ಮುಟ್ಟುವ ವ್ಯವಸ್ಥೆ ಮಾಡಿದ್ದೆವು. ಮನೆ ಮಗಳನ್ನು ಬೆಲೆಗಳಲು 5 ಯೋಜನೆಗಳನ್ನು ಜಾರಿಗೆ ತಂದಿದ್ದೆವು.5 ಗ್ಯಾರಂಟಿಗಳು ಎಂದು ಜನಪ್ರಿಯವಾಗಿವೆ. ಇಂದು ಗ್ರಹಲಕ್ಷ್ಮಿ 9ನೇ ಕಂತು ಜಮಾ ಮಾಡಲಾಗಿದೆ. ಪ್ರತಿಯೊಬ್ಬರೂ ಖಾತೆಗೆ ಜಮೆಆಗಿದೆ. ಜನರಿಗೆ ಸ್ವಲ್ಪವಾದರೂ ನೆಮ್ಮದಿ ಕಾಣಲು ಸಾಧ್ಯವಾಗಿದೆ. ಈಗ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೆಗೊಳಿಸಿ ಮತ್ತೆ ನಿಮ್ಮ ಮುಂದೆ ನಿಂತಿದ್ದೇವೆ. ಕೊಟ್ಟ ಮಾತನ್ನು ಈಡೇರಿಸಿ ಮತ ಕೇಳಲು ಬಂದಿದ್ದೇವೆ ಎಂದು ತಿಳಿಸಿದ್ದರು.

ಬಿಜೆಪಿಯವರು ನಾವು ತಂದಿರುವ ಗ್ಯಾರಂಟಿಗಳನ್ನು ಪ್ರಶ್ನಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಬಂದು ಮಾಡಲು ಹೇಳುತ್ತಿದ್ದಾರೆ. ಬಡವರಿಗೆ ಯೋಜನೆಗಳನ್ನು ಕೊಡುವುದು ಅವರಿಗೆ ಬೇಕಾಗಿಲ್ಲ. ಈ ಸ್ವಾತಂತ್ರ್ಯದ 75 ವರ್ಷಗಳ ಇತಿಹಾಸದಲ್ಲಿ 34 ಸಾವಿರ ಕೋಟಿ ಒಂದೇ ಒಂದು ಕಾರ್ಯಕ್ರಮ ಯಾವುದು ಎಂದರೆ ಗೃಹಲಕ್ಷ್ಮಿ ಯೋಜನೆಗೆ ಬಡವರ ಮನೆಗೆ ತಲುಪಿಸುವ ಕೆಲಸ ಯಾವುದಾದರೂ ಪಕ್ಷ ಮಾಡಿದ್ದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವಾಗಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಜನಾಥ ತಡಕಲ್, ಮಾಜಿ ಸಚಿವ ರೇವುನಾಯಕ ಬೆಳಮಾಗಿ, ಚಂದ್ರಿಕಾ ಪರಮೇಶ್ವರಿ, ಅರವಿಂದ ನಹರಳಿ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿನಾಥ ಪಾಟೀಲ್, ರವಿ ಬಿರಾದಾರ, ಗುರುರಾಜ ಮಾಟೂರ್, ಅಮರ್ನಾಥ ತಡಕಲ್,ಸತೀಶ ಸಾವು, ಮನುಷ್ಯ ಹರಸೂರು, ಅಮರ ಚಿಕ್ಕೆಗೌಡ, ಬಸವರಾಜ ಮಠಪತಿ, ಹನುಮಂತ ಹರಸೂರು, ಮಜರಲ್ಲಿ ದರ್ಜಿ,ಗಣೆಶ ಚಿಕನಾಗಾಂವ,ಅಶೋಕ ಕುಮಾರ ಗೌರೆ, ಮತ್ತಿತ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!