ಪ್ರಾಥಮಿಕ ಕೃಷಿ ಪತ್ತಿನ ಸಂಘಗಳೇ ಸಹಕಾರಿ ರಂಗದ ಹೆಬ್ಬಾಗಿಲು: ಶಕುಂತಲಾ ಬೆಲ್ದಾಳೆ

KannadaprabhaNewsNetwork |  
Published : Oct 13, 2026, 01:30 AM IST
ಚಿತ್ರ 12ಬಿಡಿಆರ್50 | Kannada Prabha

ಸಾರಾಂಶ

ಡಿಸಿಸಿ ಬ್ಯಾಂಕಿನ ಸೌಹಾರ್ದ ತರಬೇತಿ ಸಂಸ್ಥೆಯಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರಿಗೆ ನಬಾರ್ಡ್‌ ವತಿಯಿಂದ ನಡೆದ ಆಡಳಿತ ನಿರ್ವಹಣೆ ತರಬೇತಿ ಕಾರ್ಯಕ್ರಮವನ್ನು ಬೀದರ್ ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಶಕುಂತಲಾ ಬೆಲ್ದಾಳೆ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬೀದರ್

ರೈತರಿಗೆ ಸಹಾಯಕವಾಗುವ ಎಲ್ಲಾ ರೀತಿಯ ಸೇವೆಗಳನ್ನು ನೀಡುವುದರ ಮೂಲಕ ಪ್ಯಾಕ್ಸ್‌ಗಳನ್ನು ಇನ್ನಷ್ಟು ಬಲಪಡಿಸಿ ಎಂದು ಬೀದರ್ ಡಿಸಿಸಿ ಬ್ಯಾಂಕಿನ ನಿರ್ದೇಶಕಿ ಶಕುಂತಲಾ ಬೆಲ್ದಾಳೆ ಕರೆ ನೀಡಿದರು.

ಡಿಸಿಸಿ ಬ್ಯಾಂಕಿನ ಸೌಹಾರ್ದ ತರಬೇತಿ ಸಂಸ್ಥೆಯಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರಿಗೆ ನಬಾರ್ಡ್‌ ವತಿಯಿಂದ ನಡೆದ ಆಡಳಿತ ನಿರ್ವಹಣೆ ತರಬೇತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಜನಪರ ಸೇವೆಯೆಂದರೆ ಜನ ಕೇಂದ್ರಿತವಾಗಿದ್ದು, ಸಹಕಾರಿ ಮನೋಭಾವದಿಂದ ಕೆಲಸ ಮಾಡುವುದಾಗಿದೆ. ತಾನು ಎಲ್ಲರಿಗಾಗಿ ಎಲ್ಲರೂ ತನಗಾಗಿ ಎಂಬ ಧ್ಯೇಯದೊಂದಿಗೆ ಕೆಲಸ ಮಾಡಲು ಅವಕಾಶ ಕಲ್ಪಿಸುವುದೇ ಸಹಕಾರಿ ಕ್ಷೇತ್ರವಾಗಿದೆ.

ದೇಶದಲ್ಲಿ 8 ಲಕ್ಷ ಸಹಕಾರಿ ಸಂಘಗಳೊಂದಿಗೆ ಸುಮಾರು 30 ಲಕ್ಷ ಜನರಿಗೆ ಉದ್ಯೋಗದ ಅವಕಾಶ ನೀಡಿರುವ ಕ್ಷೇತ್ರವಿದಾಗಿದೆ. ಗ್ರಾಮೀಣ ಭಾಗದ ರೈತರ ಜೀವನಾಡಿಯಾಗಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳೆ ಸಹಕಾರಿ ರಂಗದ ಹೆಬ್ಬಾಗಿಲುಗಳಾಗಿವೆ. ರೈತರ ಒಡನಾಡಿಯಾಗಿ ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಬಂಡವಾಳ ಒದಗಿಸುತ್ತಿರುವ ಪ್ಯಾಕ್ಸ್‌ಗಳು ಕೇವಲ ಸಾಲವಲ್ಲದೆ ಗೊಬ್ಬರ ಬೀಜ ಕೀಟನಾಶಕಗಳನ್ನು ಕಮ್ಮಿ ದರದಲ್ಲಿ ಒದಗಿಸುತ್ತಿವೆ. ಬೀಜ ಗೊಬ್ಬರ ಮತ್ತು ಉತ್ಪನ್ನ ಮಾರಾಟ ಸೇವೆಗಳನ್ನು ನೀಡುತ್ತಿದೆ. ನಾಯಕತ್ವದ ಗುಣಗಳನ್ನು ಗ್ರಾಮೀಣ ರೈತರಲ್ಲಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಸಹಕಾರಿ ಕ್ಷೇತ್ರದಲ್ಲಿ ಯುವಜನತೆಯ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಸಲುವಾಗಿ ಗ್ರಾಮೀಣ ವಿದ್ಯಾವಂತ ಯುವಕರಿಗೆ ಸಹಕಾರಿ ಸಂಘಗಳ ಲೆಕ್ಕಪತ್ರಗಳ ಪರಿಶೋಧನೆಯ ತರಬೇತಿಗಳನ್ನು ನಡೆಸಿ ಅವರಿಗೂ ಉದ್ಯೋಗವಕಾಶ ನೀಡುವ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ಯುವಕರಲ್ಲಿ ಅರಿವು ಮೂಡಿಸುವ ಕೆಲಸವನ್ನು ಸಹಕಾರ ಸಂಸ್ಥೆಗಳ ಮೂಲಕ ಹಮ್ಮಿಕೊಳ್ಳಬೇಕು ಸಹಕಾರಿ ಆಂದೋಲನವನ್ನು ಇನ್ನೂ ಬಲಪಡಿಸಬೇಕು ಎಂದರು

ಸಮಾರಂಭದಲ್ಲಿ ಉಪಸ್ಥಿತರಿದ್ದ ಡಾ.ನೀತಾ ಬೆಲ್ದಾಳೆ ಮಾತನಾಡಿ, ಸಹಕಾರಿ ರಂಗವು ನಾಯಕತ್ವ ಒದಗಿಸುವ ವೇದಿಕೆಯಾಗಿದ್ದು, ಯುವಕರು ಇದರಲ್ಲಿ ತೊಡಗಿಕೊಂಡು ಸಮಾಜ ಸೇವೆ ಮಾಡುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಸಹಾಯಕ ನಿಬಂಧಕರಾದ ಡಾ.ನೀಲಾಂಬಿಕ ಅವರು ನಿರ್ದೇಶಕರ ಜವಾಬ್ದಾರಿಗಳ ಕುರಿತು ಉಪನ್ಯಾಸ ನೀಡಿದರು. ಹಣ ದುರುಪಯೋಗ ಪ್ರಕರಣ ನಡೆಯ ದಂತೆ ಸಂಘಗಳಲ್ಲಿ ಎಚ್ಚರಿಕೆ ವಹಿಸಬೇಕು ಸಭೆಗಳಿಗೆ ನಿಯಮಿತವಾಗಿ ಹಾಜರಾಗಬೇಕು ಎಂದು ಹೇಳಿದರು.

ಸೌಹಾರ್ದ ನಿರ್ದೇಶಕ ಬಿ. ಸುಬ್ರಹ್ಮಣ್ಯ ಪ್ರಭು ಪ್ರಾಸ್ತಾವಿಕ ಮಾತನಾಡಿದರು. ಶಿವಮೊಗ್ಗ ಜಿಲ್ಲೆಯ ಶಿರವಂತೆ ಸಹಕಾರಿ ಸಂಘದ ಅಧ್ಯಕ್ಷರಾದ ಅನ್ನಪ್ಪ ಮರಗಿ, ಸೈದೂರಿನ ರಾಮಪ್ಪ, ಸೂಗುರು ಸಂಘದ ಪ್ರದೀಪಕುಮಾರ, ಶಿವಮೊಗ್ಗ ಮೇಲಿನ ಹಣಸವಾಡಿಯ ಶಿವಕುಮಾರ ಮತ್ತು ಕಣಲೆಯ ಮೋಹನ ಗದೆಮನೆ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಸೌಹಾರ್ದ ತರಬೇತಿ ಸಂಸ್ಥೆಯ ಉಪನ್ಯಾಸಕ ಎಸ ಜಿ ಪಾಟೀಲ ಸ್ವಾಗತಿಸಿದರೆ, ಅನಿಲ ಪಿ. ಮತ್ತು ಮಹಾಲಿಂಗಪ್ಪಾ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರ ಸಚಿವ ವಿ.ಸೋಮಣ್ಣ ಕಾರಿಗೆ ಮುತ್ತಿಗೆ ಯತ್ನ
ಬಿಎಸ್‌ಸಿ ಕುಟುಂಬದ ಶ್ರಮ ನಿಜಕ್ಕೂ ಶ್ಲಾಘನೀಯ: ಬಿ.ಎಸ್. ಯಡಿಯೂರಪ್ಪ