ಶೈಕ್ಷಣಿಕ ಅಭ್ಯುದಯಕ್ಕೆ ಪ್ರಾಥಮಿಕ ಶಿಕ್ಷಣ ಮುಖ್ಯ: ಶಾಸಕ ಮತ್ತಿಮಡು

KannadaprabhaNewsNetwork | Published : Jan 8, 2024 1:45 AM

ಸಾರಾಂಶ

ಸೆಲ್ಕೋ ಸೋಲಾರ್ ಪ್ರೈ.ಲಿಂ. ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಚಿತ್ತಾಪುರ ಸಂಯಕ್ತವಾಗಿ ಶಾಲೆಗೆ ನೀಡಿರುವ ಸೋಲಾರ ಸಂಚಾಲಿತ ಇ-ಸ್ಮಾರ್ಟ್‌ ತರಗತಿ,

ಕನ್ನಡಪ್ರಭ ವಾರ್ತೆ ಶಹಾಬಾದ

ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದಲ್ಲಿ, ಪ್ರಾಥಮಿಕ ಹಂತದ ಶಿಕ್ಷಣ ಬಹಳ ಮುಖ್ಯವಾಗಿದೆ. ಹಿಂದುಳಿದ ಪ್ರದೇಶ ಮಕ್ಕಳ ಶಿಕ್ಷಣ ನೀಡುತ್ತಿರುವ ಆದಿಜಾಂಬವ ಕಲ್ಯಾಣ ಸಂಘದ ಕಾರ್ಯ ಶ್ಲಾಘನೀಯವಾಗಿದೆ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರ ಶಾಸಕ ಬಸವರಾಜ ಮತ್ತಿಮಡು ಹೇಳಿದರು.

ಅವರು ಭಾನುವಾರ ನಗರದ ಹನುಮಾನ ನಗರದ ಆದಿ ಜಾಂಬವ ಕಲ್ಯಾಣ ಸಂಘ ಸಂಚಾಲಿತ ಕರ್ನಾಟಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆಲ್ಕೋ ಸೋಲಾರ್ ಪ್ರೈ.ಲಿಂ. ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಚಿತ್ತಾಪುರ ಸಂಯಕ್ತವಾಗಿ ಶಾಲೆಗೆ ನೀಡಿರುವ ಸೋಲಾರ ಸಂಚಾಲಿತ ಇ-ಸ್ಮಾರ್ಟ್‌ ತರಗತಿಗಳು ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಶಾಲೆಯ ಬೇಡಿಕೆಯಿಂತೆ ಕ.ಕ. ಅಭಿವೃದ್ದಿ ಮಂಡಳಿಯಿಂದ ಶಾಲೆಗೆ ಐದು ಕೋಣೆಗಳನ್ನು ಕಟ್ಟಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿ, ಶಾಲೆಗೆ ಸಣ್ಣಪುಟ್ಟ ಕೆಲಸಗಳಿಗಾಗಿ ಶಾಸಕ ಅನುದಾನದಿಂದ 5 ಲಕ್ಷ ರು. ನೀಡುವದಾಗಿ ಹೇಳಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೋ ಸೆಲ್ಕೋ ಸೋಲಾರ ಸಂಸ್ಥೆ ಗ್ರಾಮೀಣ ಹಾಗೂ ಕೊಳಚೆ ಪ್ರದೇಶದಲ್ಲಿ ಹೆಚ್ಚಿನ ಆಧ್ಯತೆ ನೀಡಲಿ ಎಂದು ಹೇಳಿದರು.

ಸೆಲ್ಕೋ ಸೋಲಾರ್ ಪ್ರೈ. ಲಿಂ. ಸಂಸ್ಥೆಯ ಕ್ಷೇತ್ರ ವ್ಯವಸ್ಥಾಪಕ ಯಲ್ಲಾಲಿಂದ ದೊಡ್ಡಮನಿ ಮಾತನಾಡಿ ಸಂಸ್ಥೆ ಶಿಕ್ಷಣ, ಆರೋಗ್ಯ, ವ್ಯವಸಾಯದಲ್ಲಿ ಸೌರ ಶಕ್ತಿ ಬಳಕೆಗೆ ಕೆಲಸ ಮಾಡುತ್ತಿದ್ದು, ರಾಜ್ಯದಲ್ಲಿ 4 ಸಾವಿರ ಶಾಲೆಗಳಲ್ಲಿ ಸೋಲಾರ ಸಂಚಾಲಿತ ಇ-ಸ್ಮಾರ್ಟ್‌ ವ್ಯವಸ್ಥೆ ಕಲ್ಪಿಸಲಾಗಿದೆ. 8 ಲಕ್ಷ ಕುಟುಂಬಗಳಿಗೆ ಸೌರ ವಿದ್ಯುತ್ ಕಲ್ಪಿಸಲಾಗಿದೆ. 720 ಆರೋಗ್ಯ ಕೇಂದ್ರಗಳಲ್ಲಿ ಸೌರ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಗ್ರಾಮೀಣ ಅಭಿವೃದ್ದಿ ಯೋಜನೆ ಚಿತ್ತಾಪುರ ತಾಲೂಕು ಯೋಜನಾಧಿಕಾರಿ ಕೃಷ್ಣಮೂರ್ತಿ ಮಾತನಾಡಿ ಚಿತ್ತಾಪುರ ತಾಲೂಕಿನಲ್ಲಿ 18 ಹಿಂದುಳಿದ ಶಾಲೆಗಳಿಗೆ ಮಕ್ಕಳಿಗೆ ಡೆಸ್ಕಾ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ವ ಸಹಾಯ ಸಂಘಗಳಿಗೆ ಬ್ಯಾಂಕ್‍ಗಳಿಂದ ಸಾಲ ಸೌಲಭ್ಯ ಕಲ್ಪಿಸುತ್ತಿದ್ದು, ಅದಕ್ಕೆ ಶ್ರೀ ಧರ್ಮಸ್ಥಳ ಸಂಸ್ಥೆ ಜಾಮೀನುದಾರರಾಗಿ ಕೆಲಸ ಮಾಡುತ್ತಿದ್ದು, ಈ ಮೂಲಕ ಮಹಿಳೆಯರಲ್ಲಿ ಆರ್ಥಿಕ ಸ್ವಾವಲಂಭನೆಗೆ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ನಿವೃತ್ತ ಹೆಚ್ಚುವರಿ ನಿಧೇಶಕ ಎಸ್.ಎಸ್.ದಿವಾಕರ್, ಯೋಗ ಗುರು ಮೋಹನ ಘಂಟ್ಲಿ, ಆದಿ ಜಾಂಬವ ಕಲ್ಯಾಣ ಸಂಘದ ಅಧ್ಯಕ್ಷ ಎ.ಹೆಚ್.ನಾಗೇಶ ಮಾತನಾಡಿದರು. ವೇದಿಕೆ ಮೇಲೆ ಎಚ್.ಎಸ್.ಮಟ್ಟಿ, ಲಕ್ಷ್ಮೀಬಾಯಿ, ಮಲ್ಲಿಕಾರ್ಜುನ ಚಟ್ನಳ್ಳಿ, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ನಗರ ಸಭೆ ಸದಸ್ಯ ಸೂರ್ಯಕಾಂತ ಕೋಬಾಳ, ಭೀಮರಾಯ ಮುದ್ನಾಳ, ಶರಣು ಪಗಲಾಪುರ, ಶಿವರಾಜ ಕೋರೆ, ಗುಂಡೇರಾವ ಇದ್ದರು.

Share this article