- ಕಬ್ಬಿನಹಳ್ಳಿ ಶಾಲೆಯಲ್ಲಿ ಇಂದಾವರ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ
ಗ್ರಾಮಾಂತರ ಮಟ್ಟದ ಸರ್ಕಾರಿ ಶಾಲೆಗಳನ್ನು ಮುಚ್ಚಿ, ಹೋಬಳಿ ಮಟ್ಟದಲ್ಲಿ ಪಬ್ಲಿಕ್ ಶಾಲೆಗಳು ಆರಂಭಗೊಳ್ಳುತ್ತಿದೆ. ಇದು ಗ್ರಾಮೀಣ ಹಾಗೂ ಕುಗ್ರಾಮದ ನಿವಾಸಿಗಳ ಬಡವರು, ದಿನಗೂಲಿ ನೌಕರರು ಹಾಗೂ ಕೂಲಿ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಮತ್ತೆ ಮರೀಚಿಕೆಯಾಗಲಿದೆ ಎಂದು ಎಚ್ಚರಿಸಿದರು.ಮಲೆನಾಡು ಭಾಗದಲ್ಲಿ ಹೆಚ್ಚು ಮಕ್ಕಳಿಗೆ ಆಧಾರ್ ಕಾರ್ಡ್ ಇಲ್ಲದೇ ತೀವ್ರ ಸಮಸ್ಯೆಯಾಗುತ್ತಿದೆ. ಇದನ್ನು ಬಗೆಹರಿಸಲು ಶಾಸಕರು, ತಹಸೀಲ್ದಾರರ ಗಮನಕ್ಕೆ ತರಬೇಕು. ಜೊತೆಗೆ ಸ್ಥಳೀಯ ಪಂಚಾಯಿತಿ ಸದಸ್ಯರು, ಪಿಡಿಒಗಳು ಆಧಾರ್ ಸೌಲಭ್ಯ ವಿಲ್ಲದ ಮಕ್ಕಳನ್ನು ಕೂಲಂಕೂಷವಾಗಿ ಪರಿಶೀಲಿಸಿ ವರದಿ ನೀಡಬೇಕು. ದೇಶದ ಪ್ರಜೆಗಳಾಗಿದ್ದಲ್ಲಿ ಆಧಾರ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು. ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಕಲಿಕಾ ಹಬ್ಬ ಕಾರ್ಯಕ್ರಮವನ್ನು ಶಾಲಾಡಳಿತ ಯಾವುದೇ ದೇಣಿಗೆ ಸಂಗ್ರಹಿಸದೇ ದಾನಿಗಳ ಸಹಕಾರ, ಸಿಬ್ಬಂದಿ ಸಹಯೋಗದಲ್ಲಿ ಆಚರಿಸುತ್ತಿರುವುದು ಸಂತೋಷ ದಾಯಕ. ಪ್ರಸ್ತುತ ಕಬ್ಬಿನ ಹಳ್ಳಿ ಶಾಲೆಗೆ ಸರ್ಕಾರ ಸಕಲ ಮೂಲ ಸವಲತ್ತು ಪೂರೈಸಿದ್ದು ಕ್ಷೀಣಿಸುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಿಸಲು ಶಿಕ್ಷಕರು ಮುಂದಾಗಬೇಕು ಎಂದರು.ಖಾಸಗೀ ಶಾಲೆಗಳಂತೆ ಎಳೆ ಮಕ್ಕಳಿಗೆ ಎಲ್‌ಕೆಜಿ ಮತ್ತು ಯುಕೆಜಿ ಶಾಲೆ, ಆಂಗ್ಲ ಭಾಷೆ ಕಲಿಕೆ, ವಿಶಾಲ ಆಟದ ಮೈದಾನ ಒದಗಿಸಿದೆ. ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳೆಂಬ ಕೀಳರಿಮೆ ಹೊಂದದಿರಿ. ದೇಶದ ಬಹುತೇಕ ಉನ್ನತ ಸ್ಥಾನಮಾನ ಗಳಿಸಿರುವ ಗಣ್ಯರು ಹಿಂದೆ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ನಡೆಸಿ ಮುಂಚೂಣಿಯಲ್ಲಿದ್ದಾರೆ ಎಂದು ತಿಳಿಸಿದರು.ನಾಡಿನ ಮಕ್ಕಳು ಭಾಷಾಭಿಮಾನದಲ್ಲಿ ಅಭಿಮಾನ ಶೂನ್ಯರಾಗದೇ ಕನ್ನಡವನ್ನು ಉಸಿರಿನ ಭಾಷೆಯಾಗಿಸಬೇಕು. ಹೊರ ರಾಜ್ಯ ಅಥವಾ ದೇಶಕ್ಕೆ ಉದ್ಯೋಗ ಹರಸಿ ತೆರಳಲು ಆಂಗ್ಲಭಾಷೆ ಅವಶ್ಯವಿದೆ. ಆದರೆ, ಮಾತೃಭಾಷೆ ಮರೆಸುವಂತೆ ಹೆಚ್ಚು ಆಂಗ್ಲ ಭಾಷೆ ಮೋಹಕ್ಕೆ ಒಳಗಾಗಬಾರದು ಎಂದರು.ಕಾಫಿ ಬೆಳೆಗಾರ ಹಾಗೂ ದಾನಿ ರಮೇಶ್‌ಗೌಡ ಮಾತನಾಡಿ, ವಿದ್ಯೆ ಕಲಿಸಿದ ಗುರುಗಳು ಮಕ್ಕಳು ಎಂದಿಗೂ ಮರೆಯ ಬಾರದು. ಮನುಷ್ಯ ಸಾವನ್ನಪ್ಪಿ ಬೂದಿಯಾಗುವತನಕ ಶಿಕ್ಷಕರ ಗಣನೀಯ ಸೇವೆ ಶ್ಲಾಘನೀಯ. ವಿದ್ಯಾರ್ಥಿಗಳ ಮನಸ್ಸು ಮಣ್ಣಿನ ಮುದ್ದೆಯಂತೆ, ಅದನ್ನು ಶಿಲೆ ಆಕಾರಕ್ಕೆ ತಯಾರಿಸುವವರು ಶಿಕ್ಷಕರು ಎಂದು ಹೇಳಿದರು.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ವಸಂತ್‌ಕುಮಾರ್ ಮಾತನಾಡಿ, ಕಬ್ಬಿನಹಳ್ಳಿ ಶಾಲಾ ವ್ಯಾಪ್ತಿ ಯಲ್ಲಿ ಆಧಾರ್ ಕಾರ್ಡ್‌ವಿಲ್ಲದೇ ಸ್ವದೇಶಿ ನಾಲ್ಕು ಮಕ್ಕಳಿಗೆ ಸೂಕ್ತ ದಾಖಲಾತಿ ಸಮೇತ ಆಧಾರ್ ಸೌಲಭ್ಯ ಕಲ್ಪಿಸಿದೆ. ಆದರೆ, 1400 ಕ್ಕೂ ಹೆಚ್ಚು ಕಡುಬಡತನದ ಮಕ್ಕಳಿಗೆ ಆಧಾರ್ ಕಾರ್ಡ್‌ವಿಲ್ಲ, ಈ ಬಗ್ಗೆ ನ್ಯಾಯಾಧೀಶರು, ಶಾಸಕರು ಗಮನಹರಿಸಬೇಕು ಎಂದರು.ಇದೇ ವೇಳೆ ಕಬ್ಬಿನಹಳ್ಳಿ ರಸ್ತೆ ಗುಂಡಿ ಮುಚ್ಚುವುದು ಹಾಗೂ ಗ್ರಾಮಸ್ಥರಿಗೆ ಕಂದಾಯ ಭೂಮಿ ಒದಗಿಸುವ ಸಂಬಂಧ ಮನವಿ ಮೇರೆಗೆ ಶಾಸಕರು ಪ್ರತಿಕ್ರಿಯಿಸಿ ಈಗಾಗಲೇ ಒಂದು ಗ್ರಾಮಕ್ಕೆ ಕಂದಾಯ ಭೂಮಿ ಸೌಲಭ್ಯ ಕಲ್ಪಿಸಿದ್ದು ಉಳಿದಿರುವುದಕ್ಕೆ ಸದ್ಯದಲ್ಲೇ ವಿತರಿಸಲಾಗುವುದು. ರಸ್ತೆ ಗುಂಡಿ ಮುಚ್ಚಲು ಸದ್ಯದಲ್ಲೇ ಕ್ರಮ ಕೈಗೊಂಡು ಮುಂದೆ ಹೊಸದಾಗಿ ಡಾಂಬರೀ ಕರಣಕ್ಕೆ ಮುಂದಾಗುತ್ತೇವೆ ಎಂದರು.ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮುಳ್ಳೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಫಿ ಬೆಳೆಗಾರರಾದ ಜಯ ಪ್ರಕಾಶಗೌಡ, ಶರತ್‌ಗೌಡ, ಶ್ರೀಕಂಠೇಗೌಡ, ಮುರಳಿಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಹಿರೇ ಕೊಳಲೆ ಗ್ರಾ.ಪಂ. ಅಧ್ಯಕ್ಷೆ ಕವಿತಾ ಸುನೀಲ್, ಸದಸ್ಯೆ ರೇಣುಕಾ ರಮೇಶ್, ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಚಂದ್ರಯ್ಯ, ಪಿಡಿಓ ವಿಜಯ, ಕಸಬಾ ಇಸಿಓ ಜಾನಕಿ ಉಪಸ್ಥಿತರಿದ್ದರು. 31 ಕೆಸಿಕೆಎಂ 1ಚಿಕ್ಕಮಗಳೂರು ತಾಲೂಕಿನ ಕಬ್ಬಿನಹಳ್ಳಿ ಶಾಲೆಯಲ್ಲಿ ಬುಧವಾರ ನಡೆದ ಇಂದಾವರ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯ ಕ್ರಮವನ್ನು ನ್ಯಾ. ವಿ. ಹನುಮಂತಪ್ಪ ಅವರು ಉದ್ಘಾಟಿಸಿದರು. ಶಾಸಕ ಎಚ್.ಡಿ. ತಮ್ಮಯ್ಯ, ರಮೇಶ್‌ಗೌಡ, ಮುಳ್ಳೇಶ್ ಇದ್ದರು.