ಕನ್ನಡಪ್ರಭ ವಾರ್ತೆ ಹಳೇಬೀಡು
ಮಾಧ್ಯಮದೊಂದಿಗೆ ಮಾತನಾಡುತ್ತಾ, ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ ನಿಯಮ ಉಲ್ಲೇಖ ೨೦೧೬ಕ್ಕಿಂತ ಮುಂಚೆ ೧ರಿಂದ ೭-೮ನೇ ತರಗತಿ ಬೋಧನೆಗೆ ಎಂದು ನೇಮಕಾತಿ ೨೫- ೩೦ ವರ್ಷಗಳಿಂದ ಬೋಧಿಸುತ್ತಿರುವ ಶಿಕ್ಷಕರನ್ನು ಕರ್ನಾಟಕ ಶಿಕ್ಷಣ ಇಲಾಖೆ ನೇಮಕಾತಿ ಟಿಸಿಎಚ್, ಡಿ.ಇಡಿ ಹೆಚ್ಚು ಅಂಕ ಪಡೆದವರನ್ನು ನೇಮಕಾತಿ ಮಾಡಲಾಗಿದೆ. ವೃಂದ ಮತ್ತು ನೇಮಕಾತಿ ನಿಯಮವನ್ನು ಅಗತ್ಯ ವಿಷಯದಲ್ಲಿ ಪದವಿಯನ್ನು ಹಾಗೂ ಟಿಇಟಿ ಪ್ರಮಾಣ ಪತ್ರ ಹೊಂದಿದ್ದಲ್ಲಿ ೬-೭ ನೇ ತರಗತಿ ಬೋಧಿಸಲು ಆರ್ಹರಾಗತಕ್ಕದ್ದು. ಇದರಿಂದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ. ಮುಂದಿನ ಚಳಿಗಾಲದ ಅಧಿವೇಶದಲ್ಲಿ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಇಲಾಖೆ ಸಚಿವರು ಇದರ ಬಗ್ಗೆ ಗಮನಹರಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು. ಮುಂದಿನ ದಿನಗಳಿಗೆ ರಾಜ್ಯಾದ್ಯಂತ ಎಲ್ಲಾ ಶಿಕ್ಷಕರು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರಘುಕುಮಾರ್, ನಿದೇರ್ಶಕರು ಮಂಜಪ್ಪ, ತಿಪ್ಪೇಸ್ವಾಮಿ, ಲೋಕೇಶ್, ಜಗದೀಶ್, ದೇವರಾಜ್, ಪುಷ್ಪಾವತಿ, ಗೌರಮ್ಮ ಶಿಕ್ಷಕರಿದ್ದರು.