ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವರ್ಷದ ಹಿಂದೆ ಈ ಪರಿಸ್ಥಿತಿ ಬಗ್ಗೆ ಹೇಳಿದ್ದರು. ದೇಶದ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಇದರ ಬಗ್ಗೆ ಸರ್ವಪಕ್ಷಗಳ ಸಭೆ ಕರೆಯಿರಿ. ಪರಿಹಾರ ಕಂಡುಕೊಳ್ಳಿ ಎಂದು ಹೇಳಿದ್ದರು. ಆರ್ಥಿಕ ಸಚಿವರು ಅನೇಕ ಆರ್ಥಿಕ ತಜ್ಞರ ಸೇರಿಸಿ ಸಭೆ ನಡೆಸಿ ಅಂತ ಹೇಳಿದ್ದರು. ಆದರೆ ಪ್ರಧಾನಿ ಮೋದಿಯವರು ಯಾವುದನ್ನು ಪರಿಗಣಿಸಲಿಲ್ಲ. ರಾಜಕೀಯಕ್ಕೋಸ್ಕರ ಕೆಲವು ತೀರ್ಮಾನಗಳನ್ನು ತೆಗೆದುಕೊಂಡರು ಎಂದರು.
ಪಂಚರಾಜ್ಯಗಳ ಚುನಾವಣೆ ಬಳಿಕ ಎಲ್ ಪಿ ಜಿ ಬೆಲೆ ಏರಿಕೆ ಮಾಡಿದರು. ಈಗ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿದರು. ಇಂದು ಕಬ್ಬಿಣ ಜಲ್ಲಿ ಟಾರು ಪ್ರತಿಯೊಂದರ ಬೆಲೆ ನಾಲ್ಕರಷ್ಟು ಹೆಚ್ಚಳವಾಗಿದೆ. ಎಲ್ಲವುಗಳ ಬೆಲೆ ಹೆಚ್ಚಳವಾಗಿದೆ. ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಡಾಲರ್ ಬೆಲೆ 96 ರೂಪಾಯಿ ಆಗಿದೆ. ಇದು ದೇಶದ ಪರಿಸ್ಥಿತಿ ಆಗಿದೆ. ಅನೇಕ ತಜ್ಞರು ಇದ್ದಾರೆ ಅವರೆಲ್ಲರ ಸಭೆ ಕರೆಯಿರಿ. ಕೆಲವರ ಕರೆಯಲು ನಿಮಗೆ ಇಷ್ಟವಿಲ್ಲದೆ ಇರಬಹುದು. ಮೊನ್ನೆ ಪ್ರಧಾನಿ ಸೂಚನೆ ನೀಡಿದರು.ಆದರೆ ಸಾರ್ವಜನಿಕರು ಪ್ರಧಾನಿ ಹೇಳದಿದ್ದರೂ ಪಾಲನೆ ಮಾಡುತ್ತಿದ್ದಾರೆ. ಕಾರಲ್ಲಿ ಓಡಾಡಬೇಡಿ ಎಂದಿದ್ದಾರೆ. ಆದರೆ ಎಲ್ಲಾ ರೇಟ್ ಜಾಸ್ತಿ ಆಗಿರುವುದರಿಂದ ಜನರೇ ಬಳಸಲು ಸಾಧ್ಯವಾಗುತ್ತಿಲ್ಲ. ಡಾಲರ್ ರೇಟ್ 100 ರುಪಾಯಿಗೆ ಹೋಗುವಂತೆ ಆಗಿದೆ. ಮತ್ತೆ ಜನರು ವಿದೇಶಿ ಪ್ರವಾಸ ಮಾಡಲು ಹೇಗೆ ಸಾಧ್ಯ. ಅವರು ಹೇಳುತ್ತಿರುವುದನ್ನು ಬಡವರು ಮಧ್ಯಮ ವರ್ಗದ ಜನರು ಅನಿವಾರ್ಯವಾಗಿ ಪಾಲನೆ ಮಾಡುತ್ತಿದ್ದಾರೆ ಎಂದರು.
ಜನರು ಎಚ್ಚೆತ್ತುಕೊಂಡರೆ ಪ್ರಜಾಪ್ರಭುತ್ವದಲ್ಲಿ ಆಗುವ ತಪ್ಪನ್ನು ಸರಿಪಡಿಸಬಹುದು. ಇಲ್ಲದಿದ್ದರೆ ತಪ್ಪು ಸರಿಪಡಿಸಲು ಸಾಧ್ಯವೇ ಇಲ್ಲ. ಜಾಣ ಕುರುಡುತನಕ್ಕೆ ಬಲಿಯಾದರೆ ಏನು ಪ್ರಯೋಜನ ಆಗುವುದಿಲ್ಲ. ದೇಶದಲ್ಲಿ ಗೋಲ್ಡ್ ಬಾಂಡ್ಸ್ ಗಳು ಇವೆ. ಜನರ ಅದರ ಮೇಲೆ ಹೂಡಿಕೆ ಮಾಡಿದ್ದಾರೆ. ಅದನ್ನು ವಾಪಸ್ ಪಡೆಯುವ ಸಮಯ ಹತ್ತಿರ ಬರುತ್ತಿದೆ. ಇದನ್ನು ಸರ್ಕಾರಕ್ಕೆ ವಾಪಸ್ ಕೊಡಲು ಸಾಧ್ಯವಿದೆಯೇ. ಕೋಟ್ಯಂತರ ರುಪಾಯಿ ಗೋಲ್ಡ್ ಬಾಂಡ್ಸ್ ಇವೆ. ಆಮದು ಖಡಿತ ಗೊಳಿಸಬೇಕು ಎನ್ನುವುದು ಸರಿ.