ಕನ್ನಡಪ್ರಭ ವಾರ್ತೆ ನೆಲಮಂಗಲ/ದಾಬಸ್ಪೇಟೆ
ನೆಲಮಂಗಲ ಪಟ್ಟಣದ ಬಸವಣ್ಣದೇವರ ಮಠದ ಶ್ರೀ ಬಸವೇಶ್ವರ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನನ್ನ ಕನಸಿನ ಭಾರತ ವಿಷಯದಡಿ ಚಿತ್ರಕಲಾ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಾರ್ವಜನಿಕ ಸೇವಾ ಪಯಣ ಹಾಗೂ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರವ್ಯಾಪಿ ‘ಸೇವಾ ಸಂಕಲ್ಪ ಅಭಿಯಾನ’ದ ಭಾಗವಾಗಿ 140 ಕೋಟಿ ಭಾರತೀಯರ ಕನಸು, ಸಂಕಲ್ಪ ಮತ್ತು ಶಕ್ತಿಯೊಂದಿಗೆ 2047ರ ವೇಳೆಗೆ ಭಾರತವನ್ನು ಸಬಲ, ಸ್ವಾವಲಂಬಿ ಹಾಗೂ ''''''''ವಿಕಸಿತ ಭಾರತ''''''''ವನ್ನಾಗಿ ನಿರ್ಮಿಸುವ ಪ್ರಧಾನಿಯವರ ದೂರದೃಷ್ಟಿಯನ್ನು ಸಾಕಾರಗೊಳಿಸಲು ಈ ಸ್ಪರ್ಧೆಗಳು ಪ್ರೇರಣೆ ನೀಡಲಿವೆ ಎಂದು ಹೇಳಿದರು.ಕಾರ್ಯಕ್ರಮದ ಜಿಲ್ಲಾ ಸಂಚಾಲಕಿ ವೇದಾವತಿ ಮಾತನಾಡಿ ಪ್ರಧಾನಿ ಮೋದಿಯವರ ಸುದೀರ್ಘ ಸಾರ್ವಜನಿಕ ಸೇವಾ ಸಿದ್ಧಾಂತವು ಇಂದಿನ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮತ್ತು ಸಮಾಜ ಸೇವೆಯ ಗುಣಗಳನ್ನು ಬಿತ್ತಲು ದಾರಿದೀಪವಾಗಿದೆ. ಪ್ರಧಾನಿ ಮೋದಿಯವರ ಕನಸಿನ ಯೋಜನೆಗಳಾದ ‘ಸ್ವಚ್ಛ ಭಾರತ’, ‘ಡಿಜಿಟಲ್ ಇಂಡಿಯಾ’, ಪರಿಸರ ಸಂರಕ್ಷಣೆ ಹಾಗೂ ದೇಶದ ತಾಂತ್ರಿಕ ಪ್ರಗತಿಯನ್ನು ಬಿಂಬಿಸುವ ಮತ್ತು ಯುವ ಭಾರತದ ಕಲ್ಪನೆಗಳನ್ನು ಬಣ್ಣಗಳ ಮೂಲಕ ಕಾಗದದ ಮೇಲೆ ಅರಳಿಸಲು ವಿದ್ಯಾರ್ಥಿಗಳಿಗೆ ಈ ಸ್ಪರ್ಧೆ ವೇದಿಕೆಯಾಗಿದೆ. ಅದಲ್ಲದೆ ನವ ಭಾರತದ ನಿರ್ಮಾಣದಲ್ಲಿ ಯುವಕರ ಪಾತ್ರ, ದೇಶದ ಪ್ರಗತಿಗಾಗಿ ಕೈಗೊಳ್ಳಬೇಕಾದ ಸಂಕಲ್ಪಗಳು ಮತ್ತು ವ್ಯಸನಮುಕ್ತ ಸಮಾಜದ ಸೃಷ್ಟಿಗೆ ವಿದ್ಯಾರ್ಥಿಗಳು ತಮ್ಮ ವಾಕ್ಚಾತುರ್ಯದ ಮೂಲಕ ವಿಚಾರಗಳನ್ನು ಮಂಡಿಸಿದ್ದು ಖುಷಿ ತಂದಿದೆ ಎಂದು ಹೇಳಿದರು.