ಪ್ರಧಾನಿ ನರೇಂದ್ರ ಮೋದಿ ದೇಶದ ಶಕ್ತಿ

KannadaprabhaNewsNetwork |  
Published : Apr 28, 2025, 12:45 AM IST
ಪೋಟೋ : 27 ಎಚ್.ಎಚ್.ಆರ್ ಪಿ. 1ಹೊಳೆಹೊನ್ನೂರಿನ ಸಮೀಪದ ಎಮ್ಮೆಹಟ್ಟಿ ಗ್ರಾಮದಲ್ಲಿ ಮನ್ ಕೀಬಾತ್ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಹಾಗೂ ಜಿಲ್ಲಾಧ್ಯಕ್ಷ ಜಗದೀಶ್ ವಿಕ್ಷೀಸಿದರು. | Kannada Prabha

ಸಾರಾಂಶ

ಹೊಳೆಹೊನ್ನೂರು: ಮೋದಿ ದೇಶದ ಶಕ್ತಿ ಹಾಗೂ ಯುವಕರ ನವಚೈತನ್ಯ ಎಂದು ವಿಧಾನ ಪರಿಷತ್ ಸದಸ್ಯ ಡಾ.ದನಂಜಯ ಸರ್ಜಿ ಹೇಳಿದರು.

ಹೊಳೆಹೊನ್ನೂರು: ಮೋದಿ ದೇಶದ ಶಕ್ತಿ ಹಾಗೂ ಯುವಕರ ನವಚೈತನ್ಯ ಎಂದು ವಿಧಾನ ಪರಿಷತ್ ಸದಸ್ಯ ಡಾ.ದನಂಜಯ ಸರ್ಜಿ ಹೇಳಿದರು.

ಅವರು ಸಮೀಪದ ಎಮ್ಮೆಹಟ್ಟಿ ಗ್ರಾಮದಲ್ಲಿ ಭಾನುವಾರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ವಿಕ್ಷೀಸಿ ಮಾತನಾಡಿದರು.

ಮೋದಿಯವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯ ಭಾಷಣ ಮಾಡದೇ ದೇಶದ ಕೆಲವು ರೈತರ ಉತ್ತಮ ಬೆಳೆಗಳ ಬೆಳೆದು ಆರ್ಥಿಕವಾಗಿ ಸದೃಢರಾಗಿರುವ ಬಗ್ಗೆ ಹಾಗೂ ಜೀವನದಲ್ಲಿ ಸ್ವಾಲಂಭಿಯಾಗಿ ಹೇಗೆ ಬದುಕಬೇಕೆಂದು ತಿಳಿಸುತ್ತಾರೆ. ಇದರಿಂದಾಗಿ ಪ್ರತಿಯೊಬ್ಬರೂ ಅವರ ಕಾರ್ಯಕ್ರಮವನ್ನು ನೋಡುವಂತೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ದೇಶದ ಜನತೆಗೆ ಮಾತು ಕೊಟ್ಟಂತೆ ನಡೆದುಕೊಳ್ಳುತ್ತಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ದೇಶದ ಅಭಿವೃದ್ಧಿಯ ಜೊತೆಗೆ ದೇಶದ ಆರ್ಥಿಕತೆ ಮುಂಚೂಣಿಗೆ ಬರಲಿದ್ದು, ದೇಶವು ಆರ್ಥಿಕತೆಯಲ್ಲಿ ಮೂರನೇ ಸ್ಥಾನಕ್ಕೇರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.

ಕಾಶ್ಮೀರ ಪೆಹಲ್ಗಾಮ್‌ನಲ್ಲಿ ನಡೆದ ಘಟನೆಯಿಂದ ಹಿಂದೆ ಸರಿಯುವ ಮಾತಿಲ್ಲ. ಈಗಾಗಲೇ ಪ್ರಧಾನಿ ಜನತೆ ಮಾತು ನೀಡಿದ್ದಾರೆ. ಉಗ್ರರ ಸಂಹಾರ ಮಾಡದೇ ಬಿಡುವುದಿಲ್ಲವೆಂದು ಈ ಹಿಂದೆ ಸರ್ಜಿಕಲ್ ಸ್ಟೈಕ್ ಮುಖಾಂತರ ಉತ್ತರ ನೀಡಾಗಿದೆ. ಆದರೂ ಕೂಡ ಪಾಕಿಸ್ತಾನ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಇದರ ಬೆಲೆ ಪಾಕಿಸ್ತಾನ ತೆರಬೇಕಾಗುತ್ತದೆ ಎಂದರು.

ನಮ್ಮ ದೇಶದಲ್ಲಿ ಶೇ.60% ಯುವಕರಿದ್ದಾರೆ. ದುಡಿಯುವ ಕೈಗಳಿಗೆ ಬೆಂಬಲ ನೀಡಿದರೆ ದೇಶದ ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ನಿಟ್ಟಿನಲ್ಲಿ ಪ್ರಧಾನಿ ಕ್ರಮ ಕೈಗೊಂಡಿದ್ದಾರೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಯಾವುದೇ ಅಭಿವೃದ್ಧಿಯಾಗುತ್ತಿಲ್ಲ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಪೈಪೋಟಿ ಏರ್ಪಟ್ಟಿದೆ. ಇದರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಇದೀಗ ಜಾತಿ ಗಣತಿ ಜಾರಿಗೆ ತರುವುದಕ್ಕೆ ಮುಂದಾಗಿದ್ದು, ಕಾಂಗ್ರೆಸ್ ಪಕ್ಷದಲ್ಲೇ ಒಗ್ಗಟ್ಟಿಲ್ಲ. ಜಾತಿ ಗಣತಿ ಜಾರಿಯಾದರೇ ಸರ್ಕಾರ ಪತನ ಪ್ರಾರಂಭವಾದಂತೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಮಾತನಾಡಿ, ಪ್ರಧಾನ ಮಂತ್ರಿಯವರು ಸಾಮಾನ್ಯ ಪ್ರೇರಣೆ ಕೊಡುವ ಉದ್ದೇಶವೇ ಮನ್ ಕೀ ಬಾತ್. ಇಡೀ ಭಾರತವನ್ನು ಒಟ್ಟಿಗೆ ಕೊಂಡ್ಯೋಯ್ಯುವ ವಿಶೇಷ ಪ್ರಯತ್ನ ಮೋದಿಯವರದ್ದು, ಈ ಕಾರ್ಯಕ್ರಮವನ್ನು 8 ರಿಂದ 10 ಕೋಟಿ ಜನಸಂಖ್ಯೆ ವಿಕ್ಷಣೆ ಮಾಡುತ್ತಾರೆ. ಯಾರೋಬ್ಬ ರಾಜಕಾರಣಿ ಮಾಡದಂತಹ ಕೆಲಸವನ್ನು ಮೋದಿ ಅವರು ಮಾಡುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲೇಶಪ್ಪ, ಯುವ ಮೂರ್ಚಾಧ್ಯಕ್ಷ ಕಿರಣ್, ಬೂತ್ ಕಮಿಟಿ ಅಧ್ಯಕ್ಷ ರಂಗನಾಥ, ಶಂಕರ, ಪರಮೇಶ್ವರಪ್ಪ, ಮಂಜುನಾಥ, ಕಿರಣ್ ಕುಮಾರ್, ನಾಗರಾಜ , ಶ್ರೀನಿವಾಸ್, ರಘು, ಕೃಷ್ಣಮೂರ್ತಿ, ನಂಜುಂಡಿ, ಶ್ರೀಧರ ಸೇರಿದಂತೆ ಇನ್ನಿತರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...