- ಮೋಹನ್ ಎನ್‌ಕ್ಲೇವ್‌ನಲ್ಲಿ ಮನ್ ಕಿ ಬಾತ್ ಕಾರ್ಯಕ್ರಮ ವೀಕ್ಷಿಸಿದ ಬಿಜೆಪಿಗರು
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ಸರಣಿಯಲ್ಲಿ ಮಾತನಾಡಿ, ದೇಶದ ಐತಿಹಾಸಿಕ ಕೋಟೆಗಳು, ಪ್ರಕೃತಿದತ್ತ ಸಂಪತ್ತಿನ ಬಗ್ಗೆ ಉಲ್ಲೇಖಿಸಿದರು. ಕರ್ನಾಟಕದ ಚಿತ್ರದುರ್ಗ ಹಾಗೂ ಕಲಬುರಗಿ ಐತಿಹಾಸಿಕ ಕೋಟೆಗಳು, ಮಹಾಪುರುಷರು, ಸಾಧಕರ ಬಗ್ಗೆ ಹಾಗೂ ರಾಜರ ಪರಾಕ್ರಮಗಳ ಬಗ್ಗೆ ಹಾಡಿ ಹೊಗಳಿದರು.ಭಾನುವಾರ ಬೆಳಗ್ಗೆ ಹೊನ್ನಾಳಿ ಪಟ್ಟಣದ ಮೋಹನ್ ಎನ್‌ಕ್ಲೇವ್ ಸಭಾಂಗಣದದಲ್ಲಿ ಮನ್ ಕಿ ಬಾತ್ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಲಾಯಿತು. ಮಂಗಳೂರಿನಲ್ಲಿ ಸ್ವಚ್ಛತೆ ಕಾಪಾಡಿರುವ ಬಗ್ಗೆಯೂ ಮೋದಿ ಮಾತನಾಡಿದರು. ಆಗ ಬಿಜೆಪಿ ಕಾರ್ಯಕರ್ತರು ಚಪ್ಪಾಳೆ ತಟ್ಟಿ ರಾಜ್ಯದ ಬಗ್ಗೆ ಅವರಿಗಿರುವ ಅಭಿಮಾನದ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಅಂತರಿಕ್ಷ ಯಾನದಲ್ಲಿ ಭಾರತದ ಸಾಧನೆ ಹಾಗೂ ಅಂತರಿಕ್ಷ ಯಾನಿ ಶುಭಾಂಶು ಶುಕ್ಲಾ ಅವರ ಮಹತ್ತರ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಚಂದ್ರಯಾನದ ಬಗ್ಗೆ ಮಕ್ಕಳಗಿರುವ ಆಸಕ್ತಿಗೆ ಹರ್ಷ ವ್ಯಕ್ತಪಡಿಸಿದರು. ವೋಕಲ್ ಫಾರ್ ಲೋಕಲ್ ನುಡಿಗೆ ಆತ್ಮನಿರ್ಭರ ಭಾರತ ದೃಢನೆಲವಾಗಿದೆ ಎಂದು ಅವರು ತಿಳಿಸಿದರು.ಕಾರ್ಯಕ್ರಮದ ನಂತರ ಮನ್ ಕಿ ಬಾತ್‌ನ 4 ರಾಜ್ಯಗಳ ಪ್ರಭಾರ, ಮಾಜಿ ಶಾಸಕ ಪಿ.ರಾಜೀವ್ ಮಾತನಾಡಿ, ಮೋದಿ ಅವರ ಈ ಕಾರ್ಯಕ್ರಮದ ದೇಶವಾಸಿಗಳಿಗೆ ಪ್ರೇರಣಾದಾಯಕವಾಗಿದೆ. ಹಾಗಾಗಿ ಈ ಕಾರ್ಯಕ್ರಮ ದಿನದಿಂದ ದಿನಕ್ಕೆ ಹೆಚ್ಚು ಖ್ಯಾತಿ ಪಡೆದಿದೆ. ನಮ್ಮ ಬೂತ್‌ಮಟ್ಟದ ಕಾರ್ಯಕರ್ತರು ಪ್ರತಿ ತಿಂಗಳು ಪ್ರತಿ ಮನೆಯಲ್ಲಿ ಒಂದೆಡೆ ಸೇರಿ ಕಾರ್ಯಕ್ರಮದ ವೀಕ್ಷಣೆ ನಂತರ ಪಕ್ಷದ ಸಂಘಟನೆಗೆ ಈ ಕಾರ್ಯಕ್ರಮ ವರವಾಗಿದೆ. ಮುಂದಿ ಬಾರಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ಪಕ್ಷದ ಸಂಘಟನೆ ಅಗತ್ಯವಾಗಿದೆ ಎಂಬುದನ್ನು ಎಲ್ಲರೂ ಮನಗಾಣಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.
ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಶಿವಯೋಗಿ ಸ್ವಾಮಿ, ಮಾಜಿ ಶಾಸಕ ಬಸವರಾಜ್ ನಾಯ್ಕ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಶೇಖರ ನಾಗಪ್ಪ, ಮಾಜಿ ಸೈನಿಕ ಸಿದ್ದೇಶ್ ಬೆನಕನಹಳ್ಳಿ ಮಾತನಾಡಿದರು.ತಾಲೂಕು ಬಿಜೆಪಿ ಅಧ್ಯಕ್ಷ ಅರಕೆರೆ ನಾಗರಾಜು, ಮಾಜಿ ಸುರೇಶ್, ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೆ.ಪಿ.ಕುಬೇರಪ್ಪ, ಪ್ರಧಾನ ಕಾರ್ಯದರ್ಶಿ ಮಾರುತಿ ನಾಯ್ಕ್, ದೊಡ್ಡೇರಿ ರಾಜಣ್ಣ, ಸುರೇಂದ್ರ ನಾಯ್ಕ್, ರಮೇಶ್ ಗೌಡ, ನೆಲಹೊನ್ನೆ ಮಂಜುನಾಥ್, ಮಾಜಿ ಯೋಧರು ಇತರರು ಇದ್ದರು.
- - -(ಬಾಕ್ಸ್) * ಮನ್ ಕಿ ಬಾತ್ ಎಲ್ಲರಿಗೂ ಪ್ರೇರಣಾಶಕ್ತಿ: ರೇಣುಕಾಚಾರ್ಯ
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಪ್ರಧಾನಿ ಮೋದಿ ಅವರ ಮನದ ಮಾತು ದೇಶದೆಲ್ಲಡೆ ಖ್ಯಾತಿಗಳಿಸಿ ಇತರರಿಗೆ ಪ್ರಬಲ ಪ್ರೇರಣಾಶಕ್ತಿಯಾಗಿದೆ. ಪ್ರಸ್ತುತ ಮಾಧ್ಯಮಗಳಲ್ಲಿ ಹೆಚ್ಚಾಗಿ ನಕಾರಾತ್ಮಕವಾದ ಅಂಶಗಳನ್ನು ಜನ ಗಮನಿಸುವಂತಾಗಿದೆ. ಆದರೆ ಪ್ರತಿ ತಿಂಗಳಾಂತ್ಯದ ಮನ್ ಕಿ ಬಾತ್‌ನಲ್ಲಿ ಪ್ರಧಾನಿಯವರು ಇಡೀ ದೇಶದ ಧಾರ್ಮಿಕ, ಶೈಕ್ಷಣಿಕ, ಔದ್ಯೋಗಿಕ, ವಿಜ್ಞಾನ, ಪ್ರಾಕೃತಿಕ ಸಂಪತ್ತು, ವೀರರ ಹಾಗೂ ಮಹಾತ್ಮರ ಕುರಿತು ಮಾಹಿತಿಗಳನ್ನು ಒದಗಿಸುತ್ತಿದ್ದಾರೆ. ಆ ಮೂಲಕ ಸಕಾರಾತ್ಮಕ ಹಾಗೂ ಸಾಧನೆಯನ್ನು ಬೆಳೆಸುವಲ್ಲಿ ಮೋದಿ ಅವರ ಮನ್ ಕಿ ಬಾತ್ ಮಹತ್ತರ ಸ್ಥಾನ ಪಡೆದಿದೆ ಎಂದರು.- - -
-27ಎಚ್.ಎಲ್.ಐ2., 2ಎ.ಜೆಪಿಜಿ:ಮೋಹನ್ ಎನ್‌ಕ್ಲೇವ್‌ನಲ್ಲಿ ಭಾನುವಾರ ಮೋದಿ ಮನ್ ಕಿ ಬಾತ್ ಕಾರ್ಯಕ್ರವನ್ನು ಬಿಜೆಪಿ ಮುಖಂಡರು, ಕಾರ್ಯಕರ್ತರು ವೀಕ್ಷಿಸಿದರು.