ಆರೋಗ್ಯವಂತರಾಗಿರಲು ಸ್ವಚ್ಛತೆಗೆ ಆದ್ಯತೆ ನೀಡಿ

KannadaprabhaNewsNetwork |  
Published : Jan 24, 2026, 04:00 AM IST
ಮುದ್ದೇಬಿಹಾಳ ಪಟ್ಟಣದ ಇಂದಿರಾ ವೃತ್ತದ ಬಳಿಯಿರುವ ತರಕಾರಿ ಮಾರುಕಟ್ಟಿಯಲ್ಲಿ ಪುರಸಭೆ ಹಾಗೂ ತಾಲೂಕು ಬ್ಲಾಕ್ ಕಾಂಗ್ರೆಸ್, ತಾಲೂಕು ಮಹಿಳಾ ಬ್ಲಾಕ್ ಹಾಗೂ ಯೂಥ್‌ ಕಾಂಗ್ರೆಸ್ ಘಟಕಗಳ ಸಹಯೋಗದಲ್ಲಿ ಜ.26 ಗಣರಾಜ್ಯೋತ್ಸವ ಅಂಗವಾಗಿ ನಡೆದ ಸ್ವಚ್ಛತಾ ಅಭಿಯಾನಕ್ಕೆ ದೇವಿಕಾ ಫೌಂಡೇಶನ್ ಮುಖ್ಯಸ್ಥೆ ಪಲ್ಲವಿ ನಾಡಗೌಡ ಶುಕ್ರವಾರ ಚಾಲನೆ ನೀಡಿದರು. | Kannada Prabha

ಸಾರಾಂಶ

ಪುರಸಭೆಯಿಂದ ಈಗಾಗಲೇ ವಾರ್ಡ್‌ಗಳಲ್ಲಿ ಕಸದ ಡಬ್ಬಿ ವಿತರಿಸಲಾಗುತ್ತಿದೆ. ನಿವಾಸಿಗಳು ಹಸಿ-ಒಣ ಕಸ ಪ್ರತ್ಯೇಕಿಸಿ ನೀಡುವುದರಿಂದ ನಗರದ ಸ್ವಚ್ಛತೆ ಸಾಧ್ಯವಾಗುತ್ತದೆ. ಪುರಸಭೆ ಪೌರ ಕಾರ್ಮಿಕರೊಂದಿಗೆ ನಿವಾಸಿಗಳು ಸಹಕಾರ ನೀಡಿ, ಪುರಸಭೆಯಿಂದ ಮನೆಗಳಿಗೆ ಬರುವ ವಾಹಕ್ಕೆ ಕಸ ಹಾಕಬೇಕು. ಇದರಿಂದ ಕಸದ ರಾಶಿಗಳು ಬೀಳುವುದು ತಪ್ಪುತ್ತದೆ. ಬೀದಿಯು ಸಹ ಸ್ವಚ್ಛವಾಗಿರುತ್ತದೆ ಜತೆಗೆ ಉತ್ತಮ ಪರಿಸರ ಕಾಣಬಹುದಾಗಿದೆ ಎಂದು ದೇವಿಕಾ ಫೌಂಡೇಶನ್ ಮುಖ್ಯಸ್ಥೆ ಪಲ್ಲವಿ ನಾಡಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಮನುಷ್ಯ ಸದಾ ಉತ್ತಮ ಆರೋಗ್ಯವಂತನಾಗಿ ಬಾಳಿ ಬದುಕಬೇಕಾದರೇ ನಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿರಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರು ಕಸ, ಕಡ್ಡಿಗಳನ್ನು ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಎಸೆಯದೇ ಜಾಗೃತರಾಗಬೇಕು. ಸ್ವಚ್ಛತೆಗೆ ಮೊದಲು ಆದ್ಯತೆ ನೀಡಬೇಕು ಎಂದು ದೇವಿಕಾ ಫೌಂಡೇಶನ್ ಮುಖ್ಯಸ್ಥೆ ಪಲ್ಲವಿ ನಾಡಗೌಡ ಹೇಳಿದರು.

ಪಟ್ಟಣದ ಇಂದಿರಾ ವೃತ್ತದ ಬಳಿಯಿರುವ ತರಕಾರಿ ಮಾರುಕಟ್ಟೆಯಲ್ಲಿ ಪುರಸಭೆ ಹಾಗೂ ತಾಲೂಕು ಬ್ಲಾಕ್ ಕಾಂಗ್ರೆಸ್, ತಾಲೂಕು ಮಹಿಳಾ ಬ್ಲಾಕ್ ಹಾಗೂ ಯೂಥ್‌ ಕಾಂಗ್ರೆಸ್ ಘಟಕಗಳ ಸಹಯೋಗದಲ್ಲಿ ಜ.26 ಗಣರಾಜ್ಯೋತ್ಸವ ಅಂಗವಾಗಿ ನಡೆದ ಸ್ವಚ್ಛತಾ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು. ಈ ವೇಳೆ ತರಕಾರಿ ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ ಸ್ವಚ್ಛತೆ ಪರಿಶೀಲಿಸಿದರು.

ಸ್ವಚ್ಛತಾ ವಾಹನಗಳ ಮೂಲಕ ಕಸದ ಸರಿಯಾದ ಕಸ ವಿಲೇವಾರಿ ವಿಧಾನ, ಕುಡಿಯುವ ನೀರಿನ ಗುಣಮಟ್ಟದ ಕಾಪಾಡುವಿಕೆ ಹಾಗೂ ಪ್ಲಾಸ್ಟಿಕ್ ನಿಷೇಧ ಬಗ್ಗೆ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಅರಿವು ನೀಡಿದರು. ಸ್ವಚ್ಛತೆಯು ನಮ್ಮ ಜವಾಬ್ದಾರಿ ಮಾತ್ರವಲ್ಲ, ಅದು ನಮ್ಮ ಆರೋಗ್ಯ ಮತ್ತು ಪರಿಸರದ ರಕ್ಷಣೆಗೆ ಮೂಲಭೂತವಾಗಿದೆ. ಈ ದಿಸೆಯಲ್ಲಿ ಪ್ಲಾಸ್ಟಿಕ್‌ ಬದಲಿಗೆ ಕಾಗದದ ಚೀಲಗಳು ಹಾಗೂ ಬಟ್ಟೆಯ ಚೀಲಗಳ ಬಳಕೆಯನ್ನು ಉತ್ತೇಜಿಸುವಂತೆ ಪುರಸಭೆ ಇಲಾಖೆ ಮಾತ್ರವಲ್ಲದೇ ಸ್ವಯಂ ಸೇವಾ ಸಂಘಗಳು, ವರ್ತಕರು ಸ್ವಯಂ ಪ್ರೇರಿತವಾಗಿ ಹೆಚ್ಚಿನ ರೀತಿಯಲ್ಲಿ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಮಾತನಾಡಿ, ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಪಟ್ಟಣದ ತಹರಕಾರಿ ಮಾರುಕಟ್ಟೆಯನ್ನು ಜೀರ್ಣೋದ್ಧಾರ ಮಾಡಲು ಸರ್ಕಾರದಿಂದ ಈಗಾಗಲೇ ವಿಶೇಷ ಅನುದಾನ ಬಿಡಿಗಡೆ ಮಾಡಿಸಿದ್ದು. ಈ ಸಂದರ್ಭದಲ್ಲಿ ತರಕಾರಿ ವ್ಯಾಪಾರಸ್ಥರ ಬೇಡಿಕೆಯಂತೆ ಶುದ್ಧ ಕುಡಿಯುವ ನೀರು, ಮಳಿಗೆಗಳನ್ನು, ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಸೇರಿದಂತೆ ಅನೇಕ ರೀತಿಯ ಮೂಲಸೌಲಭ್ಯವುಳ್ಳ ಮಾರುಕಟ್ಟೆ ಮಾಡಲು ನಿರ್ಧರಿಸಲಾಗಿದೆ. ಆದಷ್ಟು ಬೇಗ ಕಾಮಗಾರಿ ಪ್ರಾರಂಭಿಸುವ ಮೂಲಕ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಲಾಗುವುದು ಜೊತೆಗೆ ಈಗಾಗಲೇ ಶೌಚಾಲಯ ನಿರ್ಮಾಣಗೊಂಡಿದ್ದು ಇದನ್ನೂ ಕೂಡ ಆದಷ್ಟು ಬೇಗ ಲೋಕಾರ್ಪಣೆ ಗೊಳಿಸಲಾಗುವುದು ಎಂದರು.

ಸರ್ಕಾರದ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ ಮಾತನಾಡಿ, ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಈಗಾಗಲೇ ಪಟ್ಟಣವೂ ಸೇರಿದಂತೆ ಸಮಗ್ರ ಮತಕ್ಷೇತ್ರದ ಶ್ರೇಯೋಭಿವೃದ್ಧಿಗೆ ನೂರಾರು ಕೋಟಿ ರು. ಅನುದಾನ ತರುವ ಮೂಲಕ ಉತ್ತಮ ಜನಪರ ಆಡಳಿತ ನೀಡುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಪಟ್ಟಣದ ಸ್ವಚ್ಛತೆಗೆ ಆದ್ಯತೆ ನೀಡಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಈ ಸ್ವಚ್ಛತಾ ಆಭಿಯಾನ ನಡೆಸಲಾಗುತ್ತಿದೆ. ಕಾರಣ ಈ ಅಭಿಯಾನ ಒಂದು ದಿನದ ಕಾರ್ಯಕ್ರಮಕ್ಕೆ ಸೀಮತವಾಗದೇ ಸಾರ್ವಜನಿಕರು ಜಾಗೃತರಾಗಿ ಸದಾ ಸ್ವಚ್ಛತೆಯಿಂದ ನೋಡಿಕೊಳ್ಳಲು ಪ್ರಯತ್ನಿಸಬೇಕು ಎಂದರು.

ಈ ವೇಳೆ ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಕ್ಷತಾ ಚಲವಾದಿ, ಅಪ್ಪು ದೇಗಿನಾಳ, ಶೋಭಾ ಶಳ್ಳಗಿ, ಮಾಬೂಬಿ ಬಾಗವಾನ, ಪಿಂಟು ಸಾಲಿಮನಿ, ಶಿವು ಶಿವಪುರಿ, ಬಾಪ್ ಢವಳಗಿ, ಸಚೀನ ಪಾಟೀಲ, ಲಕ್ಷ್ಮಣ ಚವ್ಹಾಣ, ಕಮಲಾ ಭಜಂತ್ರಿ, ಗೋಪಿ ಮಡಿವಾಳ, ಸುಚಿತ ಚಳಗೇರಿ, ಶರಣು ಚಲವಾದಿ, ಮಂಜು ಚಲವಾದಿ, ದಾದಾಪಟೇಲ ಗುಡ್ನಾಳ, ರಾಜು ನಾಯಕ, ಮುತ್ತು ಚಲವಾದಿ, ಬಸವರಾಜ ಭಜಂತ್ರಿ, ನೀಲಮ್ಮ ಚಲವಾದಿ, ಸರಸ್ವತಿ ಪೀರಾಪೂರ, ಸುಜಾತಾ ಶೀಂಧೇ, ಸಂಗಪ್ಪ ಮೇಲಿಮನಿ, ಯೂಸೂಫ್ ನಾಯ್ಕೋಡಿ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆ್ಯಸಿಡ್‌ ದಾಳಿ ಸಂತ್ರಸ್ತರಿಗೆ ಮಾಸಿಕ 50 ಸಾವಿರ ಪಿಂಚಣಿ : ಪರಂ ಭರವಸೆ
5 ಪಾಲಿಕೆಗೆ ಜಿಎಸ್‌ಟಿಯಲ್ಲಿ ಪಾಲು ಕೊಡಲು ಆಯೋಗ ಶಿಫಾರಸು