- 25 ವಿಶೇಷಚೇತನರಿಗೆ ರೆಟ್ರೋ ಫಿಟ್‍ಮೆಂಟ್ ದ್ವಿಚಕ್ರ ವಾಹನ ವಿತರಣೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಶನಿವಾರ ಟಿಎಪಿಸಿಎಂಎಸ್ ಆವರಣದಲ್ಲಿ 2023- 2024ನೇ ಸಾಲಿನ ತಾಲೂಕು ಪಂಚಾಯಿತಿ ರಾಜ್ಯ ಹಣಕಾಸು ಆಯೋಗದ ಅರ್ನಿಬಂಧಿತ ಅನುದಾನದಡಿ ಶೇ.5ರ ವಿಶೇಷಚೇತನರ ಕಾಯ್ದಿರಿಸಿದ ಅನುದಾನದಡಿ ವಿಕಲಚೇತನರಿಗೆ ದ್ವಿಚಕ್ರ ವಾಹನಗಳನ್ನು ವಿತರಿಸಿ ಅವರು ಮಾತನಾಡಿದರು.
ವಿಶೇಷಚೇತನರು ದೈಹಿಕವಾಗಿ ಅಂಗ ಊನವಾಗಿದ್ದರೂ ತಮ್ಮದೇಯಾದ ಸಾಮರ್ಥ್ಯ, ಬುದ್ಧಿವಂತಿಕೆ ಮತ್ತು ಶಕ್ತಿ ಹೊಂದಿದ್ದಾರೆ. ಅವರಿಗೆ ಪೂರಕವಾಗಿ ನಾವು ವಾಹನ ಸೌಲಭ್ಯ, ಸೌಕರ್ಯಗಳನ್ನು ಕಲ್ಪಿಸಿಕೊಟ್ಟರೆ ತಮ್ಮ ದುಡಿಮೆ ಕಂಡುಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗುತ್ತಾರೆ. ಇದರಿಂದ ಅವರ ಕೌಟುಂಬಿಕ ಜೀವನವೂ ಸುಧಾರಣೆ ಆಗುತ್ತದೆ ಎಂದು ಹೇಳಿದರು.ತಾಪಂ ಕಾರ್ಯನಿರ್ವಾಹಕಾಧಿಕಾರಿ ಎಚ್.ವಿ. ರಾಘವೇಂದ್ರ ಮಾತನಾಡಿ, ಶಾಸಕರ ಸೂಚನೆ ಮೇರೆಗೆ ವಿಕಲಚೇತನರ ಪ್ರಮಾಣ ಪತ್ರ ಹಾಗೂ ವಾಹನ ಚಾಲನೆ ಪರವಾನಿಗೆ ಹೊಂದಿದವರನ್ನು ಆಯ್ಕೆ ಮಾಡಿ, ಅವಳಿ ತಾಲೂಕಿನ 25 ಜನರಿಗೆ ರೆಟ್ರೋ ಫಿಟ್‍ಮೆಂಟ್ ದ್ವಿಚಕ್ರ ವಾಹನಗಳನ್ನು ವಿತರಿಸಿರುವುದಾಗಿ ಹೇಳಿದರು.
ಈ ಸಂದರ್ಭ ತಾ.ಪಂ. ಸಿಬ್ಬಂದಿ ಲೋಹಿತ್‍ಕುಮಾರ್ ಉಪಸ್ಥಿತರಿದ್ದರು. ಫಲಾನುಭವಿಗಳ ಕುಟುಂಬದವರು ಹಾಜರಿದ್ದರು.- - - -29ಎಚ್.ಎಲ್.ಐ1:
ಹೊನ್ನಾಳಿ ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಶಾಸಕ ಡಿ.ಜಿ. ಶಾಂತನಗೌಡ ಅವರು ಅರ್ಹ ವಿಶೇಷಚೇತನರಿಗೆ ರೆಟ್ರೋ ಫಿಟ್‍ಮೆಂಟ್ ದ್ವಿಚಕ್ರ ವಾಹನಗಳ ಸೌಲಭ್ಯ ವಿತರಿಸಿದರು.