ಚಿಕ್ಕಮಕ್ಕಳ ಆರೋಗ್ಯಕ್ಕೆ ಆದ್ಯತೆ ನೀಡಿ: ಡಾ.ಭುವನೇಶ್ವರಿ ಯಳಮಲಿ

KannadaprabhaNewsNetwork |  
Published : Feb 11, 2025, 12:46 AM IST
ಇಂಡಿಯನ್ ಓವರ್ಸಿಸ್ ಬ್ಯಾಂಕ್ನ 89 ನೇ ಸಂಸ್ಥಾಪನಾ ದಿನದ ಪ್ರಯುಕ್ತ ಬ್ಯಾಂಕ್ನವರು ಆಯೋಜಿಸಿದ ಕಾರ್ಯಕ್ರಮದಲ್ಲಿ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದಲ್ಲಿ ಮಕ್ಕಳಿಗೆ ಹಣ್ಣು ಮತ್ತು ಸಿಹಿ ವಿತರಿಸಲಾಯಿತು | Kannada Prabha

ಸಾರಾಂಶ

ಇಂದಿನ ಮಕ್ಕಳು ನಾಳಿನ ಸಮಾಜದ ನಾಗರಿಕರು ಎನ್ನುವ ಮಾತಿಗೆ ಪೂರಕವಾಗಿ ಅತ್ಯುತ್ತಮ ಶಿಕ್ಷಣದ ಜೊತೆಗೆ ಅವರ ಆರೋಗ್ಯಕ್ಕೂ ಆದ್ಯತೆ ನೀಡಬೇಕಾದ ಅಗತ್ಯವಿದೆ ಎಂದು ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಇಂದಿನ ಮಕ್ಕಳು ನಾಳಿನ ಸಮಾಜದ ನಾಗರಿಕರು ಎನ್ನುವ ಮಾತಿಗೆ ಪೂರಕವಾಗಿ ಅತ್ಯುತ್ತಮ ಶಿಕ್ಷಣದ ಜೊತೆಗೆ ಅವರ ಆರೋಗ್ಯಕ್ಕೂ ಆದ್ಯತೆ ನೀಡಬೇಕಾದ ಅಗತ್ಯವಿದೆ ಎಂದು ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ ಹೇಳಿದರು.

ಇಂಡಿಯನ್ ಓವರ್ಸಿಸ್ ಬ್ಯಾಂಕ್‌ 89ನೇ ಸಂಸ್ಥಾಪನೆ ದಿನದ ಪ್ರಯುಕ್ತ ಬ್ಯಾಂಕಿನವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದಲ್ಲಿ ಮಕ್ಕಳಿಗೆ ಹಣ್ಣು ಮತ್ತು ಸಿಹಿ ವಿತರಿಸಿ ಮಾತನಾಡಿದರು.

ಕುಮಾರೇಶ್ವರ ಆಸ್ಪತ್ರೆಯಲ್ಲಿ ಚಿಕ್ಕಮಕ್ಕಳ ಚಿಕಿತ್ಸೆಗಾಗಿ ಅತ್ಯುತ್ತಮ ವಿಭಾಗ ಸ್ಥಾಪಿಸಲಾಗಿದೆ. ಈ ಮಕ್ಕಳ ವಿಭಾಗ ಮಕ್ಕಳ ಸ್ನೇಹಿ ವಿಭಾಗವಾಗಿದ್ದು, ವೈದ್ಯರು ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳ ಚಿಕಿತ್ಸೆಗಾಗಿ ಸುಸಜ್ಜಿತ ಎನ್ಐಸಿಯು, ಪಿಐಸಿಯು, ಕಾಕ್ಲಿಯರ್ ಇಂಪ್ಲ್ಯಾಂಟ್ ಮತ್ತು ಉಚಿತ ಲಸಿಕೆ ಸೌಲಭ್ಯ ಒದಗಿಸಲಾಗಿದೆ ಎಂದು ಹೇಳಿದರು.ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆಯಲ್ಲಿ ಚಿಕ್ಕಮಕ್ಕಳ ವಿಭಾಗ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಬಿವಿವಿ ಸಂಘದ ಕಾಯರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರ ಆಶಯದಂತೆ ಆಸ್ಪತ್ರೆಯಲ್ಲಿ ಚಿಕ್ಕಮಕ್ಕಳ ಆರೋಗ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.ಇಂಡಿಯನ್ ಓವರ್ಸಿಸ್ ಬ್ಯಾಂಕಿನ ಬಾಗಲಕೋಟೆ ಶಾಖೆಯ ಮ್ಯಾನೇಜರ್ ಮುರಳೀಧರ, ಎಸ್ಎನ್ಎಂಸಿ ಶಾಖಾ ಮ್ಯಾನೇಜರ್ ಪ್ರವೀಣ ಪಾಠಕ್, ಸಹಾಯಕ ಮ್ಯಾನೇಜರ್ ವಿಪಿನ್ ಜೋಶಿ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ, ಚಿಕ್ಕಮಕ್ಕಳ ವಿಭಾಗದ ವೈದ್ಯ ಡಾ.ಅಶೋಕ ಬಡಕಲಿ, ಡಾ.ರಮೇಶ ಪೋಳ, ಡಾ.ವಿನಯ ಕುಮಾರ, ಡಾ.ಕೆಲುಡೆಪ್ಪ ತಳವಾರ, ಡಾ.ಗಂಗಾಧರ ಮಿರ್ಜಿ, ಡಾ.ಪಲ್ಲವಿ ಚರಂತಿಮಠ, ಸಿಬ್ಬಂದಿ ಮತ್ತು ಮಕ್ಕಳ ಪಾಲಕರು ಉಪಸ್ಥಿತರಿದ್ದರು. ಚಿಕ್ಕಮಕ್ಕಳ ವಿಭಾಗದಲ್ಲಿ ಸ್ತನ್ಯಪಾನ ಉತ್ತೇಜಿಸಲು ಕೈಗೊಂಡ ವಿಶೇಷ ಕಾರ್ಯಕ್ರಮ ಮತ್ತು ಯೋಜನೆಗಳಿಂದಾಗಿ ಆಸ್ಪತ್ರೆಗೆ ಸ್ತನ್ಯಪಾನ ಸ್ನೇಹಿ ಆಸ್ಪತ್ರೆ ಎಂದು ನವದೆಹಲಿಯ ರಾಷ್ಟ್ರೀಯ ಮಾನ್ಯತಾ ಕೇಂದ್ರದಿಂದ ಮಾನ್ಯತೆ ದೊರೆತಿದೆ. ಥಲಸ್ಸೇಮಿಯಾ, ಹಿಮೋಫಿಲಿಯಾ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗಾಗಿ ಕುಮಾರೇಶ್ವರ ಆಸ್ಪತ್ರೆಯಲ್ಲಿ ಥಲಸ್ಸೇಮಿಯಾ ಮತ್ತು ಹಿಮೋಫಿಲಿಯಾ ಸೊಸೈಟಿ ಸ್ಥಾಪಿಸಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಇಂಡಿಯನ್ ಓವರ್ಸಿಸ್ ಬ್ಯಾಂಕ್ ಹಲವು ಸಂದರ್ಭಗಳಲ್ಲಿ ಆಸ್ಪತ್ರೆಗೆ ದೇಣಿಗೆ ನೀಡಿ ತನ್ನ ಸಾಮಾಜಿಕ ಕಾಳಜಿ ಮೆರೆದಿದೆ.

- ಡಾ.ಭುವನೇಶ್ವರಿ ಯಳಮಲಿ, ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಪ್ರಾಚಾರ್ಯ

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ