ದುಡಿಯುವ ವರ್ಗಗಳ ಅಭಿವೃದ್ಧಿಗೂ ಆದ್ಯತೆ: ಶಾಸಕ ಕೆ.ಎಸ್.ಆನಂದ್

KannadaprabhaNewsNetwork | Published : Sep 7, 2024 1:36 AM

ಸಾರಾಂಶ

ಕಡೂರು, ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುವ ಜೊತೆಗೆ ದುಡಿಯುವ ವರ್ಗಗಳ ಅಭಿವೃದ್ಧಿಗೂ ಆದ್ಯತೆ ನೀಡುತ್ತೇನೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

- ಸಂಗೊಳ್ಳಿರಾಯಣ್ಣ ಟ್ಯಾಕ್ಸಿ ನಿಲ್ದಾಣದಲ್ಲಿ 20 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿಪೂಜೆ

ಕನ್ನಡಪ್ರಭ ವಾರ್ತೆ, ಕಡೂರು

ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುವ ಜೊತೆಗೆ ದುಡಿಯುವ ವರ್ಗಗಳ ಅಭಿವೃದ್ಧಿಗೂ ಆದ್ಯತೆ ನೀಡುತ್ತೇನೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಸಂಗೊಳ್ಳಿರಾಯಣ್ಣ ಟ್ಯಾಕ್ಸಿ ನಿಲ್ದಾಣದಲ್ಲಿ 20 ಲಕ್ಷ ರು. ವೆಚ್ಚದ ನೂತನ ಟ್ಯಾಕ್ಸಿ ನಿಲ್ದಾಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ದುಡಿಯುವ ಮತ್ತು ಶ್ರಮಿಕ ವರ್ಗಕ್ಕೆ ಸೌಕರ್ಯ ಕಲ್ಪಿಸಲು ಸರಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಕಡೂರು ಪಟ್ಟಣದಲ್ಲಿ ಆಟೋ, ಟ್ಯಾಕ್ಸಿಗಳು ನಿಲ್ಲಲು ಸುಸಜ್ಜಿತ ನಿಲ್ದಾಣಗಳ ನಿರ್ಮಾಣವಾಗಬೇಕೆಂಬ ಆಶಯದಿಂದ ಪಟ್ಟಣದಲ್ಲಿ ಅನೇಕ ಕಡೆ ಆಟೋ ನಿಲ್ದಾಣಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಬೀರೂರು ಪಟ್ಟಣದಲ್ಲೂ ಟ್ಯಾಕ್ಸಿ ನಿಲ್ದಾಣಕ್ಕೆ 14 ಲಕ್ಷ ರು. ಅನುದಾನ ನೀಡಲಾಗಿದೆ. ಚಾಲಕರ ಬಹುವರ್ಷದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುತ್ತಿದೆ. ಪಟ್ಟಣದ ಅಭಿವೃದ್ಧಿ ಬೆಳವಣಿಗೆಗೆ ಹಲವು ಆಶಯಗಳನ್ನು ಹೊಂದಿದ್ದೇನೆ ಅವುಗಳನ್ನು ಆದ್ಯತೆಗೆ ಅನುಗುಣವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶಾಸಕರ ಜೊತೆಗೂಡಿ ಪುರಸಭೆ ಶ್ರಮಿಸುತ್ತದೆ. ಇಲ್ಲಿನ ನಿಲ್ದಾಣ ಕಾಮಗಾರಿಗೆ ಅನುದಾನದ ಕೊರತೆ ಸಾಕಷ್ಟಿದೆ. ಇದಕ್ಕೆ ಕ್ಷೇತ್ರದ ಶಾಸಕರು ವಿಶೇಷ ಕಾಳಜಿವಹಿಸಿ ಸುಸಜ್ಜಿತ ನಿಲ್ದಾಣಗಳ ಸ್ಥಾಪನೆಗೆ ಹೆಚ್ಚು ಒತ್ತು ನೀಡುತ್ತಿರುವುದು ಚಾಲಕರಿಗೆ ಆಸರೆಯಾಗುತ್ತಿದೆ. ಪಟ್ಟಣದ ಬಸವೇಶ್ವರ ವೃತ್ತದ ಬಳಿ ಬಸ್ ತಂಗುದಾಣದ ಅಗತ್ಯದ ಜೊತೆ ಜಾಗದ ಕೊರತೆಯಿದೆ. ಶಾಸಕರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ. ನಮ್ಮ ಪುರಸಭೆ ನಗರಸಭೆಯಾಗಿ ಪರಿವರ್ತನೆಗೊಳ್ಳಲಿದ್ದು, ಕಡೂರು ಪಟ್ಟಣದ ಸೌಂದರ್ಯ ವನ್ನು ಮತ್ತಷ್ಟು ಹೆಚ್ಚಿಸಲು ಎಲ್ಲ ರೀತಿಯಲ್ಲಿ ಶ್ರಮಿಸುತ್ತದೆ ಎಂದರು.ಈ ಸಂದರ್ಭದಲ್ಲಿ ಪುರಸಭಾ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸದಸ್ಯರಾದ ಈರಳ್ಳಿರಮೇಶ್, ಸೈಯ್ಯದ್ ಯಾಸೀನ್, ಯತಿರಾಜ್, ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ವಿನೋದ್, ಮುಖಂಡರಾದ ಚಂದ್ರಮೌಳಿ, ಎನ್.ಬಷೀರ್ ಸಾಬ್, ಪಂಗ್ಲಿ ಮಂಜುನಾಥ್, ರಾಜು, ಡಿಶ್ ಮಂಜುನಾಥ್, ಭೂಸೇನಾ ನಿಗಮದ ಎಇಇ ಅಶ್ವಿನಿ, ಗಿರೀಶ್, ಟ್ರಾವೆಲ್ಸ್ ಮಂಜು, ಗೋಪಿ, ರಾಮು, ರಾಜು, ಗಂಗರಾಜ್ ಮತ್ತಿತರಿದ್ದರು.6ಕೆಕೆಡಿಯು3.

ಕಡೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ 20 ಲಕ್ಷ ರು. ವೆಚ್ಚದ ಟ್ಯಾಕ್ಸಿ ನಿಲ್ದಾಣದ ನಿರ್ಮಾಣ ಕಾರ್ಯಕ್ಕೆ ಶಾಸಕ ಕೆ.ಎಸ್.ಆನಂದ್ ಭೂಮಿಪೂಜೆ ನೆರವೇರಿಸಿದರು. ಭಂಡಾರಿ ಶ್ರೀನಿವಾಸ್ ಮತ್ತಿತರಿದ್ದರು.

Share this article