ಉನ್ನತಮಟ್ಟದ ಕಲಿಕೆಗೆ ಆದ್ಯತೆ ಮುಖ್ಯ: ರಹಮತ್‌

KannadaprabhaNewsNetwork | Published : Dec 14, 2023 1:30 AM

ಸಾರಾಂಶ

ಸಮಾರಂಭ ಉದ್ಘಾಟಿಸಿದ ಪಪಂ ಅಧ್ಯಕ್ಷೆ ಗೀತಾ ರಮೇಶ್ ಮಾತನಾಡಿ, ಶೈಕ್ಷಣಿಕವಾಗಿ ಸಾಕಷ್ಟು ಮುಂದುವರೆದಿರುವ ಈ ತಾಲೂಕಿನ ಸಾಧನೆ ಗಮನಾರ್ಹವಾಗಿದೆ. ಈ ಪರಂಪರೆ ಮುಂದುವರಿಸುವ ನಿಟ್ಟಿನಲ್ಲಿ ಕಠಿಣ ಅಭ್ಯಾಸದ ಕಡೆಗೆ ಆದ್ಯತೆ ನೀಡಬೇಕು. ಬಹಳ ಮುಖ್ಯವಾಗಿ ಮೊಬೈಲ್ ಹವ್ಯಾಸದಿಂದ ದೂರ ಉಳಿಯುವುದು ಅತೀ ಅಗತ್ಯ ಎಂದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ಸಾಮಾಜಿಕ ಜಾಲತಾಣದ ಪರಿಣಾಮ ಇಂದು ಸಕಾರಾತ್ಮಕ ವಿಚಾರಗಳಿಗಿಂತ ನಕಾರಾತ್ಮಕ ವಿಚಾರಗಳೇ ಯುವಜನತೆಯ ಭವಿಷ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಈ ಕುರಿತು ಗಂಭೀರ ಚಿಂತನೆ ಅಗತ್ಯವಾಗಿದೆ ಎಂದು ಪಪಂ ಉಪಾಧ್ಯಕ್ಷ ರಹಮತ್ ಉಲ್ಲಾ ಅಸಾದಿ ಹೇಳಿದರು.

ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನೆರವಿನೊಂದಿಗೆ ಲಯನ್ಸ್ ಕ್ಲಬ್ ತೀರ್ಥಹಳ್ಳಿ, ಸಿದ್ದಾಂತ ಫೌಂಡೇಶನ್ ಉಡುಪಿ ಮತ್ತು ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಆಶ್ರಯದಲ್ಲಿ ಬುಧವಾರ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಪ್ರೌಢಶಾಲಾ ಹಂತದ ಶಿಕ್ಷಣ ವಿದ್ಯಾರ್ಥಿ ಜೀವನದಲ್ಲಿ ಅತ್ಯಂತ ಪ್ರಮುಖ ಘಟ್ಟವಾಗಿದೆ. ಕಠಿಣ ಅಭ್ಯಾಸ ಮತ್ತು ಸತತ ಪರಿಶ್ರಮದ ಮೂಲಕ ಉನ್ನತಮಟ್ಟದ ಕಲಿಕೆಗೆ ಆದ್ಯತೆ ನೀಡಬೇಕಿದೆ. ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದ ಮಹತ್ವವನ್ನು ಅರಿತು ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರುವ ದಿಟ್ಟ ನಿರ್ಧಾರದೊಂದಿಗೆ ಮುನ್ನಡೆಯಬೇಕು ಎಂದೂ ಹೇಳಿದರು.

ಸಮಾರಂಭ ಉದ್ಘಾಟಿಸಿದ ಪಪಂ ಅಧ್ಯಕ್ಷೆ ಗೀತಾ ರಮೇಶ್ ಮಾತನಾಡಿ, ಶೈಕ್ಷಣಿಕವಾಗಿ ಸಾಕಷ್ಟು ಮುಂದುವರೆದಿರುವ ಈ ತಾಲೂಕಿನ ಸಾಧನೆ ಗಮನಾರ್ಹವಾಗಿದೆ. ಈ ಪರಂಪರೆ ಮುಂದುವರಿಸುವ ನಿಟ್ಟಿನಲ್ಲಿ ಕಠಿಣ ಅಭ್ಯಾಸದ ಕಡೆಗೆ ಆದ್ಯತೆ ನೀಡಬೇಕು. ಬಹಳ ಮುಖ್ಯವಾಗಿ ಮೊಬೈಲ್ ಹವ್ಯಾಸದಿಂದ ದೂರ ಉಳಿಯುವುದು ಅತೀ ಅಗತ್ಯ ಎಂದರು.

ಲಯನ್ಸ್ ಕ್ಲಬ್ ಅಧ್ಯಕ್ಷ ತನಿಕಲ್ ರಾಜಣ್ಣ ಮಾತನಾಡಿ, ಜ್ಞಾನಾರ್ಜನೆಯೇ ವಿದ್ಯಾರ್ಥಿ ಜೀವನದ ಮುಖ್ಯ ಉದ್ದೇಶವಾಗಿದೆ. ನಿರೀಕ್ಷೆಗಿಂತ ಕಡಿಮೆ ಅಂಕ ಬಂದಾಗ ಹತಾಶರಾಗದೇ ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೋಭಾವವನ್ನೂ ವಿದ್ಯಾರ್ಥಿಗಳು ಹೊಂದಬೇಕಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಗಣೇಶ್, ಕ್ಷೇತ್ರ ಸಮನ್ವಯಾಧಿಕಾರಿ ಇ.ಬಿ.ಗಣೇಶ್, ಪಪಂ ಸಿಒ ಕುರಿಯಾಕೋಸ್, ಸಿದ್ಧಾಂತ ಫೌಂಡೇಶನ್ನಿನ ಗೋಪಾಲಕೃಷ್ಣ, ಅಕ್ಷರ ದಾಸೋಹದ ಪ್ರವೀಣ್, ಗಿರಿರಾಜ್, ಬಿ.ರಾಮು, ಕೆ.ವಿ.ರಮೇಶ್, ಕೆ.ಡಿ.ಗಣೇಶ್ ಇದ್ದರು.

- - - -13KPSMG12.jpg:

ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಕಾರ್ಯಾಗಾರವನ್ನು ಪಪಂ ಅದ್ಯಕ್ಷೆ ಗೀತಾ ರಮೇಶ್ ಉದ್ಘಾಟಿಸಿದರು.

Share this article