ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ: ಪೊನ್ನಣ್ಣ

KannadaprabhaNewsNetwork |  
Published : Sep 29, 2026, 02:45 AM IST
ಬಲ್ಲಮಾವಟಿ ಗ್ರಾಮ ಪಂಚಾಯಿತಿ ಒಳಪಟ್ಟ ಗ್ರಾಮಗಳಿಗೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯಕಾರ್ಯದರ್ಶಿಯಾದ ಎ.ಎಸ್ ಪೊನ್ನಣ್ಣಭೇಟಿ ನೀಡಿ, ಒಟ್ಟು 63 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ಪೂರ್ಣಗೊಂಡಕಾಮಗಾರಿಗಳ ಉದ್ಘಾಟನೆ ಸಂದರ್ಭದ ಫೋಟೋಗಳು. | Kannada Prabha

ಸಾರಾಂಶ

ಕ್ಷೇತ್ರಾದ್ಯಂತ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಹಾಗೂ ಮೂಲಸೌಕರ್ಯಗಳನ್ನು ಬಲಪಡಿಸುವುದೇ ತಮ್ಮ ಮೊದಲ ಆದ್ಯತೆಯಾಗಿದ್ದು, ಹಂತ-ಹಂತವಾಗಿ ಎಲ್ಲಾ ಗ್ರಾಮಗಳ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾದ ಎ.ಎಸ್ ಪೊನ್ನಣ್ಣ ತಿಳಿಸಿದರು.

ನಾಪೋಕ್ಲು: ಕ್ಷೇತ್ರಾದ್ಯಂತ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಹಾಗೂ ಮೂಲಸೌಕರ್ಯಗಳನ್ನು ಬಲಪಡಿಸುವುದೇ ತಮ್ಮ ಮೊದಲ ಆದ್ಯತೆಯಾಗಿದ್ದು, ಹಂತ-ಹಂತವಾಗಿ ಎಲ್ಲಾ ಗ್ರಾಮಗಳ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾದ ಎ.ಎಸ್ ಪೊನ್ನಣ್ಣ ತಿಳಿಸಿದರು.ಬಲ್ಲಮಾವಟಿ ಗ್ರಾಮ ಪಂಚಾಯಿತಿ ಒಳಪಟ್ಟ ಗ್ರಾಮಗಳಿಗೆ ಭೇಟಿ ನೀಡಿ, ಒಟ್ಟು 63 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಬಲ್ಲಮಾವಟಿ ಗ್ರಾಮದ ಮುಖ್ಯರಸ್ತೆಯಿಂದ ಬಲ್ಲಮಾವಟಿ-ಪೇರೂರು ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ 50 ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕರು ಗುದ್ದಲಿ ಪೂಜೆ , ದೊಡ್ಡ ಪುಲಿಕೋಟು ಗ್ರಾಮದ ಕೋಟೆ ಶ್ರೀ ಭಗವತಿ ದೇವಸ್ಥಾನದ ರಸ್ತೆ ಅಭಿವೃದ್ಧಿಗೆ 5 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ದೊಡ್ಡ ಪುಲಿಕೋಟು ಗ್ರಾಮದ ಪೊನ್ನುಕಂಡ ಕುಟುಂಬಸ್ಥರ ಐನ್ ಮನೆ ರಸ್ತೆ ಅಭಿವೃದ್ಧಿಗೆ 3 ಲಕ್ಷ ವೆಚ್ಚದ ಕಾಮಗಾರಿಗೆ ಹಾಗೂ ನೂತನವಾಗಿ ಅಳವಡಿಸಲಾದ ಟ್ರಾನ್ಸ್‌ಫಾರ್ಮರ್ ಅನ್ನು, ನೆಲಜಿ ಗ್ರಾಮದ ಮಣವಟ್ಟಿರ ಕುಟುಂಬಸ್ಥರ ಐನ್ ಮನೆ ರಸ್ತೆ ಅಭಿವೃದ್ಧಿಗೆ 5 ಲಕ್ಷ ವೆಚ್ಚದ ಕಾಮಗಾರಿಯನ್ನು ಶಾಸಕರು ಉದ್ಘಾಟಿಸಿದರು.ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ್ ಕುಶಾಲಪ್ಪ , ಮಾಜಿ ಸದಸ್ಯರಾದ ಮಚ್ಚುರ ರವೀಂದ್ರ, ನೆರವಂಡ ಉಮೇಶ್, ಪೊನ್ನುಕಂಡ ಪ್ರೇಮ, ಕೆ ಎ ಇಸ್ಮಾಯಿಲ್, ಕಲಿಯಂಡ ಸಂಪನ್ ಅಯ್ಯಪ್ಪ ಸೌಕತ್ ಆಲಿ, ಕರವಂಡ ಲವ ನಾಣಯ್ಯ, ಮಣವಟ್ಟಿರ ದಯಾ ಚಿನ್ನಪ್ಪ, ಅಪ್ಪಚೇಟ್ಟೊಳoಡ ಮಿಥುನ್ ಮಾಚಯ್ಯ, ಕೈಬುಲಿರ ಸಾಬು ಹಾಗೂ ಗ್ರಾಮ ಪ್ರಮುಖರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತ ಚೋರಿ ಮಾಡಿ ಚುನಾವಣೆ ಗೆಲ್ಲುವ ಹುನ್ನಾರ: ಸಚಿವ ಎಂ.ಬಿ.ಪಾಟೀಲ
ಕೂಲಿ ಮಾಡಿ ಸಿಎಂಗೆ ₹3000 ಕಳಿಸಿದ ರೈತರು