ಮಹಿಳಾ ಕಾಂಗ್ರೆಸ್‌ನಿಂದ ಕಿಶನ್‌ ಹೆಗ್ಡೆಗೆ ಅಭಿನಂದನೆ

KannadaprabhaNewsNetwork |  
Published : Sep 29, 2026, 02:30 AM IST
ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ನಿಂದ ನೂತನ ಜಿಲ್ಲಾಧ್ಯಕ್ಷ ಕಿಶನ್‌ ಹೆಗ್ಡೆ ಅವರನ್ನು ಅಭಿನಂದಿಸಲಾಯಿತು | Kannada Prabha

ಸಾರಾಂಶ

ಜಿಲ್ಲಾ ಮಹಿಳಾ ಕಾಂಗ್ರೆಸ್‌ ಸಮಿತಿಯ‌ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ಅವರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಮಾಸಿಕ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಿಶನ್ ಹೆಗ್ಡೆ ಕೊಳ್ಕೆಬೈಲು ಅವರನ್ನು ಅಭಿನಂದಿಸಿಲಾಯಿತು.

ಉಡುಪಿ: ಜಿಲ್ಲಾ ಮಹಿಳಾ ಕಾಂಗ್ರೆಸ್‌ ಸಮಿತಿಯ‌ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ಅವರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಮಾಸಿಕ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಿಶನ್ ಹೆಗ್ಡೆ ಕೊಳ್ಕೆಬೈಲು ಅವರನ್ನು ಅಭಿನಂದಿಸಿಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜ್ಯೋತಿ ಹೆಬ್ಬಾರ್, ಜಿಲ್ಲಾ ಕಾಂಗ್ರೆಸ್‌ ಕಿಶನ್ ಹೆಗ್ಡೆ ಕೊಳ್ಕೆಬೈಲು ಅವರ ಅಧಿಕಾರದವಧಿಯಲ್ಲಿ ತನ್ನ ಗತವೈಭವ ಮರುಕಳಿಸಲಿ ಹಾಗೂ ಮುಂದಿನ ಚುನಾವಣೆಯಲ್ಲಿ ಪಕ್ಷದ ಹೆಚ್ಚು ಅಭ್ಯರ್ಥಿಗಳು ಗೆದ್ದು ಪಕ್ಷದ ಬಾವುಟ ಬಾನೆತ್ತರಕ್ಕೆ ಹಾರಲಿ ಎಂದು ಆಶಿಸಿ, ಮಹಿಳಾ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ನೂತನ ಅಧ್ಯಕ್ಷರೊಂದಿಗೆ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಿದೆ ಎಂದು ತಿಳಿಸಿದರು.ರಾಜ್ಯದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ಆಶಯದಂತೆ ಯುವ ಸಮೂಹವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ 16-35 ವಯೋಮಾನದ ಯುವಕ ಯುವತಿಯರನ್ನು ಒಗ್ಗೂಡಿಸಲು "ಭಾರತ್ ಜೋಡೋ ಯುವ ಸಂಘ " ಸಂಘಟನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಉಡುಪಿ ಜಿಲ್ಲಾದ್ಯಂತ ಬ್ಲಾಕ್ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷರು ಮತ್ತು ಮಹಿಳಾ ಕಾಂಗ್ರೆಸ್‌ನ ಪದಾಧಿಕಾರಿಗಳು ಶ್ರಮಿಸಬೇಕು ಎಂದವರ ಕರೆ ನೀಡಿದರು.

ಅಭಿನಂದನೆ ಸ್ವೀಕರಿಸಿದ ಕಿಶನ್ ಹೆಗ್ಡೆ ಕೊಳ್ಕೆಬೈಲು ಅವರು ಪಕ್ಷದ ಕಾರ್ಯಕರ್ತರ ಧ್ವನಿಯಾಗಿರುತ್ತೇನೆ ಹಾಗೂ ಪಕ್ಷ ಸಂಘಟಿಸುವಲ್ಲಿ ಎಲ್ಲರ ಸಹಕಾರ ಪಡೆದು ಕಾಂಗ್ರೆಸ್ ಪಕ್ಷದ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಲು ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದು ತಿಳಿಸಿ ಸದಾ ಮಹಿಳಾ ಕಾಂಗ್ರೆಸ್‌ನ ಜೊತೆಯಿದ್ದು ಅವರ ಧ್ವನಿಯಾಗಿರುತ್ತೇನೆ ಎಂದು ಧನ್ಯವಾದ ಸಲ್ಲಿಸಿದರು.

ಸಭೆಯಲ್ಲಿ ಹಿರಿಯ ಮಹಿಳಾ ಕಾಂಗ್ರೆಸ್‌ನ ನಾಯಕಿಯರಾದ ಸರಸು ಬಂಗೇರ, ಗೀತಾ ವಾಗ್ಳೆ, ಮೀನಾಕ್ಷಿ ಮಾಧವ ಬನ್ನಂಜೆ, ಅನಿತಾ ಡಿ''ಸೋಜಾ, ಬ್ಲಾಕ್ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷರಾದ ಬಾನು ಭಾಸ್ಕರ್, ರೇಖಾ ಸುವರ್ಣ, ಅನಿತಾ ಬಾಬು ಪೂಜಾರಿ, ಮಮತಾ ಶೆಟ್ಟಿ, ಶಾಂತಲತಾ ಶೆಟ್ಟಿ, ಶಾಂತಾ ರೈ, ಸುಮಾ ಅಡ್ಯಂತಾಯ, ಸೂರ್ಯಕಾಂತಿ ಹಾಗೂ ನಾಯಕಿಯರಾದ ಚಂದ್ರಿಕಾ ಶೆಟ್ಟಿ, ಐರಿನ್ ಅಂದ್ರಾದೆ, ಐಡಾ ಗಿಬ್ಬ ಡಿ''''''''ಸೋಜಾ, ಪ್ರಭಾ ಶೆಟ್ಟಿ, ರಮಾ ದೇವಿ, ನಾಗಮ್ಮ, ರೋಶ್ನಿ ಶೆಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಪುಷ್ಪ ಅಂಚನ್ ಸ್ವಾಗತಸಿದರು. ಸಂಧ್ಯಾ ತಿಲಕ್‌ರಾಜ್ ಅವರು ಗತಸಭೆಯ ವರದಿ ವಾಚಿಸಿದರು. ಗೋಪಿ ನಾಯ್ಕ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಕ್ರಮ ಅಗತ್ಯ: ರಮಿತಾ
ಮೂಡ್ಲಕಟ್ಟೆ ನರ್ಸಿಂಗ್‌ ಕಾಲೇಜಿನಿಂದ ಆತ್ಮಹತ್ಯೆ ತಡೆ ಮಾಸಾಚರಣೆ