ಕನ್ನಡ ಪ್ರಭ ವಾರ್ತೆ ಗುಬ್ಬಿ
ತಾಲೂಕಿನ ಜಿ.ಹೊಸಹಳ್ಳಿದಲ್ಲಿ ರೋಡ್ ಶೋ ನಡೆಸಿ ಮಾತನಾಡಿದರು. ಫಲಿತಾಂಶ ಬಂದ ತಕ್ಷಣವೇ ನೆನೆಗುದಿಗೆ ಬಿದ್ದ ನೀರಾವರಿ ಯೋಜನೆ ಹಾಗೂ ಆಸ್ಪತ್ರೆ ಮೇಲ್ದರ್ಜೆಗೇರಿಸುವ ಕೆಲಸ, ಶಾಲಾ, ಕಾಲೇಜಿಗೆ ಮೂಲಭೂತ ಸೌಕರ್ಯ ಒದಗಿಸುತ್ತೇನೆ. ಬಿಜೆಪಿ ಬೆಂಬಲಿಸಿ ಮೋದಿ ಸರ್ಕಾರ ಅನುಷ್ಠಾನಕ್ಕೆ ಸಹಕರಿಸಿ ಎಂದು ಮನವಿ ಮಾಡಿದರು.
ವಿದ್ಯುತ್ ಸಮಸ್ಯೆ ಈಗ ರಾಜ್ಯದಲ್ಲೇ ತಾಂಡವವಾಡುತ್ತಿದೆ. ಬಿಜೆಪಿ ಸರ್ಕಾರದಲ್ಲಿ 15 ಸಾವಿರ ರು.ಗೆ ಪರಿವರ್ತಕ ನೀಡಲಾಗುತ್ತಿತ್ತು. ಈಗ ಕಾಂಗ್ರೆಸ್ ಸರ್ಕಾರ 2.5 ಲಕ್ಷ ವಸೂಲಿ ಮಾಡಿ ಗ್ಯಾರಂಟಿಗೆ ಹಣ ನೀಡುತ್ತಿದೆ. ಈ ಸಮಸ್ಯೆ ಆಲಿಸಿರುವ ಮೋದಿ ಕೃಷಿಕ ವರ್ಗಕ್ಕೆ ಉಚಿತ ವಿದ್ಯುತ್ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ. ನೀರಿನ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದರು.ಚುನಾವಣಾ ಉಸ್ತುವಾರಿ, ಮಾಜಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ, ಬಿಕ್ಕೆಗುಡ್ಡ ಯೋಜನೆಯ ಪೂರ್ಣ ಕೆಲಸಕ್ಕೆ ಸೋಮಣ್ಣರ ಜೊತೆ ನಾನು ಕೂಡಾ ಇಲ್ಲೇ ವಾಸ್ತವ್ಯ ಹೂಡಿ ಹೊಸಹಳ್ಳಿ ಅಕ್ಕಪಕ್ಕ ಗ್ರಾಮಕ್ಕೆ ನೀರು ಕೊಡುವ ಕೆಲಸ ಮಾಡುತ್ತೇವೆ. ಹೇಮಾವತಿ ಡ್ಯಾಂ ನಿರ್ಮಾಣ ದೇವೇಗೌಡರು ಮಾಡಿದ್ದು, ತುಮಕೂರು ಜಿಲ್ಲೆಗೆ ನೀರು ಸಿಕ್ಕಿದೆ ಎಂದು ಹೇಳಿದರು.
ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ, ಸೋಮಣ್ಣ ಒಂದು ಲಕ್ಷಕ್ಕೂ ಅಧಿಕ ಮತ ಪಡೆಯಲು ಎರಡೂ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು. ಕಳೆದ 25 ವರ್ಷದಿಂದ ಗುಬ್ಬಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಂಡಿಲ್ಲ. ಸೋಮಣ್ಣರನ್ನು ಗೆಲ್ಲಿಸಿ ಅಭಿವೃದ್ದಿ ಕೆಲಸಕ್ಕೆ ಅಡಿಗಲ್ಲು ಹಾಕಿಸೋಣ ಎಂದರು.
ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್, ಕಳ್ಳಿಪಾಳ್ಯ ಲೋಕೇಶ್, ಶಿವಲಿಂಗಯ್ಯ, ಸುರೇಶ್ ಗೌಡ, ಬಿಜೆಪಿ ಮುಖಂಡರಾದ ಪಿ.ಬಿ.ಚಂದೇಶೇಖರಬಾಬು, ಎನ್.ಸಿ.ಪ್ರಕಾಶ್, ಜಿ.ಚಂದ್ರಶೇಖರ್, ಬಸವರಾಜ್, ಚೇತನ್ ನಾಯಕ, ಕಾರ್ತಿಕ್, ಕಿರಣ್ ಇದ್ದರು.