ಸ್ವಉದ್ಯೋಗ ಯೋಜನೆ, ಸಂಜೀವಿನಿ ಸಂಘಗಳಿಗೆ ಪ್ರಾಶಸ್ತ್ಯ

KannadaprabhaNewsNetwork | Published : Apr 21, 2025 12:45 AM

ಸಾರಾಂಶ

ಮಹಿಳೆಯರು ಆರ್ಥಿಕ ಅಭಿವೃದ್ಧಿ ಸಾಧಿಸಲು ಸ್ವಉದ್ಯೋಗ, ಸಂಜೀವಿನಿ ಸಂಘಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುವ ಮೂಲಕ ಅಗತ್ಯ ಕ್ರಮ ಕೈಗೊಳಲಾಗುವುದು. ಅಲ್ಲದೇ, ದಾವಣಗೆರೆ ಎಸ್‌ಎಸ್‌ ಕೇರ್‌ ಟ್ರಸ್ಟ್‌ ವತಿಯಿಂದ ಬಾಪೂಜಿ ಆಸ್ಪತ್ರೆಯಲ್ಲಿ ಹೆರಿಗೆ, ಡಯಾಲಿಸಿಸ್‌, ಕಣ್ಣಿನ ಪೊರೆ, ಕ್ಯಾನ್ಸರ್‌ ಶಸ್ತ್ರಚಿಕಿತ್ಸೆ ಸೇವೆ ಉಚಿತವಾಗಿ ನೀಡಲಾಗುತ್ತಿದ್ದೆ. ಈ ಸೌಲಭ್ಯ ಜಿಲ್ಲೆ ಜನರು ಸದುಪಯೋಗ ಪಡೆಯಬೇಕು ಎಂದು ದಾವಣಗೆರೆ ಕ್ಷೇತ್ರ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದ್ದಾರೆ.

- ಸಂಜೀವಿನಿ ಮಾಸಿಕ ಸಂತೆ, ಆರೋಗ್ಯ ಮೇಳ ಕಾರ್ಯಕ್ರಮದಲ್ಲಿ ಸಂಸದೆ ಡಾ.ಪ್ರಭಾ

- - -

ಕನ್ನಡಪ್ರಭ ವಾರ್ತೆ ನ್ಯಾಮತಿ

ಮಹಿಳೆಯರು ಆರ್ಥಿಕ ಅಭಿವೃದ್ಧಿ ಸಾಧಿಸಲು ಸ್ವಉದ್ಯೋಗ, ಸಂಜೀವಿನಿ ಸಂಘಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುವ ಮೂಲಕ ಅಗತ್ಯ ಕ್ರಮ ಕೈಗೊಳಲಾಗುವುದು. ಅಲ್ಲದೇ, ದಾವಣಗೆರೆ ಎಸ್‌ಎಸ್‌ ಕೇರ್‌ ಟ್ರಸ್ಟ್‌ ವತಿಯಿಂದ ಬಾಪೂಜಿ ಆಸ್ಪತ್ರೆಯಲ್ಲಿ ಹೆರಿಗೆ, ಡಯಾಲಿಸಿಸ್‌, ಕಣ್ಣಿನ ಪೊರೆ, ಕ್ಯಾನ್ಸರ್‌ ಶಸ್ತ್ರಚಿಕಿತ್ಸೆ ಸೇವೆ ಉಚಿತವಾಗಿ ನೀಡಲಾಗುತ್ತಿದ್ದೆ. ಈ ಸೌಲಭ್ಯ ಜಿಲ್ಲೆ ಜನರು ಸದುಪಯೋಗ ಪಡೆಯಬೇಕು ಎಂದು ದಾವಣಗೆರೆ ಕ್ಷೇತ್ರ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ, ಜಿಲ್ಲಾ ಪಂಚಾಯಿತಿ, ಹೊನ್ನಾಳಿ ನ್ಯಾಮತಿ ತಾಲೂಕು ಪಂಚಾಯಿತಿ ವತಿಯಿಂದ ಗುರುವಾರ ಆಯೋಜಿಸಿದ್ದ ನರೇಗಾ ವೈಯಕ್ತಿಕ ಫಲಾನುಭವಿಗಳ ಕಾಮಗಾರಿಗಳ ಆದೇಶ ವಿತರಣೆ, ಸಂಜೀವಿನಿ ಮಾಸಿಕ ಸಂತೆ, ಆರೋಗ್ಯ ಮೇಳ ಮತ್ತು ರಕ್ತದಾನ ಶಿಬಿರ, 2024-25ನೇ ಸಾಲಿನ ಗ್ರಾಮ ಪಂಚಾಯಿತಿ ವಿಶೇಷ ಸಾಧಕರಿಗೆ ಸನ್ಮಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಮಹಿಳೆಯರು ಕೈಗೊಂಡಿರುವ ಸ್ವಉದ್ಯೋಗ ಯೋಜನೆಗಳ ಸಂಘಗಳಿಗೆ ಹೆಚ್ಚಿನ ಆದ್ಯತೆ ಕೊಡುವ ಮೂಲಕ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ. ಕಸೂತಿ ಉತ್ಪಾದನೆಗೆ ವಿದೇಶದಲ್ಲಿ ಮಾರುಕಟ್ಟೆ ಸಿಗುತ್ತಿದೆ. ಇದರಿಂದ ನಾವು ನಮ್ಮಲ್ಲಿ ಕೆಲಸ ಮಾಡಿದಂತಾಗುತ್ತದೆ. ನಿಮ್ಮಗಳ ಆರೋಗ್ಯ ಕಾಪಾಡಿಕೊಳ್ಳಲು ಯೋಗ, ಪ್ರಾಣಾಯಾಮ ಮತ್ತು ವಾಯುವಿಹಾರ ಮಾಡಬೇಕು ಎಂದರು.

ಕ್ಷೇತ್ರ ಶಾಸಕ ಡಿ.ಜಿ.ಶಾಂತನಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಳ್ಳಿ ಹಳ್ಳಿಗಳಲ್ಲಿ ರಸ್ತೆಗಳನ್ನು ಸರಿಪಡಿಸಬೇಕು. ನ್ಯಾಮತಿ ಹೊನ್ನಾಳಿಯಲ್ಲಿ 500 ಜನಸಂಖ್ಯೆ ಇರುವ ಹಳ್ಳಿ ಹಳ್ಳಿಗೂ ರಸ್ತೆಗಳನ್ನು ನಿರ್ಮಾಣ ಮಾಡಬೇಕು. ಕೇಂದ್ರ ಸರ್ಕಾರ ಸೆಟಲೈಟ್‌ ಮೂಲಕ ಇಡೀ ಭಾರತವನ್ನೇ ಸರ್ವೇ ಮಾಡುವರು. ಎಲ್ಲಾದರೂ ಖನಿಜ ಮತ್ತು ಚಿನ್ನದ ನಿಕ್ಷೇಪ ಕಂಡುಬಂದಲ್ಲಿ ಆ ಜಾಗದಲ್ಲಿ ಸರ್ವೇ ಮಾಡುತ್ತಾರೆ ಎಂದರು.

ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಡಾ.ಸುರೇಶ್‌ ಜಿ. ಇಟ್ನಾಳ್‌ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದವರು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಗಳನ್ನು ಸಾರ್ವಜನಿಕರು ಸದುಪಯೋಗ ಪಡೆಯಬೇಕು. ಬಡತನ ರೇಖೆಯಲ್ಲಿದ್ದ ಜನರಿಗೆ ಅಧಿಕಾರಿಗಳು ಮನೆ ನಿರ್ಮಾಣ ಮಾಡಿಸಿಕೊಡಬೇಕು. ನಾವು ನರೇಗಾ ಬಗ್ಗೆ ತರಬೇತಿ ನೀಡುತ್ತಿದ್ದೇವೆ. ಸ್ವಚ್ಛ ಬಾರತದಲ್ಲಿ ಹೊನ್ನಾಳಿ, ನ್ಯಾಮತಿ ಪಟ್ಟಣಗಳು ಶೇ.90ರಷ್ಟು ಸ್ವಚ್ಛತೆ ಕಾಪಾಡಿಕೊಂಡಿವೆ ಎಂದರು.

ನ್ಯಾಮತಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಎಚ್‌.ವಿ.ರಾಘವೇಂದ್ರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಡಿ.ಜಿ.ವಿಶ್ವನಾಥ, ಶಿವರಾಮ ನಾಯ್ಕ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಲಲಿತಾ ಪ್ರಾರ್ಥಿಸಿ, ಪ್ರಕಾಶ್‌ ಎಂ.ಆರ್‌. ಸ್ವಾಗತಿಸಿದರು. ಜಯಪ್ಪ ನಿರೂಪಿಸಿ ವಂದಿಸಿದರು.

- - -

(ಕೋಟ್‌) ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಕಂದಾಯ ವಸೂಲಾತಿಯಲ್ಲಿ ಹೊನ್ನಾಳಿ ಪ್ರಥಮ ಸ್ಥಾನದಲ್ಲಿದ್ದರೆ, ನ್ಯಾಮತಿ ದ್ವಿತೀಯ ಸ್ಥಾನ ಪಡೆದಿದೆ. ಈ ಹಿನ್ನೆಲೆ ಅವಳಿ ತಾಲೂಕುಗಳಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳು ಮಾಡಿರುವ ಸಾಧನೆಗಳನ್ನು ಗುರುತಿಸಿ, ಗೌರವಿಸಲಾಗುತ್ತಿದೆ

- ಡಾ.ಪ್ರಭಾ ಮಲ್ಲಿಕಾರ್ಜುನ, ಸಂಸದೆ

- - -

(-ಫೋಟೋ)

Share this article