ಕನ್ನಡಪ್ರಭ ವಾರ್ತೆ ಕಡೂರು
ಕಡೂರು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳವಾರ ವಿವಿಧ ಸಾಂಸ್ಕೃತಿಕ ಘಟಕಗಳು ಮತ್ತು ಸ್ಪರ್ಧಾತ್ಮಕ ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಪರಿಕಲ್ಪನೆಯ ಕೊರತೆಯಿಂದ ಹೊಸದಾಗಿ ಕಾಲೇಜುಗಳನ್ನು ಆರಂಭಿಸಿ ಅನಾಥವಾಗಿಸುವುದಕ್ಕಿಂತ ಇರುವ ವ್ಯವಸ್ಥೆ ಬಲಗೊಳಿಸುವ, ಅಗತ್ಯವಿರುವಲ್ಲಿ ಸೌಲಭ್ಯ ಕಲ್ಪಿಸುವ ಕೆಲಸ ಆಗಬೇಕು. ವಾಣಿಜ್ಯ ವಿಭಾಗದಲ್ಲಿ ರೀಟೇಲ್ ಶಿಕ್ಷಣ, ಆನ್‌ಲೈನ್ ಉದ್ಯಮ, ಸ್ಟಾರ್ಟ್‌ಅಪ್‌ಗಳ ಮೂಲಕ ಬದುಕು ಕಟ್ಟಿಕೊಳ್ಳುವ ರೀತಿಯ ಬೋಧನಾ ಕ್ರಮಗಳ ಕಲಿಕೆಗೆ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.ರಾಜ್ಯ ಸರ್ಕಾರವು ವಿದೇಶೀ ವಿಶ್ವವಿದ್ಯಾಲಯಗಳ ಪದವಿಗಳು ಇಲ್ಲಿಯೇ ಲಭ್ಯವಾಗಬೇಕು ಎನ್ನುವ ಉದ್ದೇಶದಿಂದ ಹಮ್ಮಿಕೊಂಡ ಯೋಜನೆಗಳ ಅಂಗವಾಗಿ ಈಗಾಗಲೇ ಬೆಂಗಳೂರಿನಲ್ಲಿ ಬ್ರಿಟನ್‌ನ ಇಂಪೀರಿಯಲ್ ರೀಸರ್ಚ್ ವಿವಿ, ಲಿವರ್‌ಪೂಲ್ ವಿವಿಗಳು ಪದವಿ ತರಗತಿಗಳನ್ನು ಆರಂಭಿಸಿವೆ. ಮುಂದಿನ ವರ್ಷದ ಹೊತ್ತಿಗೆ ಮ್ಯಾಂಚೆಸ್ಟರ್ ವಿವಿ ಕೂಡಾ ಹಬ್ ಆರಂಭಿಸಲಿದೆ. ವಿವಿಧ ಯೋಜನೆಗಳಲ್ಲಿ ರಾಜ್ಯದ 6 ವಿವಿಗಳ ತಲಾ 5 ವಿದ್ಯಾರ್ಥಿಗಳು ಈಸ್ಟ್ ಲಂಡನ್‌ನ ವಿವಿಧ ಕಾಲೇಜುಗಳಿಗೆ ಸರ್ಕಾರದ ವತಿಯಿಂದ ಉಚಿತವಾಗಿ ಭೇಟಿ ನೀಡಿ ತಮ್ಮ ಅನುಭವವನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಕಡೂರು ಶಾಸಕರು ಕೋರಿರುವ ಜಾಗದ ವಿಚಾರವಾಗಿ ಅರಣ್ಯ ಸಚಿವರ ಜತೆ ಮಾತನಾಡುತ್ತೇನೆ. ಕಾಲೇಜು ಕಟ್ಟಡವನ್ನು ಬಹುಮಹಡಿ ಕಟ್ಟಡವಾಗಿ ನೂತನ ಮತ್ತು ಭವಿಷ್ಯದ ದೃಷ್ಟಿಯ ವಿನ್ಯಾಸದಲ್ಲಿ ರೂಪಿಸಲಾಗುವುದು. ಹೆಣ್ಣುಮಕ್ಕಳು ಉನ್ನತ ಶಿಕ್ಷಣವನ್ನು ಮೊಟಕುಗೊಳಿಸಬಾರದು ಎನ್ನುವ ಉದ್ದೇಶದಿಂದ ಅಜೀಂ ಪ್ರೇಂಜಿ ಫೌಂಡೇಷನ್ ಮೂಲಕ ದೀಪಿಕಾ ವಿದ್ಯಾರ್ಥಿ ವೇತನ ಆರಂಭಿಸಿದ್ದು ಎಸ್‌ಎಸ್‌ಎಲ್‌ಸಿ ಮತ್ತು ಪಿಯು ತರಗತಿಗಳನ್ನು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿನಿಯರಿಗೆ ಪದವಿ ಮುಗಿಯುವವರೆಗೆ ವಾರ್ಷಿಕ ತಲಾ 30ಸಾವಿರ ರು. ಹಣ ನೀಡಲಾಗುತ್ತದೆ.