ಕನ್ನಡಪ್ರಭ ವಾರ್ತೆ ಹನೂರು
ವನ್ನಿಕುಲ ಕ್ಷತ್ರೀಯ ಹಾಗೂ ಪಡಯಾಚಿ ಎರಡು ಕೂಡ ಒಂದೇ ಸಮುದಾಯದ ಹೆಸರಾಗಿರುವುದರಿಂದ ಸರ್ಕಾರ ಇದ್ದನ್ನು ಬೇರೆ ಬೇರೆ ಹೆಸರು ಎಂದು ಪರಿಗಣಿಸದೆ ಎರಡು ಕೂಡ ಒಂದೇ ಸಮಾಜದ ಹೆಸರೆಂದು ಪರಿಗಣಿಸಬೇಕು ಎಂದು ರಾಜ್ಯ ಕರುನಾಡು ವನ್ನಿಕುಲ ಕ್ಷತ್ರಿಯ ಸಂಘದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆಗ್ರಹಿಸಿದರು. ಹನೂರು ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ಸಭಾಂಗಣದಲ್ಲಿ ಆಯೋಜನೆ ಮಾಡಿದ್ದ ರಾಜ್ಯ ಕರುನಾಡು ವನ್ನಿಕುಲ ಕ್ಷತ್ರೀಯ ಸಂಘ ಹಾಗೂ ಜಿಲ್ಲಾ ವನ್ನಿಕುಲ ಕ್ಷತ್ರೀಯ ಸಂಘದ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದರು.ವನ್ನಿಕುಲ ಕ್ಷತ್ರೀಯ ಸಮುದಾಯದ ಜನತೆಯ ಸಮಸ್ಯೆಯನ್ನು ಬಗೆಹರಿಸಲು ಕರುನಾಡು ರಾಜ್ಯ ವನ್ನಿಕುಲ ಕ್ಷತ್ರೀಯ ಸಂಘ ಸದಾ ಸಿದ್ದವಿದ್ದು. ರಾಜ್ಯದಲ್ಲಿರುವ ನಮ್ಮ ಸಮುದಾಯ ಪ್ರತಿಯೊಬ್ಬರಿಗೂ ಸೂಕ್ತ ಸಾಮಾಜಿಕ ನ್ಯಾಯ ದೊರಕಿಸುವ ವಿಚಾರದಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ ಅಲ್ಲದೆ ಸಮುದಾಯದವರು ತಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಸಮಾಜದ ಮುಖ್ಯ ವಾಹಿನಿಗೆ ಕರೆ ತರಬೇಕು ಎಂದರು. ವನ್ನಿಕುಲ ಕ್ಷತ್ರೀಯ ಹಾಗೂ ಪಡಯಾಚಿ ಎರಡು ಕೂಡ ಒಂದೇ ಸಮುದಾಯದ ಹೆಸರಾಗಿರುವುದರಿಂದ ಸರ್ಕಾರ ಇದ್ದನ್ನು ಬೇರೆ ಬೇರೆ ಹೆಸರು ಎಂದು ಪರಿಗಣಿಸಬಾರದು ಎಂದು ತಿಳಿಸಿದರು. ಬಳಿಕ ಚಾಮರಾಜನಗರ ಜಿಲ್ಲಾ ವನ್ನಿಕುಲ ಕ್ಷತ್ರೀಯಾ ಸಂಘದ ಅದ್ಯಕ್ಷ ಪೆದ್ದನಪಾಳ್ಯ ಮಣಿ ಮಾತನಾಡಿ, ವನ್ನಿಕುಲ ಕ್ಷತ್ರೀಯ ಸಮಾಜ ಸ್ವಲ್ಪ ತಲೆ ಎತ್ತಿ ಬದುಕಬೇಕಾದರೆ ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ಕೊಡಿಸಿ ಏಕೆಂದರೆ ಶಿಕ್ಷಣವನ್ನು ಹೊರೆತು ಪಡಿಸಿ ನಮ್ಮ ಸಮಾಜವನ್ನು ಮುಂದೆತರಲು ಸಾಧ್ಯವೆ ಇಲ್ಲ ಮುಂದೆ ಬರುವ ಸವಾಲಿನ ದಿನಗಳನ್ನು ಎದುರಿಸಲು ಉತ್ತಮ ಶಿಕ್ಷಣ ಕೊಡಿಸಿ ಎಂದರು.ಈ ವೇಳೆ ಮೈಸೂರು ಭಾಗದಲ್ಲಿ ವನ್ನಿಕುಲ ಕ್ಷತ್ರಿಯಾ ಸಮುದಾಯದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಹಾಸ್ಟಲ್ ವ್ಯವಸ್ಥೆ ನಿರ್ಮಾಣ ಮಾಡಲು ಸ್ಥಳೀಯ ಮುಖಂಡರು ರಾಜ್ಯ ವನ್ನಿಕುಲಕ್ಷತ್ರೀಯಾ ಸಂಘದ ಪಧಾಧಿಕಾರಿಗಳನ್ನು ಒತ್ತಾಹಿಸಿದರು. ಈ ವೇಳೆ ರಾಜ್ಯ ಉಪಾದ್ಯಕ್ಷ ರವೀಂದ್ರಕುಮಾರ್, ವನ್ನಿಕುಲ ಕ್ಷತ್ರಿಯ ಸಮುದಾಯ ವಡೆಕಹಳ್ಳ ಸಂಘದ ಅದ್ಯಕ್ಷ ರಂಗಸ್ವಾಮಿ, ಮುಖಂಡರಾದ ಕಾಳೇಗೌಡ, ನಟರಾಜು, ಸೋಮಶೇಖರ್, ರಾಜೇಶ್ ಮತ್ತಿತರರಿದ್ದರು.