ಪ್ರವಾಸಿ ಮಂದಿರ ನೂತನ ಕಟ್ಟಡ ನಿರ್ಮಿಸುವ ಕಾಮಗಾರಿ ಭೂಮಿಪೂಜೆ
ನಾಗಮಂಗಲಕ್ಕೆ ಓಡಿಸುವುದಾಗಿ ಹೇಳಿಕೆ ನೀಡಿದ್ದ ಮಾಜಿ ಶಾಸಕ ಎನ್.ಎಚ್. ಶಿವಶಂಕರ ರೆಡ್ಡಿ ಹೇಳಿಕೆಗೆ ತಿರುಗೇಟು ನೀಡಿದ ಅವುರ, ರಾಜಕೀಯದಲ್ಲಿ ಕೇವಲ ಆರೋಪ-ಪ್ರತ್ಯಾರೋಪಗಳನ್ನು ಮಾಡುವುದಕ್ಕಿಂತ, ಜನರ ದಿನನಿತ್ಯದ ಸಮಸ್ಯೆಗಳಿಗೆ ಸ್ಪಂದಿಸುವುದು ಜನ ನಾಯಕನ ಲಕ್ಷಣಗಳು. ಅಭಿವೃದ್ಧಿ ಕೆಲಸಗಳನ್ನು ಮಾಡುವುದು ನನ್ನ ಮುಖ್ಯ ಕಾರ್ಯವೈಖರಿಯಾಗಿದೆ. ಮಾತುಗಳು ಮರೆತುಹೋಗಬಹುದು, ಆದರೆ ಜನರಿಗಾಗಿ ಮಾಡಿದ ಕೆಲಸಗಳು ಮಾತ್ರ ಸದಾ ನೆನಪಿನಲ್ಲಿ ಉಳಿಯುತ್ತವ " ಎನ್ನುವ ಮಾತು ನಿಜವಾದ ನಾಯಕನ ಲಕ್ಷಣವನ್ನು ತೋರಿಸುತ್ತದೆ ಎಂದು ತಿಳಿಸಿದರು.
ಮಾಜಿ ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಮತ್ತು ಅವರ ಪಟಾಲಂಗಳು ಹೊಲಸು ರಾಜಕೀಯ ಮಾಡುವುದರಲ್ಲಿ ಮಾತ್ರ ನಿಪುಣರು. ಜನರ ಸಮಸ್ಯೆಗೆ ಸ್ಪಂದಿಸುವ ಮನಸ್ಥಿತಿ ಅವರಲ್ಲಿಲ್ಲ. ಕಳೆದ 25 ವರ್ಷಗಳಲ್ಲಿ ಈ ವಿಧಾನಸಭಾ ಕ್ಷೇತ್ರದಲ್ಲಿ ಕಾಣದ ಅಭಿವೃದ್ಧಿಯನ್ನು ಮಾಡುತ್ತಿರುವುದರಿಂದ ಸಹಿಸಲಾರದೆ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೂ ಒಂದಲ್ಲ ಒಂದು ರೀತಿಯಲ್ಲಿ ಅಡ್ಡಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ.ಯಾರು ಎಷ್ಟೇ ಅಡೆ-ತಡೆಗಳು ತಂದರೂ ಮುಂದಿನ ದಿನಗಳಲ್ಲಿ ಉತ್ತಮ ಅತ್ಯಾಧುನಿಕ ನಗರಸಭೆ ಕಾರ್ಯಾಲಯ, ಸರ್ಕಾರಿ ಬಸ್ ನಿಲ್ದಾಣ ಮತ್ತು ಖಾಸಗಿ ಬಸ್ ನಿಲ್ದಾಣವನ್ನು ಆಧುನಿಕ ರೀತಿಯಲ್ಲಿ ನಿರ್ಮಾಣ ಮಾಡಲಾಗುವುದು, ಅದೇ ರೀತಿಯಲ್ಲಿ ಹಳ್ಳಿಗಳಿಗೆ ಸುಮಾರು 60-70 ಹೈಮಾಸ್ಕ್ ಲೈಟುಗಳ ಅಳವಡಿಕೆಗೆ ಅನುಮೋದನೆ ಮಾಡಿಸಿಕೊಂಡಿದ್ದೇನೆ. ಹಾಗೂ ತಾಲೂಕಿಗೆ 15ಸೇತುವೆಗಳ ನಿರ್ಮಾಣ ಕಾಮಗಾರಿಯನ್ನು ತರುವುದಾಗಿ ತಿಳಿಸಿದರು.ಇಲ್ಲಿಯವರವಿಗೆ ನಡೆದಿರುವ ಅಭಿವೃದ್ಧಿ ಕಾರ್ಯಗಳು ಒಂದಾದರೆ ಇನ್ನು ಒಂದು ತಿಂಗಳೊಳಗೆ ತಾಲೂಕಿನಲ್ಲಿ 100 ಕೋಟಿಯ ಅನುದಾನದೊಂದಿಗೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಇನ್ನು ಕೇವಲ 1ವರ್ಷದಲ್ಲಿ ನಮ್ಮ ತಾಲೂಕಿಗೆ ಎತ್ತಿನಹೊಳೆ ನೀರು ಬರುವುದು ಖಚಿತ. 25ವರ್ಷಗಳು ಶಾಸಕರಾಗಿ ಅಧಿಕಾರದಲ್ಲಿದ್ದೆ ಎಂಬುದು ಮುಖ್ಯವಲ್ಲ. ಕ್ಷೇತ್ರದ ಜನತೆಗೆ ಮತ್ತು ಕ್ಷೇತ್ರಕ್ಕೆ ಎಷ್ಟರ ಮಟ್ಟಿಗೆ ಸಾಧನೆ ಮಾಡಿದ್ದೀವೆ ಎಂಬುದು ಮುಖ್ಯವಾಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯರು ನಿವೃತ್ತ ಅಪರ ಜಿಲ್ಲಾಧಿಕಾರಿಗಳಾದ ಬಾಬಣ್ಣ, ತಾಲೂಕು ದಂಡಾಧಿಕಾರಿ ಅರವಿಂದ್.ಕೆ.ಎಂ. ನಗರಸಭೆ ಪೌರಾಯರು ಕೆ.ಜಿ.ರಮೇಶ್, ಲೊಕೋಪಯೋಗಿ ಇಲಾಖೆಯ ಎಇಇ ಅನಿಲ್, ವಾಣಿಜ್ಯೋದ್ಯಮಿ ಬಿ.ಆರ್.ಶ್ರೀನಿವಾಸಮೂರ್ತಿ, ಇಸ್ತೂರಿ ಸತಿಶ್, ಎ.ಎನ್.ವೇಣುಗೋಪಾಲ್ ಇದ್ದರು.