ಬಂಡೀಪುರದೊಳಗೆ ರೈತ ಮುಖಂಡರ ಕಾರು ಅಕ್ರಮ ಪ್ರವೇಶ: ವಾಹನ ಜಪ್ತಿ

KannadaprabhaNewsNetwork |  
Published : Aug 12, 2026, 02:00 AM IST
 | Kannada Prabha

ಸಾರಾಂಶ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರೈತ ಮುಖಂಡರು ಅತಿಕ್ರಮವಾಗಿ ಖಾಸಗಿ ಕಾರು ತೆಗೆದುಕೊಂಡು ಹೋಗಿದ್ದು, ಈ ಸಂಬಂಧ ಅರಣ್ಯ ಇಲಾಖೆಯು ಮುಖಂಡರ ಕಾರುಗಳನ್ನು ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಕೇಸು ದಾಖಲು ಮಾಡಲು ಅರಣ್ಯ ಇಲಾಖೆ ಮುಂದಾಗಿದೆ ಎಂದು ತಿಳಿದು ಬಂದಿದೆ.

ಕಲ್ಕೆರೆ ಮಾರುಗುಡಿಗೆ ಅನುಮತಿ ಪಡೆಯದೇ ಖಾಸಗಿ ವಾಹನದಲ್ಲಿ ಯಾನ

---

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರೈತ ಮುಖಂಡರು ಅತಿಕ್ರಮವಾಗಿ ಖಾಸಗಿ ಕಾರು ತೆಗೆದುಕೊಂಡು ಹೋಗಿದ್ದು, ಈ ಸಂಬಂಧ ಅರಣ್ಯ ಇಲಾಖೆಯು ಮುಖಂಡರ ಕಾರುಗಳನ್ನು ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಕೇಸು ದಾಖಲು ಮಾಡಲು ಅರಣ್ಯ ಇಲಾಖೆ ಮುಂದಾಗಿದೆ ಎಂದು ತಿಳಿದು ಬಂದಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಿಭಾಗದ ಐನೋರು ಮಾರಿಗುಡಿ (ಕಲ್ಕರೆ) ವಲಯದಲ್ಲಿನ ಮಾರಮ್ಮನ ದೇವಸ್ಥಾನಕ್ಕೆ ನೂರಾರು ಮಂದಿ ಸಾರ್ವಜನಿಕರು ಟ್ರ್ಯಾಕ್ಟರ್‌ನಲ್ಲಿ ಹಾಗೂ ರೈತ ಮುಖಂಡರು 2 ಕಾರುಗಳಲ್ಲಿ ಅರಣ್ಯ ಇಲಾಖೆ ಅನುಮತಿ ಇಲ್ಲದೆ ಪರಿಸರ ಸೂಕ್ಷ್ಮ ವಲಯಕ್ಕೆ ಹೋಗಿರುವುದು ಖಚಿತವಾದ ಬಳಿಕ ಟ್ರ್ಯಾಕ್ಟರ್‌ಗಳಲ್ಲಿ ಹೋಗಿದ್ದವರನ್ನು ಅರಣ್ಯ ಇಲಾಖೆ ಬಿಟ್ಟು ಕಳುಹಿಸಿದೆ.

ಆದರೆ ರೈತ ಮುಖಂಡರಿಗೆ ಸೇರಿದೆ ಎನ್ನಲಾದ ಹಾಗೂ ರೈತ ಸಂಘದ ನಾಮಫಲಕ ಇರುವ ಕೆಎ ೦೯ ಎಂಎಂ ೯೧೦೨ ಮತ್ತು ಕೆಎ ೦೪ ಎಂಜಿ ೮೩೮೩ ನಂಬರಿನ ಕಾರುಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆಯಲಾಗಿದೆ.

ಆದರೆ ಸ್ಥಳದಲ್ಲಿದ್ದ ರೈತ ಸಂಘದ ಜಿಲ್ಲಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ, ತಾಲೂಕು ಅಧ್ಯಕ್ಷ ಗಣೇಶ್‌ ಹಾಗೂ ಮುಖಂಡ ಲೋಕೇಶ್‌ ಸೇರಿದಂತೆ ಮತ್ತಿತರ ಮುಖಂಡರು ಅರಣ್ಯ ಇಲಾಖೆ ಅನುಮತಿ ಇಲ್ಲದೆ, ಅಕ್ರಮವಾಗಿ ಕಾರು ಸಮೇತ ಹೋಗಿದ್ದಾರೆ. ವಾಪಾಸ್‌ ಬರುವಾಗ ಅರಣ್ಯ ಇಲಾಖೆ ಸಿಬ್ಬಂದಿ ಪ್ರಶ್ನಿಸಿದಾಗ, ಅವರೊಂದಿಗೆ ಮಾತಿನ ಚಕಮಕಿ ಏರ್ಪಟ್ಟು ರೈತ ಮುಖಂಡರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟಿಸಿದ್ದಾರೆ. ಪರಿಣಾಮ ಇಲಾಖೆಯು ಕಾರುಗಳನ್ನು ಜಪ್ತಿ ಮಾಡಿ, ಮದ್ದೂರು ವಲಯ ಅರಣ್ಯ ಕಚೇರಿ ಆವರಣದಲ್ಲಿ ತಂದು ನಿಲ್ಲಿಸಿದೆ.

ಹೆಡಿಯಾಲ ಎಸಿಎಫ್‌ ಡಿ. ಪರಮೇಶ್‌ ‘ಕನ್ನಡಪ್ರಭ’ದೊಂದಿಗೆ ಮಾತನಾಡಿ, ರೈತ ಮುಖಂಡರಿಗೆ ಸೇರಿದ 2 ಕಾರು ಸೀಜ್‌ ಮಾಡಲಾಗಿದೆ. ಅವರ ಮೇಲೆ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಕ್ರಮ ಜರುಗಿಸಲಾಗುವುದು ಎಂದರು.

---

ಐನೋರು ಮಾರಿಗುಡಿ ವಲಯಕ್ಕೆ ಅಕ್ರಮವಾಗಿ ಕಾರಿನ ಸಮೇತ ಕೆಲ ರೈತ ಮುಖಂಡರು ಹೋಗಿದ್ದಾರೆ. 2 ಕಾರು ಸೀಜ್‌ ಮಾಡಲಾಗಿದೆ. ಈ ಬಗ್ಗೆ ಅಕ್ರಮ ಪ್ರವೇಶ ಸಂಬಂಧ ಪ್ರಕರಣ ದಾಖಲಿಸಲಾಗುವುದು.

- ಎಲ್. ನಂದೀಶ್‌, ಡಿಸಿಎಫ್‌, ಬಂಡೀಪುರ

-

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ: ಡಿ.ಸಿ.ತಮ್ಮಣ್ಣ ತೀವ್ರ ವಿರೋಧ
ಮನೆ ದೇವರ ದರ್ಶನ ಪಡೆದ ಸಚಿವ ಚಲುವರಾಯಸ್ವಾಮಿ ದಂಪತಿ