ಕನ್ನಡಪ್ರಭ ವಾರ್ತೆ ಕೋಲಾರಸರ್ಕಾರಿ ಕಾಲೇಜುಗಳು ಪರೀಕ್ಷೆಗಳ ನಿರ್ವಹಣೆಯಲ್ಲಿ ಮಾದರಿಯಾಗಿವೆ. ಆದರೆ ಕೆಲವು ಖಾಸಗಿ ಕಾಲೇಜುಗಳು ನೀತಿ ನಿಯಮ ಉಲ್ಲಂಘಿಸುತ್ತಿರುವ ಹಿನ್ನೆಲೆಯಲ್ಲಿ ಅವ್ಯವಸ್ಥೆ ಉಂಟಾಗುತ್ತಿದೆ ಎಂದು ಸರ್ಕಾರಿ ಮಹಿಳಾ ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕ ರಘು ಕುಮಾರ್ ಹೇಳಿದರು.ನಗರದ ಬೆಂಗಳೂರು ಉತ್ತರ ವಿವಿ ಸೆನೆಟ್ ಸದಸ್ಯ ಜಯದೀಪ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕೆಲವು ಖಾಸಗಿ ಕಾಲೇಜುಗಳು ತಮ್ಮ ಕಾಲೇಜಿಗೆ ಉತ್ತಮ ಫಲಿತಾಂಶ ಬರಲೆಂದು ಪರೀಕ್ಷಾ ನೀತಿಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಟೀಕಿಸಿದರು.
ಉತ್ತಮ ಫಲಿತಾಂಶ ಬಂದರೆ ಮುಂದೆ ಹೆಚ್ಚು ವಿದ್ಯಾರ್ಥಿಗಳು ತಮ್ಮ ಕಾಲೇಜಿನಲ್ಲಿ ಪ್ರವೇಶಾತಿ ಪಡೆಯುತ್ತಾರೆ ಎಂಬ ವ್ಯಾಪಾರಿ ಮನೋವೃತ್ತಿ ಅಳವಡಿಸಿಕೊಳ್ಳುವ ಮೂಲಕ ಖಾಸಗಿ ಕಾಲೇಜುಗಳು ಶೈಕ್ಷಣಿಕ ವ್ಯವಸ್ಥೆಗಳಿಗೆ ಮಸಿ ಬಳಿಯುತ್ತಿವೆ. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಂತ ಕಾಳಜಿ ಖಾಸಗಿ ಕಾಲೇಜುಗಳಿಗೆ ಇರಬೇಕು ಎಂದು ಹೇಳಿದರು.
ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರತಿವರ್ಷವು ಒಂದೇ ತನಿಖಾ ತಂಡಗಳನ್ನು ಕಾಲೇಜಿಗೆ ಹಾಕಿಸಿಕೊಂಡು ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮಾಸ್ ಕಾಫಿ ಮಾಡಿಸಿ ಶೇ.೧೦೦ ರಷ್ಟು ಫಲಿತಾಂಶ, ರ್‍ಯಾಂಕ್‌ಗಳನ್ನುಗಳಿಸುವುದು ಜೊತೆಗೆ ಮಾರ್ಕ್ಸ್ ಕಾರ್ಡ್‌ಗಳ ಹಗರಣ, (ಹ್ಯಾಕ್) ಸೇರಿದಂತೆ ಹಲವಾರು ಅಕ್ರಮಗಳಿಗೆ ಅವಕಾಶಗಳನ್ನು ಕಲ್ಪಿಸುವುದು ಹೆಚ್ಚಾಗುತ್ತಿರುವುದು ಕಳವಳಕಾರಿ ಎಂದು ಹೇಳಿದರು.ಮೌಲ್ಯ ಮಾಪನದಲ್ಲಿ ಅಕ್ರಮ
ಈ ಸಂದರ್ಭದಲ್ಲಿ ಮಹಿಳಾ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಜಮೀರ್ ಅಹ್ಮದ್ ಇದ್ದರು.